Monday, December 23, 2024

ಉತ್ತರ ಕನ್ನಡ ಜನರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕನಸು ನನಸು.!

ಕಾರವಾರ; ಉತ್ತರಕನ್ನಡ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ತಾತ್ವಿಕ ಒಪ್ಪಿಗೆ ಹಿನ್ನಲೆಯಲ್ಲಿ ಕುಮಟಾದ ವಿವಿಧೆಡೆ ಜಿಲ್ಲಾಧಿಕಾರಿಯಿಂದ ಇಂದು ಸ್ಥಳ ಪರಿಶೀಲನೆ ನಡೆಯಿತು.

ಕುಮಟಾ ತಾಲೂಕಿನ ನಾಲ್ಕು ಕಡೆಯಲ್ಲಿ ಸ್ಥಳ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು, ಮಿರ್ಜಾನ ರೈಲ್ವೆ ನಿಲ್ದಾಣದ ಸಮೀಪ, ಕುಮಟಾ ರೈಲು ನಿಲ್ದಾಣ, ಕೊಂಕಣ ಎಜ್ಯುಕೇಷನ್ ಸಮೀಪದ ಮಲ್ಟಿಸ್ಪೆಷಾಲಿಟಿ ನಿರ್ಮಾಣದ ಜಾಗಗಳಿಗೆ ಭೇಟಿ ನೀಡಿದರು.

ಜಿಲ್ಲಾಧಿಕಾರಿಯೊಂದಿಗೆ ಮಂಗಳೂರಿನ ಕೆ.ಎಸ್.ಹೆಗಡೆ ಆಸ್ಪತ್ರೆ ಅಧಿಕಾರಿಗಳೂ ಭಾಗಿಯಾಗಿದರು. ಸ್ಥಳ ಪರಿಶೀಲನೆ ಬಳಿಕ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಆಸ್ಪತ್ರೆಗೆ ಜಾಗದ ಕುರಿತು ಆರೋಗ್ಯ, ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗಾಗಿ ವ್ಯಾಪಕವಾಗಿ ಆಕ್ರೋಶ ವ್ಯಕ್ತಪಡಿಸಿ ಆಸ್ಪತ್ರೆ ಸ್ಥಾಪನೆ ಮಾಡದೆ ಇದ್ದರೆ ಚುನಾವಣೆ ಬಹಿಷ್ಕಾರ ಮಾಡೋದಾಗಿ ಎಚ್ಚರಿಸಿದ್ದರು. ಈ ಬೆನ್ನಲೆಯಲ್ಲಿ ಇಂದು ಸರ್ಕಾರದಿಂದ ಆಸ್ಪತ್ರೆ ಸ್ಥಾಪನೆಗೆ ತಾತ್ವಿಕ ಒಪ್ಪಿಗೆ ಹಿನ್ನಲೆ ಜಿಲ್ಲಾ ಅಧಿಕಾರಿಗಳ ಭೇಟಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES