ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಗೇನೂ ಕಮ್ಮಿ ಇಲ್ಲ. ಬೆಂಗಳೂರಲ್ಲಿ ಮಳೆ ಬಂದ್ರಂತೂ ಮುಗೀತು, ರಸ್ತೆ ಯಾವುದು ಗುಂಡಿ ಯಾವುದು ಅನ್ನೋದೇ ಕಾಣೋದಿಲ್ಲ. ಈ ರಸ್ತೆ ಗುಂಡಿಗಳಿಂದ ಅದೆಷ್ಟೋ ಅಪಘಾತಗಳು ಸಂಭವಿಸಿವೆ. ಅದೆಷ್ಟೋ ಜನರ ಜೀವವನ್ನೇ ಬಲಿ ಪಡೆದಿವೆ ಈ ರಸ್ತೆ ಗುಂಡಿಗಳು. ಇನ್ನು ರಸ್ತೆ ಗುಂಡಿ ಮುಚ್ಚುವ ಬಗ್ಗೆ ಅನೇಕ ಬಾರಿ ಹೈಕೋರ್ಟ್ BBMPಯನ್ನು ತರಾಟೆಗೆ ತೆಗೆದುಕೊಂಡಿದೆ.
ಇನ್ನು, ಆಗ BBMP ಮುಚ್ಚೋ ನಾಟಕ ಆಡುತ್ತೆ. ಅದು ಒಂದೇ ವಾರಕ್ಕೆ ಕಿತ್ತೋಗುತ್ತೆ. ರಸ್ತೆ ಗುಂಡಿಗೆ ಅದೆಷ್ಟೋ ವಾಹನ ಸವಾರರು ಬಿದ್ದು ಪ್ರಾಣ ಕಳೆದುಕೊಂಡ್ರೆ, ಇನ್ನೂ ಕೆಲವರು ಕೈಕಾಲು ಮುರಿದುಕೊಳ್ತಿದ್ದಾರೆ. ರಸ್ತೆ ಗುಂಡಿಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ. ಈಗ ಗೂಗಲ್‍ನಲ್ಲೂ ಬೆಂಗಳೂರಿನ ಮರ್ಯಾದೆ ಹೋಗಿದೆ. ಗೂಗಲ್ ಬೆಂಗಳೂರಿನ ಗುಂಡಿಗೆ 5 ಸ್ಟಾರ್ ಕೊಟ್ಟಿದೆಯಂತೆ. ಸರ್ಕಾರ ಎಷ್ಟೇ ಗುಂಡಿಗಳನ್ನು ಮುಚ್ಚೋ ಕೆಲಸ ಮಾಡಿದ್ರೂ ಪ್ರಯೋಜ ಆಗುತ್ತಿಲ್ಲ. ಕಳಪೆ ಕಾಮಗಾರಿಯಿಂದ ಮತ್ತೆ ಮತ್ತೆ ಗುಂಡಿ ಸಮಸ್ಯೆಗಳು ಕಾಡುತ್ತಿವೆ. ಬೆಂಗಳೂರಿನ ಐತಿಹಾಸಿಕ ಪಟ್ಟಿಗಳಲ್ಲಿ ಗುಂಡಿಯೊಂದು ಕಾಣಿಸಿಕೊಂಡಿದೆ.