Friday, December 20, 2024

ದಾಯಾದಿ ಕಲಹಕ್ಕೆ ನೂರಾರು ಅಡಿಕೆ ಸಸಿಗಳ ಮಾರಣ ಹೋಮ.!

ಶಿವಮೊಗ್ಗ: ದಾಯಾದಿ ಕಲಹಕ್ಕೆ ತಮ್ಮ ಅಣ್ಣನ ಮಕ್ಕಳೇ ಹುಲುಸಾಗಿ ಬೆಳೆದಿದ್ದ ಸುಮಾರು 250 ಅಡಿಕೆ ಸಸಿಗಳನ್ನು ಕಡಿದು ಹಾಕಿರುವ ಘಟನೆ ಹೊಸನಗರ ತಾಲೂಕಿನ ದುಮ್ಮ ಗ್ರಾಮದ ಹೆಬೈಲಿನಲ್ಲಿ ಭಾನುವಾರ ರಾತ್ರಿ ನಡೆದಿದೆ.

ಹೆಬೈಲು ವಾಸಿ ಗಂಗಾಧರಯ್ಯ ಎಂಬುವವರಿಗೆ ಸೇರಿದ ಸರ್ವೆ ನಂಬರ್ 35ರ ಖಾತೆ ಜಮೀನಿಗೆ ಹೊಂದಿಕೊಂಡಿರುವ ಸರ್ಕಾರಿ ಒತ್ತುವರಿ ಜಮೀನಿನಲ್ಲಿ ಈ ಅಡಿಕೆ ಸಸಿಗಳನ್ನು ಕಳೆದ ಮೂರು ವರ್ಷಗಳ ಹಿಂದೆ ನಡೆಲಾಗಿತ್ತು.

ಜಮೀನು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ದಾಯಾದಿಗಳ ನಡುವೆ ಕಳೆದ ಕೆಲವು ವರ್ಷಗಳಿಂದ ವೈಮನಸ್ಸು ಇತ್ತು ಎನ್ನಲಾಗಿದ್ದು, ಪಿರ‍್ಯಾದಿ ಅಣ್ಣ ಶಿವಪ್ಪಗೌಡರ ಮಕ್ಕಳಾದ ಹೆಚ್.ಎಸ್. ವಿನಯ್ ಹಾಗೂ ಹೆಚ್.ಎಸ್ ವೀರೇಂದ್ರ ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಪಿರ‍್ಯಾದಿ ಗಂಗಾಧರಯ್ಯ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಭಾನುವಾರ ತಡರಾತ್ರಿ ಗಂಗಾಧರಯ್ಯ ಅವರ ಜಮೀನಿಗೆ ಆರೋಪಿಗಳು ಅಕ್ರಮ ಪ್ರವೇಶ ಮಾಡಿ, ಸುಮಾರು 250 ಅಡಿಕೆ ಸಸಿಗಳನ್ನು ಕಡಿದು ದುಷ್ಕೃತ್ಯ ಮೆರೆದಿದ್ದಾರೆ ಎಂಬುದು ಗಂಗಾಧರಯ್ಯ ಅವರ ಅಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಓರ್ವ ಆರೋಪಿ ಹೆಚ್.ಎಸ್. ವಿನಯ್ ಎಂಬಾತನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

RELATED ARTICLES

Related Articles

TRENDING ARTICLES