Wednesday, January 22, 2025

ಅಬ್ಬಬ್ಬಾ..! ರಜಿನಿ, ಚಿರು, ವಿಜಯ್​ನ ಮೀರಿಸಿದ ಉಪ್ಪಿ

ಕನ್ನಡಿಗರ ಮೇಕಿಂಗ್​ ಸ್ಟೈಲ್​ಗೆ ಮತ್ತೊಮ್ಮೆ ಇಡೀ ಇಂಡಿಯಾ ಸ್ಟನ್​ ಅಗಿದೆ. ಕಬ್ಜ ಟೀಸರ್​​ಗೆ ಭಾರತೀಯ ಚಿತ್ರರಂಗವೇ ಮೂಖವಿಸ್ಮಿತವಾಗಿದೆ. ಬಹುಕೋಟಿ ವೆಚ್ಚದಲ್ಲಿ ಮೂಡಿ ಬರ್ತಿರೋ ಕಬ್ಜ ಟೀಸರ್​​ ಕಂಡು ಎಲ್ಲರು ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ. ಎರಡೇ ದಿನದಲ್ಲಿ ಕಬ್ಜ ಮಾಡಿದ ಕಮಾಲ್​​ಗೆ ಸಿನಿಪ್ರೇಮಿಗಳು ಶಾಕ್​ಗೆ ಒಳಗಾಗಿದ್ದಾರೆ. ಯೆಸ್​​​.. ರಜಿನಿ, ಚಿರು, ವಿಜಯ್​ ಅಂತಾ ಘಟಾನುಘಟಿಗಳನ್ನು ಹಿಂದಿಕ್ಕಿದೆ ಕಬ್ಜ.

  • ಕನ್ನಡಿಗರ ಟೀಸರ್​ ನೋಡಿ ಸ್ಟನ್​ ಆದ ಪರಭಾಷಿಗರು..!

ರಿಯಲ್ ಸ್ಟಾರ್​ ಉಪೇಂದ್ರ ಹಾಗೂ ಸ್ಯಾಂಡಲ್​ವುಡ್​​ ಹೆಬ್ಬುಲಿ ಕಿಚ್ಚ ಸುದೀಪ್​ ತಾರಾಗಣದಲ್ಲಿ ಮುಡಿ ಬರ್ತಿರೋ ಬಹು ಕೋಟಿ ವೆಚ್ಚದ ಸಿನಿಮಾ ಕಬ್ಜ. ಸಿನಿಮಾ ಸೆಟ್ಟೇರಿದ ದಿನದಿಂದ್ಲೇ ಇಡೀ ಭಾರತೀಯ ಚಿತ್ರರಂಗವೇ ಕುತೂಹಲದಿಂದ ಎದ್ರು ನೋಡ್ತಿರೋ ಮೋಸ್ಟ್​​ ಎಕ್ಸ್​​​​ಪೆಕ್ಟೆಡ್​ ಸಿನಿಮಾ ಇದು. ಟೀಸರ್​​​ ರಿಲೀಸ್​ ಡೇಟ್​​ ಅನೌನ್ಸ್​ ಮಾಡಿದ್ದೇ ತಡ ಎಲ್ಲರೂ ಚಿತ್ತ ಕಬ್ಜ ಸಿನಿಮಾ ಕಡೆ ನಿಟ್ಟಿತ್ತು. ಇದೀಗ ರಿಲೀಸ್​ ಆದ ಎರಡೇ ದಿನದಲ್ಲಿ 2 ಕೋಟಿ ವೀವ್ಸ್​​ ಕಂಡು ಇತಿಹಾಸ  ನಿರ್ಮಿಸಿದೆ.

