Wednesday, January 22, 2025

ರಾಷ್ಟ್ರಪತಿಗಳು ದಸರಾ ಉದ್ಘಾಟನೆ ಮಾಡುತ್ತಿರುವುದು ಹೆಮ್ಮೆ ವಿಷಯ; ಯದುವೀರ್

ಮೈಸೂರು; ಸಾಂಸ್ಕೃತಿಕ ನಗರಿಯಲ್ಲಿ ದಸರಾ ಸಡಗರ ಜೋರಾಗಿದ್ದು, ಈ ಬಾರಿಯ ದಸರಾವನ್ನು ರಾಷ್ಟ್ರಪತಿಗಳು ಉದ್ಘಾಟನೆ ಮಾಡುತ್ತಿರುವುದು ಬಹಳ ವಿಶೇಷವಾಗಿದೆ.

ಈ ಬಗ್ಗೆ ರಾಜವಂಶಸ್ಥ ಯದುವೀರ್​ ಅವರು ಪ್ರತಿಕ್ರಿಯೆ ನೀಡಿದ್ದು, ಎರಡು ವರ್ಷದ ಬಳಿಕ ಈ ಬಾರಿ ಅದ್ದೂರಿ ದಸರಾ ಆಚರಣೆ ಮಾಡಲಾಗುತ್ತಿದೆ. ಈ ಬಾರಿಯ ದಸರೆಯನ್ನು ರಾಷ್ಟ್ರಪತಿಗಳು ಉದ್ಘಾಟನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಅರಮನೆಯಲ್ಲಿ ಎಂದಿನಂತೆ ಸಾಂಪ್ರದಾಯಿಕವಾಗಿ ಆಚರಿಸಲಾಗುವುದು, ಎರಡು ವರ್ಷದ ಬಳಿಕ ಜಂಬೂಸವಾರಿ ಅರಮನೆಯಿಂದ ಹೊರಗಡೆ ತೆರಳುತ್ತಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ಈ ಬಾರಿಯ ನಾಡಹಬ್ಬದಲ್ಲಿ ಜಂಬೂಸವಾರಿಯನ್ನು ಕಂಡು ಆನಂದದಿಂದ ಆಚರಿಸಬೇಕು ಎಂದು ರಾಜವಂಶಸ್ಥ ಯದುವೀರ್ ಹೇಳಿಕೆ ನೀಡಿದರು.

RELATED ARTICLES

Related Articles

TRENDING ARTICLES