Wednesday, January 22, 2025

ಉಗ್ರನ ಸುಳಿವು ನೀಡಿದವರಿಗೆ 10 ಲಕ್ಷ ರೂ ಬಹುಮಾನ ಘೋಷಣೆ

ಶಿವಮೊಗ್ಗ: ಶಿವಮೊಗ್ಗದಲ್ಲಿ ಶಂಕಿತ ಉಗ್ರರು ಬಂಧನ ಹಿನ್ನಲೆಯಲ್ಲಿ ಎ1 ಆರೋಪಿ ಶಾರಿಕ್​ ಜತೆಗೆ ಸಂಪರ್ಕ ಹೊಂದಿದ್ದ ಉಗ್ರ ಮತೀನ್​ ಸುಳಿವು ನೀಡಿದವರಿಗೆ ಎನ್​ಐಎ 10 ಲಕ್ಷ ರೂ ಬಹುಮಾನ ಘೋಷಣೆ ಮಾಡಿದೆ.

ರಾಜ್ಯದಲ್ಲಿ ವಿದ್ವಾಂಸಕ ಕೃತ್ಯ ಎಸಗಲು ಮಂಗಳೂರು ಹಾಗೂ ಶಿವಮೊಗ್ಗ ಮೂಲದ ಬಂಧನವಾದ ಶಂಕಿತ ಉಗ್ರರು ಸಂಚು ರೂಪಿಸಿದ್ದರು. ಆದರೆ ಪೊಲೀಸರ ಕಾರ್ಯ ಪ್ರವೃತ್ತಿಯಿಂದ ಈ ಸಂಚು ವಿಫಲಗೊಳಿಸಿ, ನಿನ್ನೆ ಮಾಜ್ ಹಾಗು ಯಾಸಿನ್ ಶಂಕಿತ ಉಗ್ರರನ್ನ ಬಂಧಿಸಿದ್ದರು. ಇನ್ನೊಬ್ಬ ಆರೋಪಿ ಉಗ್ರ ಶಾರಿಕ್​ ತಲೆಮರೆಸಿಕೊಂಡಿದ್ದಾನೆ.

ಐಸಿಸ್​​ ಉಗ್ರ ಮತೀನ್ ಜೊತೆ ನಿಕಟ ಸಂಪರ್ಕವನ್ನ ಶಾರಿಕ್​ ಹೊಂದಿದ್ದ, ಶಾರಿಕ್ ಸೂಚನೆ ಮೇರೆಗೆ ಉಗ್ರ ಚಟುವಟಿಕೆ ಮಾಜ್ ಹಾಗು ಯಾಸಿನ್ ನಡೆಸುತಿದ್ದರು.  ಮತೀನ್ ತಲೆಮರೆಸಿಕೊಂಡು ಬರೋಬ್ಬರಿ ಎರಡು ವರ್ಷವೇ ಕಳೆದಿದೆ.

ಮತೀನ್ ಸಹ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದವನು. ನೇರವಾಗಿ ಉಗ್ರಸಂಘಟನೆ ಜೊತೆ ಸಂಪರ್ಕ ಹೊಂದಿದ್ದಾನೆ. ಮತೀನ್ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ಎನ್​ಐಎ ಘೋಷಣೆ ಮಾಡಿದೆ. ಈ ಹಿಂದೆ ತೀರ್ಥಹಳ್ಳಿ ಸೇರಿದಂತೆ ವಿವಿಧೆಡೆ ಸ್ಯಾಟಲೈಟ್ ಫೋನ್ ಬಳಕೆ ಮಾಡಿದ್ದು ಮತೀನ್ ಮೇಲಿದೆ.

RELATED ARTICLES

Related Articles

TRENDING ARTICLES