ಶಿವಮೊಗ್ಗ : ಶಿವಮೊಗ್ಗ ಗ್ರಾಮಂತರ ಪೊಲೀಸ್ ಕಾರ್ಯಾಚರಣೆಯಿಂದ ಇಂದು ಐಸಿಸಿ ಜತೆ ನೇರವಾಗಿ ಸಂಪರ್ಕವಿದ್ದ ಶಂಕಿತ ಉಗ್ರನ ಬಂಧನ ಮಾಡಲಾಗಿದೆ.
ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ಶಿವಮೊಗ್ಗ ಗ್ರಾಮಂತರ ಪೊಲೀಸರು, ಯುಎಪಿಎ ಅಡಿ ಕೇಸ್ ದಾಖಲಿಸಿ ಶಂಕಿತ ಎ3 ಆರೋಪಿ ಯಾಸೀನ್ ನನ್ನ ಬಂಧನ ಮಾಡಿ ತೀವ್ರ ತನಿಖೆಗೆ ಒಳಪಡಿಸಲಾಗುತ್ತಿದೆ. ಇನ್ನೂಳಿದ ಎ2 ಹಾಗೂ ಎ3 ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ರಾಜ್ಯದಲ್ಲಿ ಬಾಂಬ್ ಬ್ಲಾಸ್ಟ್ ಸೇರಿದಂತೆ ಉಗ್ರ ಕೃತ್ಯವೆಸಗಲು ಯಾಸೀನ್ ಟೀಂ ಐಸಿಸ್ ಜತೆಗೆ ಟ್ರೇನಿಂಗ್ ಪಡೆದಿತ್ತು ಎಂದು ಶಂಕಿಸಲಾಗಿದೆ. ಇನ್ನು ಶಂಕಿತ ಉಗ್ರರ ಜತೆಗೆ ಶಿವಮೊಗ್ಗ, ಮಂಗಳೂರು ನಂಟು ಇರೋದು ಪೊಲೀಸ್ ತನಿಖೆಯಲ್ಲಿ ತಿಳಿದಿದೆ ಎನ್ನಲಾಗಿದೆ.
ತಲೆ ಮರೆಸಿಕೊಂಡಿರುವ ಎ1 ಎ2 ಆರೋಪಿಗಾಗಿ ತೀವ್ರ ಶೋಧನೆ ನಡೆಸಿದ್ದಾರೆ. ರಾಜ್ಯದ ಹಲವೆಡೆ ಈ ಮೂವರು ವಿದ್ವಾಂಸಕ ಕೃತ್ಯಕ್ಕೆ ಸ್ಕೆಚ್ ಹಾಕಿದ್ದರು. ಒಟ್ಟು ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಎ3 ಆರೋಪಿ ಶಿವಮೊಗ್ಗ ನಗರದ ಸಿದ್ದೇಶ್ವರ ನಗರದ ಯಾಸೀನ್ ಇಂಜನೀಯರ್ ಪದವಿಧರನಾಗಿದ್ದಾನೆ.
ತೀರ್ಥಹಳ್ಳಿಯ ಸೊಪ್ಪುಗುಡ್ಡೆಯವನು ಶಾರಿಕ್ ಎ 1 ಆರೋಪಿ, ಮಂಗಳೂರು ನಿವಾಸಿಯಾದ ಎ2 ಮಾಜ್ ಎಂದು ತಿಳಿಸಲಾಗಿದೆ.