Thursday, December 19, 2024

ಭಾರತ ವಿರುದ್ಧ ಸುಲಭ ಜಯಗಳಿಸಿದ ಆಸ್ಟೇಲಿಯಾ

ಮೊಹಾಲಿ; ಭಾರತ-ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ 4 ವಿಕೆಟ್‌ಗಳಿಂದ ಭರ್ಜರಿ ಜಯ ಗಳಿಸಿದೆ.

ಭಾರತ ನೀಡಿದ 209ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ನಾಯಕ ಆರನ್ ಫಿಂಚ್‌, ಕ್ಯಾಮರೂನ್ ಗ್ರೀನ್ ಸ್ಫೋಟಕ ಆರಂಭ ನೀಡಿದರು. 3 T-20  ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಆಸ್ಟೇಲಿಯಾ ಮುನ್ನಡೆ ಸಾಧಿಸಿದೆ.

ಮೊದಲು ಟಾಸ್‌ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮಾಡಿದರು. ಟೀಂ ಇಂಡಿಯಾದ ಕೆಎಲ್‌ ರಾಹುಲ್ ಭರ್ಜರಿ ಅರ್ಧಶತಕ, ಸೂರ್ಯಕುಮಾರ್ ಯಾದವ್ ಸ್ಫೋಟಕ ಆಟ ಹಾಗೂ ಅಂತಿಮ ಓವರ್ ಗಳಲ್ಲಿ ಪಾಂಡ್ಯ ಅರ್ಧಶತಕದ ನೆರವಿನಿಂದ ಭಾರತ 208 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು.

ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 19.2 ಓವರ್​​ಗಳಲ್ಲಿ 6 ವಿಕೆಟ್ ಕಳೆದುಕೊಂಡು 211 ಸೇರಿಸಿ ಗೆಲುವಿನ ದಡ ಸೇರಿತು. ಈ ಮೂಲಕ ಟೀಂ ಇಂಡಿಯಾ ವಿರುದ್ಧ ನಾಲ್ಕು ವಿಕೆಟ್​ಗಳಿಂದ ಆಸ್ಟೇಲಿಯಾ ಸುಲಭ ಜಯಗಳಿಸಿತು.

RELATED ARTICLES

Related Articles

TRENDING ARTICLES