Friday, January 10, 2025

‘ಕುತಂತ್ರ ಮಾಡಿದವರಿಗೆ ಗಣೇಶ ಶಾಪ ಕೊಡಲಿ : ಪ್ರಮೋದ್ ಮುತಾಲಿಕ್

ಕಲಬುರಗಿ : ಚೈತ್ರಾ ಕುಂದಾಪುರ, ಕಾಳಿಸ್ವಾಮಿ, ನಿಹಾರಿಕ ಮತ್ತು ಪ್ರಮೋದ್ ಮುತಾಲಿಕ್ ಸೇರಿ ನಾಲ್ವರ ಭಾಷಣಕ್ಕೆ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಜಿಲ್ಲೆ ಜೇವರ್ಗಿ ಪಟ್ಟಣದಲ್ಲಿ ನಡೆಯಬೇಕಿದ್ದ ಅದ್ಧೂರಿ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ನಾನು ಸಮಾರಂಭದಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಕಲಬುರಗಿ ಜಿಲ್ಲಾಧಿಕಾರಿ ನನಗೆ ನಿರ್ಬಂಧ ಹೇರಿದ್ದಾರೆ. ದೇವರ ಆರಾಧನೆ ದರ್ಶನ ಮಾಡುವುದು, ಗಣೇಶನ ಹಬ್ಬ ಬರೋದು ಒಮ್ಮೆಯೇ. ಡಿಸಿ ನಮ್ಮ ಸ್ವಾತಂತ್ರ್ಯ ಹರಣ ಮಾಡುತ್ತಿದ್ದಾರೆ, ಇದು ಅಕ್ಷಮ್ಯ ಅಪರಾಧ. ಇದರ ಹಿಂದೆ ಯಾವ ಶಕ್ತಿ, ಯಾವ ಸಂಘಟನೆ ಇದೆ ಅನ್ನೊದು ಮುಖ್ಯವಲ್ಲ ಒಬ್ಬ ವ್ಯಕ್ತಿಗೆ ಇಂತಹ ಕಾರ್ಯಕ್ರಮದಲ್ಲಿ ನಿರ್ಬಂಧ ಹೇರಿರೋದು ಸರಿಯಲ್ಲ. ಮುತಾಲಿಕ್ ಬರ್ತಾರೆ ಅಂತಾ ಸಾವಿರಾರು ಜನ ದಾರಿ ನೋಡುತ್ತಿದ್ದಾರೆ.

ಅದಲ್ಲದೇ, ಮುತಾಲಿಕ್‌ರನ್ನ ಭೇಟಿ ಮಾಡಲು ಕಾದಿದ್ದ ಜನರಿಗೆ ಇಂದು ನಿರಾಶೆಯಾಗಿದೆ. ನಿರ್ಬಂಧ ಹೇರಿದ್ದ ಜನರಿಗೆ ನನ್ನ ಧಿಕ್ಕಾರ, ಕುತಂತ್ರದ ಹಿಂದಿರುವರಿಗೆ ಗಣೇಶ ಶಾಪ ಕೊಡಲಿ ಎಂದು ಆಕ್ರೋಶ ಹೊರಹಾಕಿದರು.

RELATED ARTICLES

Related Articles

TRENDING ARTICLES