Wednesday, January 22, 2025

ರಾಹುಲ್​ಗೆ ರಾಜಕೀಯದ ಗಂಧ ಗಾಳಿ ಗೊತ್ತಿಲ್ಲ : ಎಂ.ಪಿ‌.ರೇಣುಕಾಚಾರ್ಯ

ಬೆಂಗಳೂರು : ಮುಖ್ಯಮಂತ್ರಿ, ಪಕ್ಷದ ಬಗ್ಗೆ ಮಾತನಾಡುವ ಯಾವ ನೈತಿಕತೆ ಕಾಂಗ್ರೆಸ್‌ಗಿದೆ. ನಿಮ್ಮ ಪಕ್ಷದ ಅಧ್ಯಕ್ಷರ ಬಗ್ಗೆ ED ತನಿಖೆ ನಡೆಸುತ್ತಿದೆ ಎಂದು ಕಾಂಗ್ರೆಸ್​ ವಿರುದ್ಧ ಸಿಎಂ ಕಾರ್ಯದರ್ಶಿ ಎಂ.ಪಿ‌.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗೇಬಿಟ್ಟೆ ಎಂದು ಓಡಾಡುತ್ತಿದ್ದಾರೆ. ಗುತ್ತಿಗೆದಾರರ ಸಂಘ ಕಾಂಗ್ರೆಸ್‌‌‌ ಏಜೆಂಟರ ರೀತಿ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಎಷ್ಟು ಕಮಿಷನ್ ಇತ್ತು. ನಿಮ್ಮ ಶಾಸಕರಗಳು ಎಷ್ಟು ಪೇಮೆಂಟ್ ತೆಗೆದುಕೊಂಡಿದ್ದಾರೆ.

ಇನ್ನು, ಕಾಂಗ್ರೆಸ್ ಹೈಕಮಾಂಡ್‌ಗೆ ಪೇಮೆಂಟ್ ಮಾಡಿ ಮುಖ್ಯಮಂತ್ರಿಯಾಗಿದ್ದಾರೆ. ಜನ ನಿಮ್ಮನ್ನು ತಿರಸ್ಕಾರ ಮಾಡಿದ್ದಾರೆ. ಕಾಂಗ್ರೆಸ್ ಏಜೆಂಟರು ಕೆಂಪಣ್ಣ. ನಾನು ಸವಾಲಾಕುತ್ತೇನೆ. ತಾಕತ್ ಇದ್ರೆ ಹೇಳಿ. 1 ಕೋಟಿ ಟೆಂಡರ್‌ನಲ್ಲಿ 40 ಲಕ್ಷ ಕಮಿಷನ್, ಜಿಎಸ್‌ಟಿ, ರಾಯಲ್ಟಿ ಎಲ್ಲವನ್ನು ಕೊಡೋಕೆ ಆಗುತ್ತಾ ಹೇಳಿ. ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಹೀನಾಯ ಸ್ಥಿತಿ ಬರುತ್ತದೆ. ಈಗ ಭಾರತ್ ಜೋಡೊ ಮಾಡ್ತಿದ್ದಾರೆ. ರಾಹುಲ್ ಗಾಂಧಿಗೆ ರಾಜಕೀಯದ ಗಂಧ ಗಾಳಿ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES