Sunday, January 19, 2025

ವಿಶಿಷ್ಟವಾಗಿ ಪ್ರಧಾನಿ ಮೋದಿ ಜನ್ಮದಿನ ಆಚರಿಸಿದ ಯುವಕರು.!

ಶಿವಮೊಗ್ಗ: ಸೆ.17 ರಂದು ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನ ಅಡಿಕೆ ತೋಟದಲ್ಲಿ ಇಬ್ಬರು ಯುವಕರು ವಿಶಿಷ್ಟ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ.

ಈ ಇಬ್ಬರು ಯುವಕರು ಅಡಿಕೆ ಮರ ಹತ್ತಲು ಬಳಸುವ ಎರಡು ಮಷಿನ್​ ಬಳಕೆ ಮಾಡಿಕೊಂಡು. ಜೊತೆಯಲ್ಲಿ ಮೋದಿ ಇರುವ ದೊಡ್ಡ ಬ್ಯಾನರ್ ಮೇಲಕ್ಕೆ​ ಇಡಿದುಕೊಂಡು ಹೋದಂತೆ ಪ್ರಧಾನಿ ಇರುವ ಸುರುಳಿ ಬಿಚ್ಚಿ ಜನ್ಮದಿನ ಆಚರಿಸದ್ದಾರೆ.

ಮೋದಿ ಭಾವಚಿತ್ರದ ಯುವಕರು ಬ್ಯಾನರ್​ ತೆರೆದುಕೊಳ್ಳುವ ಜೊತೆ ಹೂವಿನ ಸುರಿಮಳೆಗೈದಿದ್ದಾರೆ. ಅಡಿಕೆ ತೋಟದಲ್ಲಿ ಇಂತಹದ್ದೊಂದು ವಿಶಿಷ್ಟ ರೀತಿಯಲ್ಲಿ ಯುವಕರು ದೃಶ್ಯ ಸೃಷ್ಟಿಸಿದ್ದಾರೆ.

ನರೇಂದ್ರ ಮೋದಿಗೆ ಮಲೆನಾಡಿಗರ ವಿಶಿಷ್ಟ ರೀತಿಯಲ್ಲಿ ಶುಭಕೋರಿದ ವಿಡಿಯೋವನ್ನ ಕಿರಣ್ ಕುಮಾರ್ ಎಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

RELATED ARTICLES

Related Articles

TRENDING ARTICLES