Monday, December 23, 2024

‘ದೇವರು ಮಾಡಿದ ಆಕಾರ’ಕ್ಕೆ ಸಿಕ್ತು ಅಪ್ಪು ದೇವ್ರ ಸಹಕಾರ

ಎಮ್​.ಆರ್​​​.ಪಿ ಅನ್ನೋ ಕ್ಯಾಚಿ ಟೈಟಲ್​ ಮೇಲೆ ವಿಭಿನ್ನ ಸಿನಿಮಾ ತೆರೆಗೆ ಬರ್ತಿದೆ. ಪಕ್ಕಾ ಕಾಮಿಡಿ ಜಾನರ್​​ನಲ್ಲಿ ಕಮಾಲ್​ ಮಾಡ್ತಿರೋ ಎಮ್​ಆರ್​ಪಿ ಚಿತ್ರದ ಟ್ರೈಲರ್​​​ ನಕ್ಕು ನಗಿಸುತ್ತದೆ. ಇದೀಗ ಈ ಚಿತ್ರದ ಹಾಡಿಗೆ ಅಪ್ಪು ಸಾಥ್​ ನೀಡಿದ್ದು, ಸಿಕ್ಕಾಪಟ್ಟೆ ಫನ್​​ ನೀಡ್ತಿದೆ. ದೇವರು ನೀಡಿದ ಗಜಕೇಸರಿ ಆಕಾರಕ್ಕೆ ಚಿತ್ರಪ್ರೇಮಿಗಳು ಫಿದಾ ಆಗಿದ್ದು ಸಖತ್​ ಸೌಂಡ್​ ಮಾಡ್ತಿದೆ. ಯೆಸ್​​​.. ಹೇಗಿದೆ ಎಮ್​​ಆರ್​​ಪಿ ಕ್ಯಾಚಿ ಸಾಂಗ್​​​​​​​​..? ನೀವೇ ಓದಿ.

  • ಗಜಕೇಸರಿ ಭಾವದಲ್ಲಿ ಹರಿಯ ಬಿಂದಾಸ್​​ ಕಾಮಿಡಿ ಕಿಕ್ಕು

ಕನ್ನಡ ಸಿನಿ ಇತಿಹಾಸದಲ್ಲಿ ಮ್ಯಾಜಿಕ್​ ಮಾಡಿದ್ದ ಫ್ರೆಂಡ್ಸ್​ ಸಿನಿಮಾ ಯಾರಿಗೂ ಮರೆಯೋಕೆ ಸಾಧ್ಯವಿಲ್ಲ. ಈ ಸಿನಿಮಾದಲ್ಲಿ ನಟಿಸಿದ್ದ ಹರಿ ರೋಲ್​​​ಗೆ ಸಿನಿರಸಿಕರು ನಕ್ಕು ನಕ್ಕು ಸುಸ್ತಾಗಿದ್ರು. ಗಣಪನ ಹೊಟ್ಟೆ ಬಿಟ್ಕೊಂಡು, ಆನೆ ಗಾತ್ರದಲ್ಲಿದ್ದ ಹರಿಯ ಆ್ಯಕ್ಟಿಂಗ್​ಗೆ ಫ್ಯಾನ್ಸ್​​ ಮೆಚ್ಚಿಕೊಂಡಿದ್ರು. ಇದಾದ ನಂತ್ರ ದೇವರು ವರವನು ಕೊಟ್ರೆ ಚಿತ್ರದ ಮೂಲಕವೂ ನಗೆಯ ನಶೆ ಹಿಡಿಸಿದ್ದ ಕಾಮಿಡಿಯನ್​​​​​ ಹರಿ. ಇದೀಗ ಮೊದಲ ಬಾರಿಗೆ ನಾಯಕನಾಗಿ ಸಿಲ್ವರ್​ ಸ್ಕ್ರೀನ್​ ತಮ್ಮ ಟ್ಯಾಲೆಂಟ್​ ಪ್ರೂವ್​ ಮಾಡೋಕೆ ಬರ್ತಿದ್ದಾರೆ.

ಯೆಸ್​​.. ಅಂದ ಚಂದ, ಕಟ್ಟು ಮಸ್ತಾದ ದೇಹ, ಹುರಿಗೊಳಿಸಿದ ಮೈ ಕೈ ಇದ್ರೆ ಮಾತ್ರ ಹೀರೋ ಅನ್ನೋ ಕಾಲ ಬದ್ಲಾಗಿದೆ. ಹೀಗೆನಿದ್ರೂ ಕಂಟೆಂಟ್​ ಕಥೆಗಳಿಗೆ, ಅದ್ಭುತ ನಟನೆಗೆ ಪ್ರೇಕ್ಷಕ ಹುಡುಕಿಕೊಂಡು ಬರ್ತಾನೆ. ಇದೀಗ ಚೊಚ್ಚಲ ಸಿನಿಮಾದಲ್ಲೆ ನಟ ಹರಿ ಸಖತ್​ ನಿರೀಕ್ಷೆ ಮೂಡಿಸಿದ್ದಾರೆ. ಲೇಟ್​ ಆದ್ರೂ ಲೆಟೆಸ್ಟ್​ ಆಗಿ ತೆರೆಗೆ ಬರಲಿರೋ ಎಮ್​ಆರ್​​ಪಿ ಸಿನಿಮಾಗೆ ಯುವರತ್ನ ಅಪ್ಪು ಕೂಡ ಸಾಥ್​ ನೀಡಿದ್ದಾರೆ. ಮೋಸ್ಟ್​ ರೆಸ್ಪಾನ್ಸಿಬಲ್​ ಪರ್ಸನ್​ಗೆ ಅಪ್ಪು ಬೆಂಬಲ ಸೂಚಿಸಿದ್ದು ತಪ್ಪದೇ ಸಿನಿಮಾ ನೋಡುವಂತೆ ಮನವಿ ಮಾಡಿದ್ದಾರೆ.

  • ಅಪ್ಪುಗೆ ಸಿಕ್ಕಾಪಟ್ಟೆ ಹಿಡಿಸಿದ MRP ಹಿಟ್​ ಸಾಂಗ್​​
  • ಡುಮ್ಮಣ್ಣ ಹರಿಗೆ ಜೋಡಿಯಾಗಿ ಚೈತ್ರಾ ಜೋಶ್​​​

ಎಮ್​ಎನ್​ವೈ ಪ್ರೊಡಕ್ಷನ್​, ಎಮ್​. ಡಿ ಶ್ರೀಧರ್​​​ ಹಾಗೂ ಎ.ವಿ ಕೃಷ್ಣಕುಮಾರ್​​ ನಿರ್ಮಾಣದಲ್ಲಿ ಮೂಡಿ ಬರ್ತಿರೋ ಸಿನಿಮಾ ಎಮ್​ಆರ್​ಪಿ. ಬಾಹುಬಲಿ ನಿರ್ದೇಶನದಲ್ಲಿ ಸಿಕ್ಕಾಪಟ್ಟೆ ಜನಮನ್ನಣೆ ಪಡೆದಿರೋ ಎಮ್​ಆರ್​​​ಪಿ ಚಿತ್ರದ ಮೊದಲ ಹಾಡಿಗೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ದೇವತಾ ಮನುಷ್ಯ, ಬಂಗಾರ ಸನ್​ ಆಫ್​ ಬಂಗಾರದ ಮನುಷ್ಯ ಅಪ್ಪು ಅವ್ರ ಆಶೀರ್ವಾದದೊಂದಿದೆ ಚೊಚ್ಚಲ ಹಾಡನ್ನು ರಿಲೀಸ್​ ಮಾಡಲಾಗಿದೆ. ಈ ಹಾಡು ನೋಡಿ ಅಪ್ಪು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ. ನಾಗೇಂದ್ರ ಪ್ರಸಾದ್​ ಸಾಹಿತ್ಯ, ಸಂಚಿತ್​ ಹೆಗಡೆ ಗಾಯನದಲ್ಲಿ ಹಾಡು ಸೂಪರ್​​ ಹಿಟ್ ಆಗಿದೆ.

