Monday, December 23, 2024

ನಿಜವಾಗ್ತಿದೆ ರಶ್ಮಿಕಾ ಹುಡ್ಗನಿಗೆ ಸ್ವಾಮೀಜಿ ನುಡಿದ ಭವಿಷ್ಯ

ದಿಲ್ದಾರ್​ ಸಿನಿಮಾಗಳ ಮೂಲಕ ಶಾನ್ದಾರ್​ ಆಗಿ ಮಿಂಚಿದ್ದ ಟಾಲಿವುಡ್​ ಸೂಪರ್​ ಸ್ಟಾರ್​ ವಿಜಯ್​ ದೇವರಕೊಂಡ. ಆದ್ರೆ, ಇತ್ತೀಚೆಗೆ ಗ್ರಹಚಾರವೋ, ವಿಧಿಯಾಟವೋ ಎಂಬಂತೆ ವಿಜಯ್​ ಸಾಲು ಸಾಲು ಸಿನಿಮಾಗಳು ಮಕಾಡೆ ಮಲಗ್ತಿವೆ. ಇದಕ್ಕೆಲ್ಲಾ ಹಿಂದಿನ ಕಾರಣ ಏನು ಅನ್ನೋದನ್ನ ಫೇಮಸ್​ ಜ್ಯೋತಿಷಿ ಈ ಮುಂಚೆಯೇ ರಿವೀಲ್​ ಮಾಡಿದ್ರು. ಹಾಗಾದ್ರೆ ಸ್ವಾಮಿಜಿ ಹೇಳಿರೋ ಶಾಕಿಂಗ್​ ಸತ್ಯಗಳೇನು ಗೊತ್ತಾ..? ನೀವೇ ಓದಿ.

  • ವಿಜಯ್​ಗೆ ವಕ್ಕರಿಸಿದ ಶನಿಯ ಗುಟ್ಟು ಬಿಚ್ಚಿಟ್ಟ ವೇಣುಸ್ವಾಮಿ

ಅರ್ಜುನ್​ ರೆಡ್ಡಿ ಸಿನಿಮಾದ ನಂತ್ರ ವಿಜಯ್​ ದೇವರಕೊಂಡ ನಸೀಬೇ ಚೇಂಜ್​ ಆಯ್ತು. ಮುಟ್ಟಿದ್ದೆಲ್ಲಾ ಚಿನ್ನವಾಯ್ತು. ಗೀತ ಗೋವಿಂದಂ ಬ್ಲಾಕ್​​ ಬಸ್ಟರ್​​ ಸಿನಿಮಾ ನಂತ್ರ ಬಹಬೇಡಿಕೆಯ ನಟನಾಗಿ ಅಬ್ಬರಿಸಿದ್ರು. ಇಡೀ ಇಂಡಿಯಾದಲ್ಲಿ ವಿಜಯ್​ ಮ್ಯಾನರಿಸಂಗೆ ಸಿಕ್ಕಾಪಟ್ಟೆ ಫ್ಯಾನ್ಸ್​ ಹುಟ್ಟಿಕೊಂಡ್ರು. ಆದ್ರೆ, ವಿಜಯ್​​​​​​​​​​ ಅದೃಷ್ಠ ಬದ್ಲಾಗಿದೆ. ವೇಣುಸ್ವಾಮಿ ನುಡಿದಿದ್ದ ಭವಿಷ್ಯ ನಿಜವಾಗಿದೆ. ಅರ್ಜುನ್​ ರೆಡ್ಡಿಗೆ ಅಷ್ಠಮ ಶನಿ ವಕ್ಕರಿಸಿದೆ. ಮುಂದೆ ತುಂಬಾ ಹುಷಾರಾಗಿ ಹೆಜ್ಜೆ ಇಡ್ಬೇಕು ಅಂದಿದ್ದ ಸ್ವಾಮಿಜಿಯ ಮಾತು ಅಕ್ಷರಶಃ ಸತ್ಯವಾಗಿದೆ.

ಯೆಸ್​​​.. ವಿಜಯ್​ ದೇವರಕೊಂಡ ಅವ್ರು ಅರವಿಂದ್​ ಸ್ವಾಮಿ, ಉದಯ್​ ಕಿರಣ್​ರಂತೆ ಮೊದಲು ಮಿಂಚಿ ಆಮೇಲೆ ಮರೆಯಾಗ್ತಾರೆ ಎಂದು ಭವಿಷ್ಯ ನುಡಿದಿದ್ರು, ಮುಂದಿನ ಹೆಜ್ಜೆಗಳನ್ನ ಎಚ್ಚರಿಕೆಯಿಂದ ಇಡಬೇಕು ಎಂದಿದ್ರು. ಇದೀಗ ಜ್ಯೋತಿಷಿಯ ಭವಿಷ್ಯದಂತೆ ನೋಟಾ, ವರ್ಲ್ಡ್​​ ಫೇಮಸ್​ ಲವರ್​​​​, ಸೇರಿದಂತೆ ಲೈಗರ್​ ಸಿನಿಮಾಗಳು ನೆಲಕ್ಕಪ್ಪಳಿಸಿವೆ. ಈ ರೀತಿ ಸರಣಿ ಸೋಲಿನ ಹಿಂದಿನ ಕಾರಣದ ಬಗ್ಗೆ ಟಿಟೌನ್​ನಲ್ಲಿ ಗುಸು ಗುಸು ಶುರುವಾಗಿದೆ.

  • ಸ್ಯಾಮ್​- ಚೈತು ಡಿವೋರ್ಸ್​​ ಬಗ್ಗೆ ವೇಣು ಭವಿಷ್ಯ ವಾಣಿ
  • ರಶ್ಮಿಕಾ ಸಕ್ಸಸ್​​ ಪೀಕ್​​ ಬಗ್ಗೆ ಸ್ವಾಮಿಯ ಓಪನ್​ ಟಾಕ್​​​​..!

ಆರಂಭದಲ್ಲಿ ಪೂರಿ ಜಗನ್ನಾಥ್​ ನಿರ್ದೇಶನದಲ್ಲಿ ಅಬ್ಬರಿಸಿದ್ದ ಲೈಗರ್ ಸಿನಿಮಾ,​ ರಿಲೀಸ್​ ನಂತ್ರ ಅಷ್ಟೇ ಬೇಗ ಹೇಳ ಹೆಸರಿಲ್ಲದಂತೆ ಮರೆಯಾಯ್ತು. ಅಂತೂ ವೇಣು ಸ್ವಾಮಿ ನುಡಿದಿದ್ದ ಭವಿಷ್ಯದ ನುಡಿಗಳು ನಿಜವಾಯ್ತು.  ಈ ಹಿಂದೆಯೂ ವೇಣುಸ್ವಾಮಿ, ಸಮಂತಾ – ನಾಗ ಚೈತನ್ಯ ದಾಂಪತ್ಯದ ಬಗ್ಗೆ ಭವಿಷ್ಯ ನುಡಿದಿದ್ರು. ಇಬ್ರ ಸಂಸಾರ ಜೀವನ ಆದಷ್ಟು ಬೇಗ ಮುರಿದು ಬೀಳುತ್ತೆ ಎಂದಿದ್ರು. ಅದ್ರಂತೆ ಸ್ಯಾಮ್​, ಚೈತು ದಾಂಪತ್ಯದಲ್ಲಿ ಬಿರುಕು ಮೂಡ್ತು.

ಅದೇನೆ ಇರಲಿ, ವೇಣುಸ್ವಾಮಿ ಆಡಿದ ಮಾತೆಲ್ಲ ಕಾಕತಾಳೀಯ ಎಂಬಂತೆ ನಿಜವಾಗ್ತಿದೆ. ಕೊಡಗಿನ ಕುವರಿ ರಶ್ಮಿಕಾ ಸಕ್ಸಸ್​​ ಬಗ್ಗೆಯೂ ವೇಣು ನುಡಿದ ಮಾತುಗಳು ಸತ್ಯವಾಗ್ತಿವೆ. ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸ್ರು ಮಾಡ್ತಾರೆ. ಅವಳ ಗ್ರಹಗತಿಗಳಲ್ಲಿ ಶುಕ್ರದೆಸೆ ನಡೀತಿದೆ ಎಂದಿದ್ದ ಸ್ವಾಮಿಜಿ ಮಾತು ನಿಜವಾಗಿದೆ. ಅಚ್ಚರಿ ಎಂಬಂತೆ ಪುಷ್ಪ ಸಿನಿಮಾದಲ್ಲೂ ಶ್ರೀವಲ್ಲಿಯಾಗಿ ರಶ್ಮಿಕಾ ಮಿಂಚಿದ್ರು.

ಸದ್ಯ, ನೇಮು, ಫೇಮಿನಲ್ಲಿ ಮಿಂಚ್ತಿದ್ದ ವಿಜಯ್​ ದೇವರಕೊಂಡ ಲೈಗರ್​ ಸೋಲಿನ ನಂತ್ರ ಹತಾಶರಾಗಿದ್ದಾರೆ. ಮತ್ತೆ ಫಿನಿಕ್ಸ್​ ಹಕ್ಕಿಯಂತೆ ವಿಜಯ್​ ಎದ್ದು ಬರಬೇಕಾಗಿದೆ. ಇತ್ತ ರಶ್ಮಿಕಾ, ವಿಜಯ್​ ಲವ್​ಸ್ಟೋರಿ ಬಗ್ಗೆ ಎದ್ದಿದ್ದ ಗಾಸಿಪ್​ಗಳು ತಣ್ಣಗಾಗಿವೆ. ರಶ್ಮಿಕಾ,  ವಿಜಯ್​ ಸಾಲು ಸಾಲು ಸೋಲಿನಿಂದ ಸೈಲೆಂಟ್​ ಆಗಿ ಸರಿದುಬಿಟ್ರಾ ಎಂಬ ಮಾತುಗಳು ಕೇಳಿ ಬರ್ತಿವೆ. ಎನಿವೇ ವೇಣುಸ್ವಾಮಿ ಭವಿಷ್ಯದ ಸತ್ಯಾಸತ್ಯತೆ ಬಗ್ಗೆ ಎಲ್ಲರೂ ಚರ್ಚೆ ಮಾಡ್ತಿದ್ದಾರೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ   

RELATED ARTICLES

Related Articles

TRENDING ARTICLES