Wednesday, January 22, 2025

PFI ಕಾರ್ಯಕರ್ತ ಶಾಹಿದ್ ಖಾನ್ ಮನೆಯಲ್ಲಿ 20 ಲಕ್ಷ ರೂ ಪತ್ತೆ.!

ಶಿವಮೊಗ್ಗ: ಶಿವಮೊಗ್ಗದಲ್ಲಿ ಪಿಎಫ್​ಐ ಕಾರ್ಯಕರ್ತ ಶಾಹಿದ್ ಖಾನ್ ನನ್ನು ಎನ್ಐಎ(ರಾಷ್ಟ್ರೀಯ ತನಿಖಾ ದಳ) ದಾಳಿ ನಡೆಸಿ ವಶಕ್ಕೆ ಪಡೆದಿದೆ.

ದಾಳಿ ವೇಳೆ ಶಾಹೀದ್ ಖಾನ್ ಮನೆಯಲ್ಲಿ 20 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದ್ದು, ಎನ್​ಐಎ ವಶಕ್ಕೆ ಪಡೆಯಲಾಗಿದೆ. ಶಾಹಿದ್ ಖಾನ್ ಮೇಲೆ ಒಟ್ಟು 11 ಕೇಸುಗಳು ದಾಖಲಾಗಿವೆ. ಕ್ರಿಮಿನಲ್ ಗೂಂಡಾ, ರೌಡಿ ಶೀಟರ್ ಪ್ರಕರಣ ಕೂಡ ದಾಖಲಾಗಿದ್ದು, 2012ರಲ್ಲಿ ಮೊದಲ ಪ್ರಕರಣ ಇವರ ವಿರುದ್ಧ ಜಡಿಯಲಾಗಿತ್ತು.

ಶಾಹಿದ್ ಖಾನ್ ವಿರುದ್ಧ ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಅಪಘಾತದ ವಿಚಾರವಾಗಿ ಕೇಸು ದಾಖಲಾಗಿತ್ತು. 2015 ರಲ್ಲಿ ಪಿಎಫ್​​ಐ ಗಲಾಟೆಗೆ ಸಂಬಂಧಿಸಿದಂತೆ 8 ಪ್ರಕರಣಗಳು ದಾಖಲಾಗಿತ್ತು. ಕೋಟೆ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿತ್ತು. ದೊಡ್ಡಪೇಟೆ ಠಾಣೆಯಲ್ಲಿ 7 ಪ್ರಕರಣಗಳು ದಾಖಲಾಗಿತ್ತು. ಶಾಹಿದ್ ಖಾನ್ ಇತರೆ 2 ಪ್ರಕರಣಗಳು ದಾಖಲಾಗಿದ್ದವು.

ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಪ್ರಕರಣದಲ್ಲಿಯೂ ಶಾಹಿದ್ ಖಾನ್ ಭಾಗಿಯಾಗಿರುವ ಬಗ್ಗೆ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಎನ್​ಐಐ ತನಿಖಾ ತಂಡ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

RELATED ARTICLES

Related Articles

TRENDING ARTICLES