Wednesday, January 22, 2025

ಭ್ರಷ್ಟಾಚಾರ ಕಾಂಗ್ರೆಸ್​ನಿಂದ ಹುಟ್ಟಿದೆ : ರವಿಕುಮಾರ್

ಬೆಂಗಳೂರು :  ಹಲವೆಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೋಟೋ ಜೊತೆ ಕ್ಯೂ-ಆರ್ ಕೋಡ್‌ನೊಂದಿಗೆ PayCM ಪೋಸ್ಟರ್‌ ರಾರಾಜಿಸುತ್ತಿದ್ದು, ಪೇ ಸಿಎಂ ಎಂದು ಕಾಂಗ್ರೆಸ್​​ನವರು ಅಭಿಯಾನ ಮಾಡ್ತಾ ಇದ್ದಾರೆ.

ಕಾಂಗ್ರೆಸ್ ವಿಶಿಷ್ಟ ರೀತಿಯಲ್ಲಿ ಅಭಿಯಾನ ಮಾಡುತ್ತಿದ್ದು, ಕ್ಯೂ-ಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ 40% ಕಮಿಷನ್ ವೆಬ್​ಸೈಟ್ ಓಪನ್ ಆಗುತ್ತದೆ. ಈ ಸಂಬಂಧ ಬಿಜೆಪಿ MLC ರವಿಕುಮಾರ್ ಹೇಳಿಕೆ ನೀಡಿದ್ದು, ರಾಹುಲ್ ಗಾಂಧಿ ಭಾರತ್ ಜೋಡೋ ಮಾಡ್ತಾ ಇದ್ದಾರೆ. ಮೊದಲು ಅವರಿಗೆ ಪೇ ಮಾಡಲಿ. ಸಿದ್ದರಾಮಯ್ಯಗೆ ಕಾರು, ವಾಚ್ ಬೇಕು ಅವರಿಗೆ ಪೇ ಮಾಡಲಿ, ಸಿಎಂ ಘನತೆ ತಿಳಿದುಕೊಂಡು ಟೀಕೆ ಮಾಡಬೇಕು. ಭ್ರಷ್ಟಾಚಾರ ಕಾಂಗ್ರೆಸ್​ನಿಂದ ಹುಟ್ಟಿಕೊಂಡಿದೆ. ಅದು ಇರುವವರೆಗೆ ಭ್ರಷ್ಟಾಚಾರ ನಿಲ್ಲಲ್ಲ ಎಂದು ರವಿಕುಮಾರ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES