Monday, December 23, 2024

ಪಾಕಿಸ್ತಾನ ತಂಡದ ಹೊಸ ಜೆರ್ಸಿಯನ್ನ ಕಲ್ಲಂಗಡಿಗೆ ಹೋಲಿಸಿದ ನೆಟ್ಟಿಗರು.!

ನವದೆಹಲಿ: ಅಕ್ಟೋಬರ್​ 16 ರಿಂದ ಆರಂಭವಾಗುವ ಐಸಿಸಿ ಟಿ-20 ವಿಶ್ವಕಪ್ ಗಾಗಿ ಪಾಕಿಸ್ತಾನ ತಂಡದ ಹೊಸ ಜೆರ್ಸಿ ವಿನ್ಯಾಸ ನಗೆಪಾಟಲಿಗೀಡಾಗಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಪಾಕ್ ತಂಡದ ನಾಯಕ ಬಾಬರ್ ಆಜಂ ನೂತನ ಜೆರ್ಸಿ ಧರಿಸಿ ಫೋಟೋಶೂಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಪಾಕ್ ಜೆರ್ಸಿಯ ವಿನ್ಯಾಸವನ್ನು ಕಲ್ಲಂಗಡಿ ಹಣ್ಣಿಗೆ ಹೋಲಿಸಿ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಣಕಿಸುತ್ತಿದ್ದಾರೆ. ಈ ಪೊಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಲ್ಲದೇ, ಪಾಕ್ ಹೊಸ ಜೆರ್ಸಿಯ ವಿನ್ಯಾಸವನ್ನು ಸೆಂಟರ್​ ಪ್ರೂಟ್​ಗೆ ಹೋಲಿಸಿದ್ದಾರೆ. ಹಲವು ನೆಟ್ಟಿಗರು ಹಲವು ರೀತಿಯಲ್ಲಿ ಟ್ರೋಲ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಣಕಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES