Monday, December 23, 2024

ಶಂಕಿತ ಉಗ್ರರು ಕಾರ್ಯಾಚರಣೆ ನಡೆಸುತ್ತಿದ್ದ ಸ್ಥಳ ಮಹಜರು; ವಸ್ತುಗಳು ಪತ್ತೆ

ಶಿವಮೊಗ್ಗ; ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಸೆರೆ ಹಿನ್ನೆಲೆಯಲ್ಲಿ ಶಂಕಿತ ಉಗ್ರ ಯಾಸಿನ್ ಸಹಚರರು ಕಾರ್ಯಾಚರಣೆ ನಡೆಸುತ್ತಿದ್ದ ಜಾಗವನ್ನ ಪೊಲೀಸರು ಪರಶೀಲನೆ ನಡೆಸಿದ್ದಾರೆ.

ನಿನ್ನೆ ಐಸಿಸ್​ ಜತೆಗೆ ನೇರವಾಗಿ ನಂಟು ಹೊಂದಿದ್ದರು ಎಂದು ಮಂಗಳೂರು ಹಾಗೂ ಶಿವಮೊಗ್ಗ ಮೂಲದ ಇಬ್ಬರು ಶಂಕಿತ ಉಗ್ರರನ್ನ ಶಿವಮೊಗ್ಗ ಪೊಲೀಸರು ಬಂಧನ ಮಾಡಿದ್ದರು. ಈಗ ತುಂಗಾ ನದಿ ದಂಡೆಯ ಮೇಲೆ ಶಂಕಿತ ಎ1 ಆರೋಪಿ ಯಾಸಿನ್ ಬಾಂಬ್ ಟೆಸ್ಟ್ ನಡೆಸುತ್ತಿದ್ದ ಎಂದು​ ತನಿಖೆಯಲ್ಲಿ ಬಹಿರಂಗವಾಗಿದೆ.

ಹಳೆ ಗುರುಪುರದ ಎಸ್.ಟಿ.ಪಿ ಪ್ಲ್ಯಾಂಟ್ ಹಿಂಭಾಗದಲ್ಲಿ ಈ ಅಜ್ಞಾತ ಸ್ಥಳದಲ್ಲೇ ಟ್ರಯಲ್ ಬಾಂಬ್ ಯಾಸಿನ್ ಸ್ಫೋಟಿಸುತ್ತಿದ್ದ, ನಿನ್ನೆ ರಾತ್ರಿ ಈ ಜಾಗದಲ್ಲೇ ಎಫ್.ಎಸ್.ಎಲ್ ತಂಡ ಮಹಜರು ನಡೆಸಿದ್ದು, ಸ್ಪೋಟಕ್ಕೆ ಬಳಸುತ್ತಿದ್ದ ಕೆಲವು ವಸ್ತುಗಳು ಸ್ಥಳದಲ್ಲಿ ಪತ್ತೆಯಾಗಿವೆ.

ರಾಜ್ಯದಲ್ಲಿ ವಿವಿಧ ಕಡೆ ಈ ಶಂಕಿತ ಉಗ್ರರು ವಿದ್ವಾಂಸಕ ಕೃತ್ಯ ಎಸಗಲು ಸ್ಕೆಚ್​ ಹಾಕಿದ್ದರು ಎನ್ನಲಾಗಿದೆ. ಈಗಾಗಲೇ ಈ ಸಂಬಂಧ ಇಬ್ಬರು ಶಂಕಿತ ಉಗ್ರರನ್ನ ಬಂಧನ ಮಾಡಲಾಗಿದ್ದು, ಇನ್ನೊಬ್ಬ ಶಂಕಿತ ಉಗ್ರನ ಸೆರೆಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES