Friday, April 4, 2025

ಉಗ್ರರ ಬಂಧನ; ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಗೃಹ ಸಚಿವರು.!

ಬೆಂಗಳೂರು: ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರು ಬಂಧನ ಹಿನ್ನೆಲೆಯಲ್ಲಿ ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.

ಐಸಿಸ್​ ಜತೆ ಮೂವರು ನಂಟು ಬಗ್ಗೆ ಈಗಾಗಲೇ ಮೂವರ ಪೈಕಿ ಇಬ್ಬರು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ತಲೆಮರೆಸಿಕೊಂಡಿದ್ದಾನೆ. ಪೊಲೀಸ್​ ತನಿಖೆಯಿಂದ ಮತ್ತಷ್ಟು ವಿಚಾರಗಳು ಹೊರಬರಬೇಕಿದೆ ಎಂದು ವಿಧಾನಸೌಧದಲ್ಲಿ ಗೃಹ ಸಚಿವರು ತಿಳಿಸಿದರು.

ಶಿವಮೊಗ್ಗ ಗ್ರಾಮಾಂತರ ಪೊಲೀಸರು ಮೂವರು ಶಂಕಿತ ಉಗ್ರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ತೀರ್ಥಹಳ್ಳಿಯ ಶಾರಿಖ್‌, ಮಂಗಳೂರಿನ ಮಾಜ್‌ ಮತ್ತು ಶಿವಮೊಗ್ಗದ ಸೈಯದ್‌ ಯಾಸಿನ್‌ ಬೈಲು ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಈಗ ಇಬ್ಬರನ್ನು ಬಂಧಿಸಿದ್ದು ಇನ್ನೊಬ್ಬನಿಗಾಗಿ ಶೋಧ ಕಾರ್ಯಾಚಣೆ ನಡೆದಿದೆ.

ಮೂವರು ಐಸಿಸ್‌ ಜೊತೆ ನಂಟು ಹೊಂದಿದ್ದರು. ಶಿವಮೊಗ್ಗದ ನಿವಾಸಿಯಾಗಿರುವ ಯಾಸಿನ್‌ ಎಲೆಕ್ಟ್ರಾನಿಕ್‌ ಇಂಜಿನಿಯರ್‌ ಆಗಿದ್ದಾನೆ. ಅಲ್ಲದೇ ಬಾಂಬ್‌ ತಯಾರಿಕೆಗೆ ತರಬೇತಿ ಕೊಡುತ್ತಿದ್ದ ಎಂದು ಪೊಲೀಸ್​ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಐಸಿಸ್ ಉಗ್ರರ ಜೊತೆ ಶಿವಮೊಗ್ಗ, ಮಂಗಳೂರು ಲಿಂಕ್ ಹೊಂದಿದೆ. ಎ1 ಆರೋಪಿ ಶಾರಿಕ್ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ, ಎ2 ಆರೋಪಿ ಮಾಜ್ ಮಂಗಳೂರು, ಎ3 ಆರೋಪಿ ಯಾಸಿನ್ ಶಿವಮೊಗ್ಗದ ಸಿದ್ದೇಶ್ವರ ನಗರದ ನಿವಾಸಿಯಾಗಿದ್ದಾರೆ ಎಂದು ಪೊಲೀಸ್​ ತನಿಖೆಯಲ್ಲಿ ಮಾಹಿತಿ ಹೊರಬಿದ್ದಿದೆ.

RELATED ARTICLES

Related Articles

a

TRENDING ARTICLES