ಗ್ಯಾಂಗ್​ಸ್ಟರ್​ ರೋಲ್​ನಲ್ಲಿ ಉಪ್ಪಿ ಮಿಂಚಿದ್ರೆ, ಖಡಕ್​​ ಪೊಲೀಸ್​ ಕಾಪ್​​​ ರೋಲ್​ನಲ್ಲಿ ಕಿಚ್ಚ ಅಬ್ಬರಿಸಿದ್ದಾರೆ. ಅಂತೂ ಟೀಸರ್​ ನೋಡಿದ ಪರಭಾಷಿಗರು ಮಂತ್ರಮುಗ್ಧವಾಗಿದ್ದಾರೆ. ರಜಿನಿಕಾಂತ್​​​​, ಚಿರಂಜೀವಿ, ವಿಜಯ್​ ಅಂತ ಘಟಾನುಘಟಿ ಸಿನಿಮಾಗಳೆ ಕನ್ನಡಿಗರ ಮೇಕಿಂಗ್​​​​​​ ಮುಂದೆ ಮುಗ್ಗರಿಸಿವೆ. ಯೆಸ್​​​.. ರಜಿನಿಕಾಂತ್​ ಸಿನಿಮಾಗಳ ಟೀಸರ್​​​​ಗೂ ಈ ಪಾಟಿ ರೆಸ್ಪಾನ್ಸ್​​ ಸಿಕ್ಕಿಲ್ಲ. ಇಡೀ ವಿಶ್ವವೇ ಎದ್ರು ನೋಡೋ ರಜಿನಿ, ಚಿರಂಜೀವಿ, ವಿಜಿ ಸಿನಿಮಾ ಟೀಸರ್​​​ಗಳು ಸಪ್ಪೆಯಾಗ್ತಿವೆ.

  • ವಾವ್ಹ್​ ಫೀಲ್​ ಕೊಟ್ಟ ಟೀಸರ್​​​.. ನಿಬ್ಬೆರಗಾದ ಸಿನಿದುನಿಯಾ
  • ಕಬ್ಜ ಅಡ್ಡಾದಲ್ಲಿ ಖುಷಿಯೋ ಖುಷಿ.. ಉಪ್ಪಿ, ಚಂದ್ರು ಖುಷ್​​​​​​​​​

ಕಬ್ಜ ಸಿನಿಮಾದ ನಂತ್ರ ಬಾಲಿವುಡ್​​, ಟಾಲಿವುಡ್​​, ಕಾಲಿವುಡ್​​​ಗೂ ಬಿಸಿ ಮುಟ್ಟಿದೆ. ರವಿ ಬಸ್ರೂರು ಮ್ಯುಸಿಕ್​ ಕಂಪೋಸ್​​​, ಶಿವಕುಮಾರ್​ ಆರ್ಟ್​​ ವರ್ಕ್​​​, ಆರ್​​. ಚಂದ್ರು ಮೇಕಿಂಗ್​​ ಸ್ಟೈಲ್​​​​ಗೆ ಪರಭಾಷಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಟೀಸರ್​ಗಾಗಿ ಕಾದು ಕೂತಿದ್ದ ಪ್ರೇಕ್ಷಕರು ರಿಪೀಟ್​​ ಮೋಡ್​ನಲ್ಲಿ ಟೀಸರ್​​ ನೋಡಿ ಎಂಜಾಯ್​ ಮಾಡಿದ್ದಾರೆ. ರೆಟ್ರೋ ಭೂಗತ ಲೋಕ ಕಂಡು ಕ್ಲೀನ್​ ಬೊಲ್ಡ್​ ಆಗಿದ್ದಾರೆ. 20 ಮಿಲಿಯನ್​ಗೂ ಅಧಿಕ ವೀಕ್ಷಣೆ ಕಂಡು ಕಬ್ಜ ಟೀಸರ್​​ ಮುನ್ನುಗ್ತಿದೆ. ಇದೀಗ ಈ ಖುಷಿಯನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದೆ ಚಿತ್ರತಂಡ.

ಕನ್ನಡದ ಕೆಜಿಎಫ್​​ ಚಾಪ್ಟರ್​ 2 ಒಂದೇ ದಿನದಲ್ಲಿ 70 ಮಿಲಿಯನ್​ ಗೂ ಅಧಿಕ ವೀಕ್ಷಣೆ  ಕಂಡಿತ್ತು. ವರ್ಲ್ಡ್​​ ವೈಡ್​ ದಾಖಲೆ ಬರೆದಿದ್ದ ಕೆಜಿಎಫ್​ ಹಾದಿಯಲ್ಲೆ ಪ್ಯಾನ್​ ಇಂಡಿಯಾ ಸಿನಿಮಾ ಕಬ್ಜ ದಾಖಲೆ ಮುರಿಯಲು ಸಜ್ಜಾಗಿದೆ. ರಾಣಾ ದಗ್ಗುಬಾಟಿ, ಶ್ರೇಯಾ ಶರಣ್​​​ ಲೀಡ್​ ರೋಲ್​ನಲ್ಲಿ ಕಬ್ಜ ಕಮಾಲ್​ ಮಾಡಲಿದೆ.

ರಾಕೇಶ್​ ಆರುಂಡಿ, ಪಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES