Monday, December 23, 2024

ಮಣಿರತ್ನಂ ಪೊನ್ನಿಯಿನ್ ಸೆಲ್ವನ್​​ಗೆ ಸಲಗ ವಿಜಿ ಸಾಥ್..!

ಸೌತ್​ ಸಿನಿದುನಿಯಾದಿಂದ ಮತ್ತೊಂದು ಬ್ಲಾಕ್​ ಬಸ್ಟರ್​ ಸಿನಿಮಾ ಇತಿಹಾಸ ಬರೆಯಲಿದೆ. ಯೆಸ್​​.. ಚೋಳ ಸಾಮ್ರಾಜ್ಯದ ಗತವೈಭವವನ್ನು ತೆರೆಯ ಮೇಲೆ ತರೋಕೆ ಕ್ಯಾಪ್ಟನ್​ ಆಫ್​ ದಿ ಶಿಪ್​ ಮಣಿರತ್ನಂ ಸಿಕ್ಕಾಪಟ್ಟೆ ಕಸರತ್ತು ಮಾಡಿದ್ದಾರೆ. ಇದೀಗ ಮಣಿರತ್ನಂ ಕನಸಿನ ಕೂಸು PS1 ಚಿತ್ರಕ್ಕೆ ಸ್ಯಾಂಡಲ್​ವುಡ್​​ ಸಲಗ ಕೂಡ ಸಾಥ್​ ನೀಡಿದ್ದು, ಮನಸಾರೆ ಹರಸಿದ್ದಾರೆ. ಸಿನಿಮಾ ಬಗ್ಗೆ  ಬ್ಲಾಕ್​​ ಕೋಬ್ರಾ ಹೇಳಿದ್ದೇನು..? ನೀವೇ ಓದಿ.

  • ಮೇಕಿಂಗ್​​​​ ಸ್ಟೈಲ್​ಗೆ ಬಿಗ್​ ಫ್ಯಾನ್​​ ಅಂದ್ರು ಬ್ಲಾಕ್​ ಕೋಬ್ರಾ

ದಕ್ಷಿಣ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಹಲ್​ಚಲ್​ ಎಬ್ಬಿಸಿರುವ ಸಿನಿಮಾ ಪೊನ್ನಿಯನ್​ ಸೆಲ್ವನ್​. ಟ್ರೈಲರ್​ ಮೂಲಕ ವಾವ್ಹ್​​ ಫೀಲ್​ ಕೊಟ್ಟ ಮೈ ನವಿರೇಳಿಸುವ ಇತಿಹಾಸದ ಕಥೆ. ಟ್ರೈಲರ್​ಗೆ ಸಿನಿರಸಿಕರ ಎದೆ ಬಡಿತ ಜೋರಾಗಿದೆ. ರಿಚ್​ ಮೇಕಿಂಗ್​​​, ಬ್ಯೂಟಿಫುಲ್​ ಲೊಕೇಷನ್ಸ್​​ಗಳ ಮೂಲಕ ರೋಚಕ ಚೋಳ ಸಾಮ್ರಾಜ್ಯದ ಗತವೈಭವವನ್ನು ತೆರೆದಿಡೋಕೆ ಸಿನಿಮಾಂತ್ರಿಕ ಮಣಿರತ್ನಂ ಸಜ್ಜಾಗಿದ್ದಾರೆ.

ಎರಡು ಭಾಗಗಳಲ್ಲಿ ತೆರೆಗೆ ಬರಲಿರೋ PS1 ಸಿನಿಮಾಗೆ ಸ್ಯಾಂಡಲ್​​ವುಡ್​ ಸಲಗ ಸಾಥ್​ ನೀಡಿದ್ದಾರೆ. ಬೊಂಬಾಟ್​ ರೆಸ್ಪಾನ್ಸ್​ ಸಿಕ್ಕಿರೋ ಪೊನಿಯನ್​​ ಸೆಲ್ವನ್​ ಟ್ರೈಲರ್​ ನೋಡಿ ದುನಿಯಾ ವಿಜಯ್​ ಕೂಡ ಖುಷಿ ವ್ಯಕ್ತಪಡಿಸಿದ್ದಾರೆ. ನಾನು ಮಣಿರತ್ನಂ ಅವ್ರ ಬಿಗ್​ ಫ್ಯಾನ್​​. ಅವ್ರ ಸಿನಿಮಾ ಗೆಲ್ಲಬೇಕು. ಮೊದಲ ಬಾರಿಗೆ ದೊಡ್ಡ ಕಥೆಯನ್ನು ಹೇಳೋಕೆ ಹೊರಟಿದ್ದಾರೆ. ನಾನು ಸಿನಿಮಾ ತಪ್ಪದೇ ನೋಡ್ತೀನಿ ಎಂದ್ರು.

  • ಮಾನ್ಸೂನ್​ ವೇದಿಕೆಯಲ್ಲಿ ಮಣಿರತ್ನಂ ದರ್ಬಾರ್​​
  • ದುನಿಯಾ ವಿಜಿ ಮಾತಿಗೆ ಕೈ ಮುಗಿದ ಸುಹಾಸಿನಿ..!

ಭಾರತೀಯ ಇತಿಹಾಸದ ಶ್ರೇಷ್ಠ ಆಡಳಿತಗಾರ ರಾಜ ರಾಜ ಚೋಳನ ಕಥೆಯನ್ನು ಮಣಿರತ್ನಂ ಹೇಳಲು ಹೊರಟಿದ್ದಾರೆ. ಪೊನ್ನಿಯನ್​ ಸೆಲ್ವನ್​ ಸಿನಿಮಾ ಸೆ.30ಕ್ಕೆ ಪ್ಯಾನ್​ ಇಂಡಿಯಾ ಲೆವೆಲ್​​ನಲ್ಲಿ ತೆರೆಗೆ ಬರಲಿದೆ. 500 ಕೊಟಿ ಬಜೆಟ್​​ನಲ್ಲಿ ಎರಡು ಭಾಗಗಳಲ್ಲಿ PS1 ಸಿನಿಮಾ ಅಬ್ಬರಿಸಲಿದೆ. ಐಶ್ವರ್ಯಾ ರೈ ಕೂಡ ಸಿನಿಮಾದಲ್ಲಿದ್ದು ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಮೂಡಿಸಿದೆ.

ವಿಕ್ರಮ್​​​. ಜಯಮ್​ ರವಿ, ಕಾರ್ತಿ. ತ್ರಿಶಾ, ಹೀಗೆ ಘಟಾನುಘಟಿ ಕಲಾವಿದ್ರ ಸಮಾಗಮದಲ್ಲಿ ಸಿನಿಮಾ ಮೂಡಿ ಬಂದಿದ್ದು ರಿಲೀಸ್​ಗೆ ಕೌಂಟ್​​ಡೌನ್​ ಶುರುವಾಗಿದೆ. ಈ ನಡುವೆ ಮಾನ್ಸೂನ್​ ರಾಗ ಪ್ರೀ ರಿಲೀಸ್​ ಇವೆಂಟ್​ನಲ್ಲಿ ಪೊನಿಯನ್​ ಸೆಲ್ವನ್​ ಸಿನಿಮಾದ ಕಹಳೆ ಮೊಳಗಿದೆ. ಮಣಿರತ್ನಂ ಅವ್ರ ಪತ್ನಿ ಸುಹಾಸಿನಿ ಎದ್ರು ದುನಿಯಾ ವಿಜಿ PS1 ಸಿನಿಮಾವನ್ನು ಹಾಡಿ ಕೊಂಡಾಡಿದ್ದಾರೆ.  ನನ್ನ ಕಡೆಯಿಂದ ತಪ್ಪದೇ ಮಣಿರತ್ನಂ ಅವರ ಸಿನಿಮಾಗೆ ವಿಶ್​ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸುಹಾಸಿನಿ ವಿನಯದಿಂದ, ವಿಜಯ್​ಗೆ ಕೈ ಮುಗಿದಿದ್ದಾರೆ.

ಅಂತೂ ದಕ್ಷಿಣ ಭಾರತದ ಸಿನಿಮಾಗಳ ದರ್ಬಾರ್​ ಶುರುವಾಗಿದೆ. ಬಿಗ್ಗೆಸ್ಟ್​ ಹೈವೋಲ್ಟೇಜ್​ ಸಿನಿಮಾ ಪೊನ್ನಿಯನ್​ ಸೆಲ್ವನ್​ ಚಿತ್ರದ ಮೇಲೆ ಸಹಜವಾಗಿ ನಿರೀಕ್ಷೆಗಳು ಗರಿಗೆದರಿವೆ. ಇದೀಗ ಸ್ಯಾಂಡಲ್​ವುಡ್​ ಸಲಗ ದುನಿಯಾ ವಿಜಯ್​ ಮಾತುಗಳಿಂದ ಸಿನಿಮಾ ಮೇಲಿನ ಕುತೂಹಲ ದುಪ್ಪಟ್ಟಾಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES