Monday, December 23, 2024

ಕಾಂತಾರ ಪ್ರಪಂಚದ ಮೇಕಿಂಗ್ ರೋಚಕತೆ ರಿವೀಲ್..!

ಕರಾವಳಿ ಸೀಮೆಯ ರೋಚಕ ಕಥೆ ಕಾಂತಾರ. ಸದ್ಯ ತೆರೆಮರೆಯ ಮೇಕಿಂಗ್​​ ತುಣುಕನ್ನು ಹಂಚಿಕೊಂಡಿರೋ ಚಿತ್ರತಂಡ ಸೂಪರ್​​ ಸರ್​ಪ್ರೈಸ್​​ ಫೀಲ್​ ಕೊಟ್ಟಿದ್ದಾರೆ. 45 ಸೆಕೆಂಡುಗಳು ಕಾಲ ರೋಮಾಂಚನಕಾರಿ ಅನುಭವದ ಜಗತ್ತನ್ನು ತೆರೆದಿಟ್ಟಿದೆ. ಯೆಸ್​​​​.. ಎಲ್ಲರ ಗಮನ ಸೆಳೆದಿರುವ ಸುಂದರ ದೃಶ್ಯಕಾವ್ಯದ ಮೇಕಿಂಗ್​ ವೀಡಿಯೋ ಹೇಗಿದೆ ಗೊತ್ತಾ..? ನೀವೇ ಓದಿ.

  • ರಾಜ್​ ಬಿ ಶೆಟ್ಟಿ ಮಾಸ್ಟರ್​ ಮೈಂಡ್​​​ನಲ್ಲಿ ಕಾಂತಾರ ಶೂಟ್​

ಹಣ ಮಾಡೋದಕ್ಕೆ ಸಿನಿಮಾ ಮಾಡೋದಲ್ಲ. ಯುಗಗಳೆ ಕಳೆದ್ರು ಆ ಸಿನಿಮಾ ಎಲ್ಲರಿಗೂ ಕಾಡಬೇಕು. ಕಥೆಯೊಳಗೆ ನಾವೊಂದು ಪಾತ್ರವಾಗ್ಬೇಕು. ಆ ನಿಟ್ಟಿನಲ್ಲಿ ಕರಾವಳಿ ನೇಟಿವಿಟಿಯ ಅಮೋಘ, ಅತ್ಯದ್ಭುತ, ಅದ್ವಿತೀಯ ಕಥೆಯ ಎಳೆ ಇಟ್ಟುಕೊಂಡು ರಿಷಬ್​ ಶೆಟ್ಟಿ ಕಾಂತಾರ ಸಿನಿಮಾ ಮಾಡಿದ್ದಾರೆ. ಯೆಸ್​​​.. ಇನ್ನು ಕರಾವಳಿ ಗಂಡು ಕಲೆ ಕಂಬಳ ಕೆಸರ ಓಟದಲ್ಲಿ ಸಿನಿಮಾದ ಮೆರಗು ಡಬಲ್​ ಆಗಿದೆ.

ಸದ್ಯ, ಕಾಂತಾರ ಚಿತ್ರತಂಡದಿಂದ ಕಿಡಿಯೊಂದು ಹಾರಿದ್ದು ಎಲ್ಲರ ಅಟೆನ್ಶನ್​​ ತನ್ನತ್ತ ಸೆಳೆದಿದೆ. ಚಿತ್ರದ ಮೇಕಿಂಗ್​ ವೀಡಿಯೋ ರಿವೀಲ್​ ಮಾಡಿರೋ ಚಿತ್ರತಂಡ ಸಿನಿಮಾ ಮೇಲಿನ ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಕಡಲ ಕಿನಾರೆಯ ಭಾಷೆ, ಸಂಸ್ಕೃತಿ, ವೈಭವವನ್ನು ತೆರೆಯ ಮೇಲೆ ನೋಡೋದೆ ಒಂದು ಸೊಬಗು. ಅದನ್ನು ಕಣ್ಣಿಗೆ ಕಟ್ಟಿದಂತೆ ರಿಷಬ್​ ಟೀಮ್​​ ಚಿತ್ರಿಕರಿಸಿದ್ದಾರೆ. ಇನ್ನು, ಭೂತಕೋಲ ಧೈವಾರಾಧನೆ ಕಂಪು ರಣರೋಚಕವಾಗಿರಲಿದೆ. ಜತೆಗೆ ರಾಜ್​​​​​​. ಬಿ ಶೆಟ್ಟಿ ಮಾಸ್ಟರ್​​ ಮೈಂಡ್​​​ ಕೆಲವು ಸೀನ್​ಗಳಿಗೆ ಜೀವಕಳೆ ತುಂಬಿದೆ.

  • ಬಿರುಸಿನ ಕೋಣದ ಓಟ.. ಭೀಕರ ಕಾಡೊಳಗೆ ಕತ್ತಲಾಟ
  • ‘ಕಾಂತಾರ’ ಕರಾವಳಿಯ  ದೇಸಿ ಮಣ್ಣಿನ ದಂತ ಕಥೆ..!

ರಿಷಬ್​ ಸಿನಿಕರಿಯರ್​ನಲ್ಲಿ ಅದ್ಧೂರಿ ವೆಚ್ಚದಲ್ಲಿ ಮೂಡಿ ಬರ್ತಿರೋ ಸಿನಿಮಾ ಕಾಂತಾರ. ಹೊಂಬಾಳೆ ಬ್ಯಾನರ್​ನಲ್ಲಿ ರಿಷಬ್​ ಶೆಟ್ಟಿ ಸಿನಿಮಾಂತ್ರಿಕತೆಯಲ್ಲಿ ಕಥೆಗೊಂದು ಹೊಳಪು ಕೂಡ ಬಂದಿದೆ. ಈಗಾಗ್ಲೇ ಸಿನಿಮಾ ಸ್ಯಾಂಪಲ್​ ವೀಡಿಯೋಗಳು ಸಿನಿರಸಿಕರನ್ನು ಥಿಯೇಟರ್​​​​​ನತ್ತ ಕೈ ಬೀಸಿ ಕರೆಯುತ್ತಿವೆ. ಕಾಡು ಹಾಗೂ ನಾಡಿನ ನಡುವಿನ ಸಂಘರ್ಷವನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆಯಂತೆ. ಇದೀಗ ರಿಲೀಸ್​ ಆಗಿರೋ ಮೇಕಿಂಗ್​ ವೀಡಿಯೊದಲ್ಲೂ ಅದು ಪ್ರೂವ್​ ಆಗಿದೆ.

ಸಿಂಗಾರ ಸಿರಿಯೇ ಹಿಟ್​ ಸಾಂಗ್​ ಮೂಲಕ ಕಾಂತರ ಐಸಿರಿ ಹತ್ತು ಪಟ್ಟು ಜಾಸ್ತಿಯಾಗಿದೆ. ಚಿತ್ರಪ್ರೇಮಿಗಳು ಐ ಕಾಂಟ್​​​ ವೆಯ್ಟ್​ ಅಂತಿದಾರೆ. ಅಂತೂ ದಸರಾಗೆ ಸಿನಿಮಾ ವರ್ಲ್ಡ್​ ವೈಡ್​​ ದಂಡಯಾತ್ರೆಗೆ ಹೊರಡಲಿದೆ. ಕಿಶೋರ್​​​​, ಅಚ್ಯುತ್​ ಗೌಡ, ಸಪ್ತಮಿಗೌಡ, ಪ್ರಮೋದ್ ಶೆಟ್ಟಿ ತಾರಾಗಣದಲ್ಲಿ ಕಾಂತಾರ ಸಿನಿಮಾದ ತಾಕತ್ತು ಡಬಲ್​​ ಆಗಿದೆ. ದಸರಾಗೆ ಪ್ರೇಕ್ಷಕರ ಮೆಚ್ಚಿನ ಆಯ್ಕೆ ಕಾಂತಾರ ಚಿತ್ರವಾಗಲಿದೆ.

ಸಿನಿಮಾದಲ್ಲಿ ಕರಾವಳಿ ಸಂಸ್ಕ್ರತಿಗೆ ಚ್ಯುತಿ ಬರದಂತೆ ಸಣ್ಣ ಸಣ್ಣ ಸೂಕ್ಷ್ಮ ವಿಷಯಗಳ ಮೇಲೂ ಸಖತ್​ ವರ್ಕ್​​ ಔಟ್​ ಮಾಡಲಾಗಿದೆ. ಅಜನೀಶ್​ ಲೋಕನಾಥ್​​ ಮ್ಯೂಸಿಕ್​ ಕಂಪೋಸ್​​ ಸಖತ್​ ಇಂಪ್ರೆಸ್ಸಿವ್​ ಆಗಿದೆ. ಕುಲ ಭೂಷಣ್​ ಕ್ಯಾಮೆರಾ ಕಣ್ಣಿಗೆ ರಾಜ್​​​. ಬಿ ಶೆಟ್ಟಿ ಟೆಕ್ನಿಕಲ್​ ಮೈಂಡ್​​ ಸಹಕಾರವಿದೆ. ವಿಜಯ್​ ಕಿರಗಂದೂರ್​​ ಆಸಕ್ತಿ ವಹಿಸಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿರೋದ್ರಿಂದ ಚಿತ್ರದ ಮೇಲೆ ನಿರೀಕ್ಷೆಗಳು ಗರಿಗೆದರಿವೆ. ಒಟ್ನಲ್ಲಿ ದಸರಾ ವೈಭವದ ಜತೆಗೆ ಕಾಂತಾರ ವೈಭವ ಕೂಡ ಜೋರಾಗಿರಲಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES