Tuesday, December 24, 2024

ಲಡಾಖ್​​ನಲ್ಲಿ ಕನ್ನಡಿಗನ ಕೈ ಹಿಡಿದ ಅಜಿತ್.. ಆಗಿದ್ದೇನು..?

ತಲಾ ಅಜಿತ್ ಎಲ್ರಿಗೂ ಒಬ್ಬ ಸೂಪರ್ ಸ್ಟಾರ್ ಆಗಿಯಷ್ಟೇ ಗೊತ್ತು. ಆದ್ರೆ ಅವ್ರೊಬ್ಬ ಅದ್ಭುತ ವ್ಯಕ್ತಿತ್ವವಿರೋ ವ್ಯಕ್ತಿ. ಲಡಾಖ್​ನಲ್ಲಿ ಆತನ ಸರಳ, ಸಜ್ಜನಿಕೆಗೆ ಕ್ಲೀನ್ ಬೋಲ್ಡ್ ಆದ ಕನ್ನಡಿಗ, ಅವ್ರನ್ನ ಇನ್ನಿಲ್ಲದೆ ಕೊಂಡಾಡಿದ್ದಾರೆ. ಇಷ್ಟಕ್ಕೂ ಅಲ್ಲಿ ನಡೆದದ್ದಾದ್ರು ಏನು ಅನ್ನೋ ಇನ್​ಸೈಡ್ ಸ್ಟೋರಿ ಇಲ್ಲಿದೆ. ನೀವೇ ಓದಿ.

  • ಅನಾಮಿಕನ ಬೈಕ್ ರಿಪೇರಿ ಮಾಡಿದ ಅಜಿತ್​ ಸಿಂಪ್ಲಿಸಿಟಿ..!

ಸೌತ್​​ ಸಿನಿದುನಿಯಾ ಟಾಪ್​ ಮೋಸ್ಟ್​ ನಟರಲ್ಲಿ ಅಜಿತ್​​​ ಕೂಡ ಒಬ್ರು. ಅವ್ರ ಮ್ಯಾನರಿಸಂಗೆ ಕೋಟ್ಯಂತರ ಅಭಿಮಾನಿಗಳು ಕ್ಲೀನ್​ ಬೊಲ್ಡ್​ ಆಗಿದ್ದಾರೆ. ಅವ್ರ ಸಿನಿಮಾಗಳ ಫ್ಯಾನ್ಸ್​ ಕ್ರೇಜ್​​​ನಾ ಬಾಯಿ ಮಾತಲ್ಲಿ ಹೊಗಳೋಕೆ ಸಾಧ್ಯವಿಲ್ಲ ಬಿಡಿ.  ಬಾಕ್ಸ್​​  ಆಫೀಸ್​ ಸುಲ್ತಾನ ಕಾಲಿವುಡ್​ ಸೂಪರ್​ ಸ್ಟಾರ್​ ಅಜಿತ್​ ಕೇವಲ ಸಿನಿಮಾಗಳ ಮೂಲಕ ಹೆಸ್ರು ಮಾಡಿಲ್ಲ. ಅವ್ರ ಸಿಂಪ್ಲಿಸಿಟಿಗೆ, ಜೀವನ ಪ್ರೀತಿಗೆ, ಬೈಕ್​ ಸುತ್ತಾಟಕ್ಕೆ ಅವರನ್ನು ಮೆಚ್ಚಿ ಅಪ್ಪಿಕೊಂಡವರಿದ್ದಾರೆ.

ಅವರ ಸರಳತೆ, ಅಹಂಕಾರವಿಲ್ಲದ ನಡತೆ, ಸಿಂಪಲ್​ ಲೈಫ್​​ ಸ್ಟೈಲ್​ಗೆ ಸಾಕ್ಷಿ ಸಿಕ್ಕಿದೆ. ಆಟಿಟ್ಯೂಡ್​​ ಇಲ್ಲದ ಅಜಿತ್​ ಕಾಮನ್​ ಮ್ಯಾನ್​​​ ರೀತಿ ಅನಾಮಿಕನಿಗೆ ಬೈಕ್​ ರಿಪೇರಿ ಮಾಡಿಕೊಟ್ಟಿದ್ದಾರೆ. ರಸ್ತೆ ಬದಿಯ ಅಪರಿಚಿತನಿಗೆ ಮಾಡಿದ ಸಹಾಯ ನೆನೆದು ಅಜಿತ್​​ ಬಗ್ಗೆ ಆ ವ್ಯಕ್ತಿ ಸಾಲು ಸಾಲು ಹೊಗಳಿಕೆಯ ಮಾತನ್ನಾಡಿದ್ದಾರೆ. ನಾನೇ ಅದೃಷ್ಠಶಾಲಿ. ನನ್ನ ಜೀವನ ಸಾರ್ಥಕವಾಯಿತು ಎಂದು ತನ್ನ ಬಗ್ಗೆಯೇ ತಾನು ಹೆಮ್ಮೆ ಪಟ್ಟಿದ್ದಾರೆ.

  • ಲಡಾಖ್​ ಟ್ರಿಪ್​​​ನಲ್ಲಿ ಮಾನವೀಯತೆ ಮರೆದ ಸ್ಟಾರ್​​
  • ಅಜಿತ್​ ಝೀರೋ ಆಟಿಟ್ಯೂಡ್​​​ಗೆ ಮಂಜು ಆಶ್ಚರ್ಯ

ತಲಾ ಅಜಿತ್​ಗೆ ಸಾಕಷ್ಟು ಹವ್ಯಾಸಗಳಿವೆ. ಸಿನಿಮಾ ಜತೆಗೆ ಫ್ರೀ ಟೈಮ್​ನಲ್ಲಿ ಬೈಕ್​ ಏರಿ ದೇಶ ಸುತ್ತುತ್ತಾರೆ. ಇತ್ತೀಚೆಗೆ ಲಡಾಕ್​ ಟ್ರಿಪ್​​​ನಲ್ಲಿರೋ ಅಜಿತ್​​​​​ಗೆ ರಸ್ತೆ ಬದಿಯಲ್ಲಿ ಅನಾಮಿಕ ವ್ಯಕ್ತಿ ಕೈ ಮಾಡಿ ಸಹಾಯ ಬೇಡಿದ್ದಾನೆ. ಫ್ರೆಂಡ್ಸ್​ ಜತೆಗಿದ್ದ ಅಜಿತ್​ ತಕ್ಷಣ ಬೈಕ್​ ನಿಲ್ಲಿಸಿ ಸಮಸ್ಯೆ ಆಲಿಸಿದ್ದಾರೆ. ಜತೆಗೆ 10 ನಿಮಿಷಗಳ ಕಾಲ ಬೈಕ್​ ಚೆಕ್​ ಮಾಡಿ ರಿಪೇರಿ ಕೂಡ ಮಾಡಿದ್ದಾರೆ. ಇದನ್ನೆಲ್ಲಾ ಸುತ್ತಲು ನೊಡ್ತಿದ್ದವರು ಶಾಕ್​ ಆಗಿದ್ದಾರೆ.

ಈ ಸುಂದರ ಕ್ಷಣಗಳನ್ನು ಮೂಖ ಪ್ರೇಕ್ಷಕನಂತೆ ನೋಡ್ತಾ ನಿಂತಿದ್ದು ಮಂಜು ಕಶ್ಯಪ್​​​​. ಯೆಸ್​​​.. ತನ್ನ ಬೈಕ್​ ರಿಪೇರಿ ಮಾಡಿ, ಜತೆಗೆ ರೋಡ್ ಟ್ರಿಪ್​​ ಬಗ್ಗೆ ಕೆಲಹೊತ್ತು ಮಾತನಾಡಿ. ತರಲೆ ತಮಾಷೆ ಜತೆ ಟೀ ಕುಡಿದ ಅಜಿತ್​​​​​​ ಕಂಡು ಮಂಜು ಕಶ್ಯಪ್​ ಮಂತ್ರಮುಗ್ಧವಾಗಿದ್ದರು. ಅವರ ಮೇಲಿದ್ದ ನನ್ನೆಲ್ಲಾ ಅಭಿಪ್ರಾಯ ಬದಲಾಯ್ತು. ನಾನು ಈ ದಿನ ಮರೆಯಲಾರೆ. ಎಂದು ಮಂಜು ಬರೆದುಕೊಂಡಿದ್ದಾರೆ. ಜತೆಗೆ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಕೂಡ ಶೇರ್​ ಮಾಡಿದ್ದಾರೆ.

ಅಜಿತ್​ ಬೈಕ್ ಮೇಲಿನ ಪ್ರೀತಿ ಎಲ್ರಿಗೂ ಗೊತ್ತಿದೆ. ಅವರ ಅಡ್ವೆಂಚರಸ್​​ ಜರ್ನಿ ಬಗ್ಗೆ ಫ್ಯಾನ್ಸ್​ ಕೂಡ ಜೈಕಾರ ಹಾಕಿದ್ದಾರೆ. ಇದ್ರ ಜತೆಯಲ್ಲಿ ಪೈಲಟ್​ ಲೈಸೆನ್ಸ್​​ ಕೂಡ ಅಜಿತ್​​ ಹೊಂದಿದ್ದಾರೆ. ಇದೀಗ ತಲಾ ಬೈಕ್​ ವಿಚಾರದಲ್ಲಿ ಎಕ್ಸ್​ಪರ್ಟ್​​ ಮೆಕಾನಿಕ್​ ಅನ್ನೋದನ್ನು ಪ್ರೂವ್​ ಮಾಡಿದ್ದಾರೆ. ಕೋಟ್ಯಂತರ ಅಭಿಮಾನಿಗಳ ಮೆಚ್ಚಿನ ನಟ ಯಾವುದೇ ಜಂಬ ಇಲ್ಲದೇ ಬೈಕ್​​ ರಿಪೇರಿ ಮಾಡಿಕೊಟ್ಟು ಅಮೂಲ್ಯ ಸಮಯ ಕಳೆದದ್ದಕ್ಕೆ ಎಲ್ಲ ಕಡೆ ಪ್ರಶಂಸೆಯ ಮಾತುಗಳು ಹರಿದು ಬರ್ತಿವೆ.

ರಾಕೇಶ್​ ಆರುಂಡಿ, ಫಿಲ್ಮ್​​​ ಬ್ಯೂರೋ, ಪವರ್​ ಟಿವಿ 

RELATED ARTICLES

Related Articles

TRENDING ARTICLES