ಬೆಂಗಳೂರು : ಒಂದು ಕಡೆ ರಾಮಾಯಣ ಮಾಹಾಭಾರತದ ಪಾತ್ರಧಾರಿಗಳು. ಇನ್ನೊಂದೆಡೆ ಯಕ್ಷಗಾನದ ವೇಷ ತೊಟ್ಟು ಎಲ್ಲರ ಕಣ್ಮನ ಸೆಳೆಯುತ್ತಿರುವ ನೃತ್ಯ ಪ್ರಕಾರ ಮತ್ತೊಂದೆಡೆ ಗ್ರಾಮೀಣ ಜೀವನ ಶೈಲಿಯನ್ನು ಪ್ರತಿ ಬಿಂಬಿಸುತ್ತಿರುವ ಗೊಂಬೆಗಳು, ಹೌದು, ಕಣ್ಣು ಹಾಯಿಸಿದ ಕಡೆಯೆಲ್ಲಾ ಗೊಂಬೆ ಗೊಂಬೆ ಹೌದು ಇಂತಹ ಸಾವಿರಾರು ಕಲರ್ ಪುಲ್ ಗೊಂಬೆಗಳು ಕಂಡದ್ದು ಕರ್ನಾಟಕ ಚಿತ್ರಕಲಾ ಪರಿಷತ್ ಮೇಳ ಹಾಗೂ ಮಲ್ಲೇಶ್ವರಂನಲ್ಲಿ
ಹೌದು ಹಬ್ಬ ಸಮೀಪಿಸುತ್ತಿದ್ದಂತೆ ನವರಾತ್ರಿ ಹಬ್ಬಕ್ಕೆ ಗೊಂಬೆಗಳ ಮಾರಾಟ ಆರಂಭವಾಗಿದೆ. ಜೊತೆಗೆ ಖರೀದಿಯು ಸಖತ್ ಜೋರಾಗಿ ನಡೆಯುತ್ತಿದ್ದು,ಈಗಿನಿಂದಲೇ ಯಾವ ರೀತಿಯ ಗೊಂಬೆ ಖರೀದಿ ಮಾಡಬೇಕು ಅಂತ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ.
ಅಂದ ಹಾಗೆ ಮೈಸೂರು ಸೇರಿ ರಾಜ್ಯದ ವಿವಿಧ ಭಾಗದಲ್ಲಿ `ಬೊಂಬೆ ಕೂಡಿಸುವ’ ಪದ್ಧತಿಯೂ ಸರಿಸುಮಾರು 500 ವರ್ಷಗಳಿಂದ ನಡೆದುಕೊಂಡು ಬರುತ್ತಿವೆ. ದಸರಾ ಹಬ್ಬದ ನವರಾತ್ರಿ ಹೆಣ್ಣು ಮಕ್ಕಳಿಗೆ ಸಖತ್ ಪೇವರೀಟ್ ಹಬ್ಬವಾಗಿದೆ, ಹೀಗಾಗಿ ಮನೆಯಲ್ಲಿ ಹೆಣ್ಣುಮಕ್ಕಳು ನವರಾತ್ರಿಯ ದಿನಗಳಲ್ಲಿ ಬೊಂಬೆ ಕೂರಿಸಿ ಸಿಂಗಾರ ಮಾಡುವ ಮೂಲಕ ಹಬ್ಬದ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಹೀಗಾಗಿ ನಗರದ ಚಿತ್ರಕಲಾ ಪರಿಷತ್‌ನಲ್ಲಿ ದಸರಾ ಹಬ್ಬದ ಹಿನ್ನೆಲೆ ಶಾಪಿಂಗ್ ಮೇಳ ನಡೆಯುತ್ತಿದೆ. ಇದನ್ನು ಚಿತ್ರ ನಟಿ ಶುಭ ಪೂಂಜ ಉದ್ಘಾಟನೆ ಮಾಡಿದ್ದಾರೆ.
ಇನ್ನು ಇದರ ಜೊತೆಗೆ ಹಬ್ಬಕ್ಕೆ ಬೇಕಾಗಿರುವಂತಹ ಅಲಂಕಾರಿಕ ವಸ್ತುಗಳು ಬಟ್ಟೆ ಜ್ಯುವೆಲರಿ ಸೇರಿ ಹಲವು ವಸ್ತುಗಳ ಶಾಪಿಂಗ್ ಭರ್ಜರಿಯಾಗಿ ನಡೀತಾ ಇದೆ, ಸದ್ಯ ಬೆಂಗಳೂರಿನಲ್ಲಿ 50 ರೂಪಾಯಿಂದ ಹಿಡಿದು 5 ಸಾವಿರ ರೂ.ಗಳವರೆಗೂ ಗೊಂಬೆಗಳೂ ಸಿಗುತ್ತಿವೆ. ನೀವೂ ಕೂಡ ಈ ಬಾರಿ ವೆರೈಟಿ ಗೊಂಬೆಯನ್ನು ಖರೀದಿಸಿ.
ಸ್ವಾತಿ ಪುಲಗಂಟಿ ಮೆಟ್ರೋ ಬ್ಯೂರೋ ಬೆಂಗಳೂರು