ಬೆಂಗಳೂರು : ಸುಮ್ಮನಹಳ್ಳಿ ಫ್ಲೈ ಓವರ್ ಎಂದ್ರೆ ಇಡೀ ನಗರಕ್ಕೆ ಪ್ರಸಿದ್ಧಿ. ಒಂದು ಕಡೆ ಔಟರ್ ರಿಂಗ್ ರೋಡ್, ಮತ್ತೊಂದು ಕಡೆ ಮೈಸೂರು ದಶಪಥ ರಸ್ತೆಗೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗ. ಮಗದೊಂದು ಕಡೆ ತುಮಕೂರು ನ್ಯಾಷನಲ್ ಹೈವೆೇ ಸಂಪರ್ಕಿಸುವ ಬಹುಮುಖ್ಯವಾದ ಮೇಲು ಸೇತುವೆ ಇದು.ಇದೀಗ ಇದರ ಮೇಲೆ ಸಂಚರಿಸಲು ವಾಹನ ಸವಾರರು ಭಯ ಬೀಳ್ತಿದ್ದಾರೆ. ಯಾಕೆಂದ್ರೆ ಕಳೆದ ಒಂದು ವರ್ಷದ ಹಿಂದೆ ಯಾವ ಜಾಗದಲ್ಲಿ ಕಾಂಕ್ರೀಟ್ ಕುಸಿದು ಬಿದ್ದಿತ್ತೋ ಅದೇ ಜಾಗದಲ್ಲಿ ಮತ್ತೊಮ್ಮೆ ಕಾಂಕ್ರೀಟ್ ಕುಸಿತವಾಗಿದೆ.
ಬಿಬಿಎಂಪಿ ಆದ ಬಳಿಕ ಬಿಡಿಎದಿಂದ ನಿರ್ಮಾಣವಾದ ಮೊದಲ ಫ್ಲೈ ಓವರ್ ಇದು. ಬಿಡಿಎದಿಂದ ನಿರ್ಮಾಣವಾದ ಫ್ಲೈ ಓವರ್ ನಿರ್ವಹಣೆ ಹೆಸ್ರಲ್ಲಿ 2014ರಲ್ಲಿ ಬಿಬಿಎಂಪಿಗೆ ಹಸ್ತಾಂತರಗೊಂಡಿದೆ. ಸದ್ಯ ಅಂದಿನಿಂದ ಇಂದಿನವರೆಗೂ ಒಂದಲ್ಲ ಒಂದು ರೀತಿಯ ದುಸ್ಥಿತಿಯಲ್ಲಿ ಸುಮ್ಮನಹಳ್ಳಿ ಫ್ಲೈ ಓವರ್ ಇದೆ. ಇದರಿಂದ ಇದ್ದಕ್ಕಿದ್ದಂತೆ ಫ್ಲೈ ಓವರ್ ಮೇಲೆ ಕಾಣಿಸಿಕೊಂಡಿರುವ ಬೃಹತ್ ಗಾತ್ರದ ಹಳ್ಳ ನೋಡಿ ವಾಹನ ಸವಾರರು ಭಯಭೀತರಾಗಿದ್ದಾರೆ.
ಸುಮ್ಮನಹಳ್ಳಿಯ ಬಿಡಿಎ ಫ್ಲೈ ಓವರ್‌ನಲ್ಲಿ ಕಾಂಕ್ರೀಟ್ ಶಿಥಿಲವಾದ ಬಗ್ಗೆ ಪ್ರತಿಕ್ರಿಯಿಸಿದ ಬಿಡಿಎದವರು ನಮಗೂ ಇದಕ್ಕೂ ಸಂಬಂಧ ಇಲ್ಲವಂತಿದ್ದಾರೆ.ಸದ್ಯ ಈ ಫ್ಲೈ ಓವರ್ ಅನ್ನು ನಿರ್ವಹಣೆ ಮಾಡ್ತಿರುವ ಪಾಲಿಕೆಗೆ ಕೇಳಿದ್ರೆ, 2020ರಲ್ಲೂ ಕೂಡ ಇದೇ ರೀತಿ ಬಿರುಕು ಬಿದ್ದಿತ್ತು. ಇದು ಬಿಬಿಎಂಪಿ ನಿರ್ಮಾಣ ಮಾಡಿದ್ದಲ್ಲ. ಬಿಡಿಎ ನಿರ್ಮಾಣ ಮಾಡಿದ್ದು. 2014ರಲ್ಲಿ ಬಿಡಿಎದಿಂದ ಬಿಬಿಎಂಪಿಗೆ ಹಸ್ತಾಂತರಗೊಂಡಿದೆ. ಪದೆ ಪದೇ ಬಿರುಕು ಕಾಣುತ್ತಿರುವ ಹಿನ್ನೆಲೆಯಲ್ಲಿ ಇಡೀ ಫ್ಲೈ ಓವರ್ ಅನ್ನು ನಾನ್ ಡಿಸ್ಟ್ರಿಕ್ಟಿವ್ ಟೆಸ್ಟ್ ಮಾಡುವ ಅವಶ್ಯಕತೆ ಇದೆ. ಇದ್ರಿಂದ ಪಿ.ಜೆ.ಬಿ.ಇಂಜಿನಿಯಸ್೯ ಸಂಸ್ಥೆಯಿಂದ ಸಂಪೂರ್ಣ ಗುಣಮಟ್ಟ ಪರಿಶೀಲನೆ ಮಾಡಲು ಸೂಚಿಸಿದ್ದೇವೆ. ಗುಣಮಟ್ಟ ಪರಿಶೀಲನೆ ಬಳಿಕೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತೆ. ಒಂದು ಕಡೆಯ ಪೋರ್ಷನ್ ಅನ್ನು ಕೂಡಲೇ ಮುಚ್ಚಿ. ಮತ್ತೊಂದು ಕಡೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ ಅಂತ ಬಿಬಿಎಂಪಿ ಪ್ರಧಾನ ಅಭಿಯಂತರ ಬಿ.ಎಸ್.ಪ್ರಹ್ಲಾದ್ ಪ್ರತಿಕ್ರಿಯಿಸಿದ್ದಾರೆ.
ಸದ್ಯ ನ್ಯಾಷನಲ್ ಹೈವೇ ಅಥಾರಿಟಿ ನಿರ್ಮಾಣ ಮಾಡಿರುವ ಪೀಣ್ಯ ಫ್ಲೈ ಓವರ್ ಕೂಡ ಇದೇ ಪರಿಸ್ಥಿತಿಯಲ್ಲಿದ್ದು, ಇನ್ನೂ ಕೂಡ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲ. ಇನ್ನು ಬಿಬಿಎಂಪಿ ನಿರ್ಮಾಣ ಮಾಡಿರು ಸ್ಟೀಲ್ ಬ್ರಿಡ್ಜ್ ಉದ್ಘಾಟನೆಗೂ ಮುನ್ನ ಟಕಾ ಟಕಾ ಅಂತ ಸೌಂಡ್ ಬರುತ್ತಿದೆ. ಇನ್ನು ಇವರಿಗಿಂತ ನಾವೇನೂ ಕಮ್ಮಿ ಇಲ್ಲ ಎನ್ನುವಂತೆ ಬಿಡಿಎ ನಿರ್ಮಾಣದ ಫ್ಲೈ ಓವರ್ ಕಥೆಯಾಗಿದ್ದು, ವಾಹನ ಸವಾರರಂತೂ ಎಚ್ಚರಿಕೆಯಿಂದ ಇರುವುದೇ ಒಳ್ಳೆಯದು.
ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು