Monday, December 23, 2024

1,725 ಕೋಟಿ ರೂ ಮೌಲ್ಯದ ಮಾದಕ ವಸ್ತು ಸೀಜ್​

ಮುಂಬೈ: ಮುಂಬಯಿನ ನವ ಶೇವಾ ಬಂದರಿನಲ್ಲಿ ಸುಮಾರು1,725 ಕೋಟಿ ಮೌಲ್ಯದ ಮಾದಕ ವಸ್ತುವನ್ನ ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.

ದೆಹಲಿ ಪೊಲೀಸರಿಂದ ಮುಂಬೈಯಲ್ಲಿ ಕಾರ್ಯಾಚರಣೆ ನಡೆಸಿ ಕಂಟೈನರ್​ನಲ್ಲಿ ಅಡಗಿಸಿಟ್ಟಿದ್ದ ಡ್ರಗ್ಸ್​​​ ಸಾಗಾಟವನ್ನ ಪತ್ತೆ ಹಚ್ಚಿ 20 ಟನ್​ ಡ್ರಗ್ಸ್​ ಜಪ್ತಿ ಮಾಡಿದ್ದಾರೆ. ಈ ಬಗ್ಗೆ ದೆಹಲಿಯ ವಿಶೇಷ ಪೊಲೀಸ್ ತಂಡ ತೀವ್ರ ತನಿಖೆ ನಡೆಸುತ್ತಿದೆ.

ಸದ್ಯ ಈ ಕಂಟೇನರ್​ನ್ನ ವಶಪಡಿಸಿಕೊಂಡು ದೆಹಲಿಗೆ ಸಾಗಿಸಲಾಯಿತು. ವಶಪಡಿಸಿಕೊಂಡ ಹೆರಾಯಿನ್ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1,725 ​​ಕೋಟಿ ರೂ ಎಂದು ದೆಹಲಿ ಪೊಲೀಸರ ವಿಶೇಷ ತಂಡ ಹೇಳಿದೆ.

RELATED ARTICLES

Related Articles

TRENDING ARTICLES