Wednesday, January 22, 2025

ಶೀಘ್ರವೇ ಪೇ ಪಾರ್ಕಿಂಗ್ ಪಾಲಿಸಿ ಜಾರಿ : ತುಷಾರ್ ಗಿರಿನಾಥ್

ಬೆಂಗಳೂರು : ಶೀಘ್ರವೇ ಬೆಂಗಳೂರಿನಲ್ಲಿ ಪೇ ಪಾರ್ಕಿಂಗ್ ಪಾಲಿಸಿ ಜಾರಿಗೆ ಬರಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೇ & ಪಾರ್ಕಿಂಗ್ ಪಾಲಿಸಿ ಜಾರಿ ಮಾಡುವ ಸಲುವಾಗಿ ಹಲವು ಬಾರಿ ಚರ್ಚೆ ಮಾಡಲಾಗಿದೆ. ಈಗ ಎಲ್ಲವೂ ವ್ಯವಸ್ಥಿತವಾಗಿ ನೀತಿ ಜಾರಿಯಾಗುತ್ತಿದೆ. 2020ರಲ್ಲಿ ನಿಗದಿ ಮಾಡಲಾದ ಶುಲ್ಕವನ್ನೇ ಅಂತಿಗೊಳಿಸಲಾಗುವುದು. ಇದರ ಹೊರತಾಗಿ ಏರಿಯಾ ಹಾಗೂ ಜಾಗಗಳಿಗೆ ಅನುಗುಣವಾಗಿ ಶುಲ್ಕ ನಿಗಧಿಪಡಿಸಲಾಗುವುದು. A, B, C ಹೀಗೆ ಮೂರು ಹಂತವಾಗಿ ನಾವು ಶುಲ್ಕ ಪಾವತಿಗೆ ಅವಕಾಶ ಮಾಡಿಕೊಡಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES