ಮುಂಬೈ: ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ (ಏಮ್ಸ್) ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಾಲಿವುಡ್ ಹಿರಿಯ ಹಾಸ್ಯನಟ ರಾಜು ಶ್ರೀವಾಸ್ತವ್ ನಿಧನರಾಗಿದ್ದಾರೆ.
ರಾಜು ಶ್ರೀವಾಸ್ತವ್ (58) ಅವರಿಗೆ ಆಗಸ್ಟ್ 10 ರಂದು ಜಿಮ್ನಲ್ಲಿ ಟ್ರೆಡ್ಮಿಲ್ನಲ್ಲಿ ಓಡುವಾಗ ಹೃದಯಾಘಾತವಾಗಿತ್ತು. ಈ ಹಿನ್ನಲೆಯಲ್ಲಿ ದೆಹಲಿಯ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ರಾಜು ಶ್ರೀವಾಸ್ತವ್ ಮೃತಪಟ್ಟಿದ್ದಾರೆ.
ಕಾಮಿಕ್ ರಾಜು ಎಂದೇ ಬಾಲಿವುಡ್ನಲ್ಲಿ ಖ್ಯಾತಿಗಳಿಸಿದ್ದರು. ರಾಜು ಶ್ರೀವಾಸ್ತವ ಅವರನ್ನ ಏಮ್ಸ್ನಲ್ಲಿ ಲೈಫ್ ಸಪೋರ್ಟ್ ಸಿಸ್ಟಮ್ನಲ್ಲಿದ್ದರು. ಹಾಸ್ಯನಟ 15 ದಿನಗಳ ನಂತರ ವೆಂಟಿಲೇಟರ್ ಬೆಂಬಲದ ಮೇಲೆ ಪ್ರಜ್ಞೆಯನ್ನು ಮರಳಿ ಪಡೆದರು. ಸೆಪ್ಟೆಂಬರ್ 1 ರಂದು ಅವರಿಗೆ ಅತೀ ಜ್ವರ ಕಾಣಿಸಿದ ಹಿನ್ನೆಲೆಯಲ್ಲಿ ಮತ್ತೆ ಅವ್ರನ್ನ ವೆಂಟಿಲೇಟರ್ನಲ್ಲಿ ಇರಿಸಲಾಯಿತು.
ಶ್ರೀವಾಸ್ತವ ಅವರು 1980 ರ ದಶಕದಲ್ಲಿ ಬಾಲಿವುಡ್ನಲ್ಲಿ ಹಾಸ್ಯನಟನಾಗಿ ಖ್ಯಾತಿ ಪಡೆದರು. ಬಳಿಕ 2005 ರಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿ ಶೋ “ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್” ನ ಮೊದಲ ಸೀಸನ್ನಲ್ಲಿ ಭಾಗವಹಿಸಿದ ನಂತರ ಮನ್ನಣೆ ಪಡೆದರು. ಅವರು ‘ಮೈನೆ ಪ್ಯಾರ್ ಕಿಯಾ’, ‘ಆಮ್ದಾನಿ’ ಮುಂತಾದ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.