Monday, December 23, 2024

ಕೆಜಿಎಫ್’ನಂತೆ ಉಪೇಂದ್ರ ನಟನೆಯ ‘ಕಬ್ಜ’ ಟೀಸರ್ ನ್ಯೂ ರೆಕಾರ್ಡ್

ಬೆಂಗಳೂರು: ರಿಯಲ್ ಸ್ಟಾರ್​ ಉಪೇಂದ್ರ ನಟನೆಯ ‘ಕಬ್ಜ’ ಟೀಸರ್ ಯೂಟ್ಯೂಬ್​ನಲ್ಲಿ ಎರಡು ಕೋಟಿಗೂ ಅಧಿಕ ವೀವ್ಸ್​ ಪಡೆದು ದಾಖಲೆ ಮಾಡಿದೆ.

ಕೆಜಿಎಪ್​ನಂತೆ ಕನ್ನಡ ಇನ್ನೊಂದು ಸಿನಿಮಾ ದಾಖಲೆ ಮಟ್ಟದಲ್ಲಿ ವೀವ್ಸ್​ ಪಡೆದಿದ್ದು, ಕಬ್ಜ ನಿನ್ನೆ ಕೋಟಿ ವೀಕ್ಷಕರಿಂದ‌ ಹಿಟ್ಸ್ ಪಡೆದಿತ್ತು. ಇಂದು ಸೆ.10 (ಎರಡೇ ದಿನದಲ್ಲಿ) ಕಬ್ಜ ಟೀಸರ್ ಗೆ ಎರಡು ಕೋಟಿ ದಾಖಲೆ ಮಟ್ಟದಲ್ಲಿ ವೀವ್ಸ್ ಪಡೆದು, ಯೂಟ್ಯೂಬ್​ನಲ್ಲಿ ದಾಖಲೆಯ ನಾಗಾಲೋಟ ಹಾಕುತ್ತಿದೆ.

ಈ ಸಿನಿಮಾವನ್ನ 100 ಕೋಟಿ ರೂ ವೆಚ್ಚದಲ್ಲಿ ಆರ್ ಚಂದ್ರು ನಿರ್ದೇಶಿಸಿ, ನಿರ್ಮಿಸ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟ ಉಪೇಂದ್ರ ಜೊತೆ ನಟ ಕಿಚ್ಚ ಸುದೀಪ್ ನಟಿಸಿದ್ದಾರೆ. ನಟಿ ಶ್ರಿಯಾ ಸರಣ್ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

ಕಬ್ಜ 1940 ರಿಂದ 1980ರ ಕಾಲಘಟ್ಟದಲ್ಲಿ ನಡೆಯೋ ಭೂಗತಲೋಕದ ಕಥೆಯಾಗಿದೆ. ಕನ್ನಡದ ಜೊತೆ ಏಳು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಈ ಸಿನಿಮಾ ಮೇಕಿಂಗ್ ಗೆ ಪ್ಯಾನ್ ಇಂಡಿಯಾ ಸಿನಿರಸಿಕರು ಥ್ರಿಲ್ ಆಗಿದ್ದಾರೆ.

RELATED ARTICLES

Related Articles

TRENDING ARTICLES