ದೇವರು ಮಾಡಿದ,ದೇವರು ನೀಡಿದ ಆಕಾರ ಹಾಡಿನಲ್ಲಿ ನಗು ತರಿಸುವ ಸಾಕಷ್ಟು ಸೀನ್​ಗಳಿವೆ. ದಪ್ಪಗೆ ಇದ್ರೆ ಯಾಕೆ ನಗ್ತೀರಾ. ಗಣೇಶನಿಗೆ ಎಲ್ಲಾ ಕಡೆ ಜೈಕಾರ. ದಪ್ಪ ದಪ್ಪ ಅನ್ಬೇಡಿ, ನಮ್ಮ ಹಾಗೆ ಯಾರು ಇಲ್ಲ ಭೂಮಿ ತೂಕದವ್ರು ಅನ್ನೋ ಸಾಲುಗಳು ನಗು ತರಿಸುತ್ತವೆ. ಒಟ್ನಲ್ಲಿ ಸಿಕ್ಕಾಪಟ್ಟೆ ದಪ್ಪ ಇರೋ ನಾಯಕನ ಲೈಫ್​ನಲ್ಲಿ ಆಗೋ ಕಾಮಿಡಿ ಸನ್ನಿವೇಶಗಳ ಮೇಲೆ ಈ ಸಿನಿಮಾ ಇರಲಿದೆ. ಈಗಾಗ್ಲೇ ಟ್ರೈಲರ್​​​ನಲ್ಲಿ ಕಾಮಿಡಿ ಕಿಕ್ಕಿಗೆ ಪ್ರೇಕ್ಷಕ ಕೂಡ ಥ್ರಿಲ್​ ಆಗಿದ್ದಾನೆ.

ಸದ್ಯದಲ್ಲೇ ಎಮ್​ಆರ್​​ಪಿ ಸಿನಿಮಾ ತೆರೆಗೆ ಬರಲಿದೆ. ಜತೆಗೆ ಹರಿಗೆ ಜೋಡಿಯಾಗಿರೋ ಚೈತ್ರಾ ರೆಡ್ಡಿ ಕೂಡ ಮುದ್ದಾಗಿದ್ದು, ಅಜಗಜಾಂತರ ವ್ಯತ್ಯಾಸವಿರೋ ಈ ಜೋಡಿಯ ಪ್ರೇಮಕಥೆಯನ್ನು ನೋಡೋ ಉತ್ಸಾಹ ದುಪ್ಪಟ್ಟಾಗಿದೆ. ಟ್ರೈಲರ್​ನಲ್ಲಿ ಆ್ಯಕ್ಷನ್​​​​, ಕಾಮಿಡಿ, ಲವ್​​​, ಎಮೋಷನ್​​​​ ಎಲ್ಲವೂ ಡಬಲ್​ ಆಗಿದ್ದು ಚಿತ್ರರಸಿಕರಿಗೆ ಇಷ್ಟವಾಗೋದ್ರಲ್ಲಿ ನೋ ಡೌಟ್​​​​. ಎನಿವೇ, ಅಪ್ಪು ಬ್ಲೆಸ್ಸಿಂಗ್​ ಇರೋ ಎಮ್​ಆರ್​​ಪಿ ಚಿತ್ರಕ್ಕೆ ಆಲ್​ ದಿ ಬೆಸ್ಟ್​ ಹೇಳೋಣ.

ರಾಕೇಶ್​ ಆರುಂಡಿ,ಫಿಲ್ಮ್​​​​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES