ಕಾರವಾರ : ಮೀನುಗಾರಿಕೆಗೆ ಎಂದು ತೆರಳಿದ್ದ ವೇಳೆ ಬೋಟ್ ಮುಳುಗಡೆಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ಅರಬ್ಬಿ ಸಮುದ್ರದಲ್ಲಿ ನಡೆದಿದೆ.
ಬೋಟ್ನಲ್ಲಿ ರಂಧ್ರ ಉಂಟಾದ ಪರಿಣಾಮ ನೀರು ತುಂಬಿಕೊಂಡು ಬೋಟ್ನಲ್ಲಿದ್ದ 30 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಮೀನುಗಾರರು ರಕ್ಷಣೆ ಮಾಡಿದ ಬೋಟ್ ಅನ್ನು ಕಾರವಾರ ಬಂದರಿಗೆ ತಂದಿದ್ದಾರೆ. ಜಲ ಪದ್ಮಾವತಿ ಎಂಬ ಬೋಟ್ ವಾಮನ ಹರಿಕಾಂತ್ರ ಎಂಬುವವರಿಗೆ ಸೇರಿದೆ. ಈ ಬೋಟ್ನಲ್ಲಿ 30ಟನ್ ಮೀನುಗಳನ್ನು ಹಿಡಿದು ತರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ ಕಾರಣ ಮೀನುಗಾರರು ಬೋಟ್ ನಲ್ಲಿದ್ದ ಮೀನುಗಳನ್ನು ಸಮುದ್ರಕ್ಕೆ ಚೆಲ್ಲಿದ್ದಾರೆ. ಈ ಘಟನೆಯಿಂದಾಗಿ ₹50 ಲಕ್ಷಕ್ಕೂ ಅಧಿಕ ಹಾನಿಯುಂಟಾಗಿದೆ.