Friday, May 17, 2024

ರಾಜ್ಯದಲ್ಲಿ ಐಸಿಸ್​ ಶಂಕಿತ ಉಗ್ರನ ಬಂಧನ.!

ಶಿವಮೊಗ್ಗ : ಶಿವಮೊಗ್ಗ ಗ್ರಾಮಂತರ ಪೊಲೀಸ್​ ಕಾರ್ಯಾಚರಣೆಯಿಂದ ಇಂದು ಐಸಿಸಿ ಜತೆ ನೇರವಾಗಿ ಸಂಪರ್ಕವಿದ್ದ ಶಂಕಿತ ಉಗ್ರನ ಬಂಧನ ಮಾಡಲಾಗಿದೆ.

ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ಶಿವಮೊಗ್ಗ ಗ್ರಾಮಂತರ ಪೊಲೀಸರು, ಯುಎಪಿಎ ಅಡಿ ಕೇಸ್​ ದಾಖಲಿಸಿ ಶಂಕಿತ ಎ3 ಆರೋಪಿ ಯಾಸೀನ್​ ನನ್ನ ಬಂಧನ ಮಾಡಿ ತೀವ್ರ ತನಿಖೆಗೆ ಒಳಪಡಿಸಲಾಗುತ್ತಿದೆ. ಇನ್ನೂಳಿದ ಎ2 ಹಾಗೂ ಎ3 ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ರಾಜ್ಯದಲ್ಲಿ ಬಾಂಬ್​ ಬ್ಲಾಸ್ಟ್​ ಸೇರಿದಂತೆ ಉಗ್ರ ಕೃತ್ಯವೆಸಗಲು ಯಾಸೀನ್ ಟೀಂ​ ಐಸಿಸ್​ ಜತೆಗೆ ಟ್ರೇನಿಂಗ್​ ಪಡೆದಿತ್ತು ಎಂದು ಶಂಕಿಸಲಾಗಿದೆ. ಇನ್ನು ಶಂಕಿತ ಉಗ್ರರ ಜತೆಗೆ ಶಿವಮೊಗ್ಗ, ಮಂಗಳೂರು ನಂಟು ಇರೋದು ಪೊಲೀಸ್​ ತನಿಖೆಯಲ್ಲಿ ತಿಳಿದಿದೆ ಎನ್ನಲಾಗಿದೆ.

ತಲೆ ಮರೆಸಿಕೊಂಡಿರುವ ಎ1 ಎ2 ಆರೋಪಿಗಾಗಿ ತೀವ್ರ ಶೋಧನೆ ನಡೆಸಿದ್ದಾರೆ. ರಾಜ್ಯದ ಹಲವೆಡೆ ಈ ಮೂವರು ವಿದ್ವಾಂಸಕ ಕೃತ್ಯಕ್ಕೆ ಸ್ಕೆಚ್​ ಹಾಕಿದ್ದರು. ಒಟ್ಟು ಮೂವರ ವಿರುದ್ಧ ಎಫ್ಐಆರ್​​ ದಾಖಲಾಗಿದೆ. ಎ3 ಆರೋಪಿ ಶಿವಮೊಗ್ಗ ನಗರದ ಸಿದ್ದೇಶ್ವರ ನಗರದ ಯಾಸೀನ್ ಇಂಜನೀಯರ್​ ಪದವಿಧರನಾಗಿದ್ದಾನೆ.​

ತೀರ್ಥಹಳ್ಳಿಯ ಸೊಪ್ಪುಗುಡ್ಡೆಯವನು ಶಾರಿಕ್ ಎ 1 ಆರೋಪಿ, ಮಂಗಳೂರು ನಿವಾಸಿಯಾದ ಎ2 ಮಾಜ್ ಎಂದು ತಿಳಿಸಲಾಗಿದೆ.

RELATED ARTICLES

Related Articles

TRENDING ARTICLES