Monday, December 23, 2024

ದಸರಾಕ್ಕೆ ಪ್ರವಾಸಿಗರಿಗೆ ಬಂಪರ್ ಆಫರ್

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2022ಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಹಿನ್ನೆಲೆ ಅರಮನೆ ನಗರಿ ಮೈಸೂರಿನಲ್ಲಿ ಸಿದ್ದತೆಗಳು ಜೋರಾಗಿವೆ. ದಸರಾ ಸಮಯದಲ್ಲಿ ಮೈಸೂರಿಗೆ ದೂರದೂರಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಬರುತ್ತಾರೆ. ಹೀಗಾಗಿ ಪ್ರವಾಸಿಗರ ಅನುಕೂಲಕ್ಕಾಗಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಏಕೀಕೃತ ಟಿಕೇಟ್ ವ್ಯವಸ್ಥೆ ಜಾರಿ ಮಾಡಿದೆ.

ಇನ್ನು ಕಾಂಬೊ ಟಿಕೆಟ್ ಪಡೆದವರು ಐದು ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟಾಗ ಸರತಿಯಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ. ಈಗಾಗಲೇ ಕಾಂಬೊ ಟಿಕೆಟ್ ಪಡೆದಿರುವುದರಿಂದ ಅವರು ಡೈರೆಕ್ಟ್​ ಆಗಿ ಪ್ರವೇಶಿಸಬಹುದು. ​ಈ ವ್ಯವಸ್ಥೆ ಸೆಪ್ಟೆಂಬರ್ 20ರಂದು ಆರಂಭಗೊಂಡು ಅಕ್ಟೋಬರ್‌ 5ರವರೆಗೆ ಚಾಲ್ತಿಯಲ್ಲಿರುತ್ತದೆ. ಟಿಕೆಟ್ ಬೆಲೆ 500 ರೂ.ಗಳಾಗಿದ್ದು, ಮಕ್ಕಳಿಗೆ 250 ರೂ. ನಿಗದಿಪಡಿಸಲಾಗಿದೆ.

ಅದಲ್ಲದೇ, ಈ ಟಿಕೆಟ್​​​ಗಳನ್ನು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಮಾರಾಟ ಮಾಡಲಾಗುತ್ತಿದ್ದು, ನಗರದ ಕೆಎಸ್‌ಟಿಡಿಸಿ ಹೋಟೆಲ್ ಹಾಗೂ ಟ್ರಾವೆಲ್ಸ್ ವಿಭಾಗದಲ್ಲಿ, ಕೆಎಸ್‌ಆರ್‌ಟಿಸಿ ಸಬರ್ಬ್​​​​ ಹಾಗೂ ನಗರ ಬಸ್ ನಿಲ್ದಾಣಗಳಲ್ಲಿ, ರೈಲ್ವೆ ನಿಲ್ದಾಣದ 2 ಕಡೆ, ಚಾಮುಂಡಿಬೆಟ್ಟ, ಮೃಗಾಲಯ, ಕೆಆರ್‌ಎಸ್, ಅರಮನೆ ಹಾಗೂ ಮೈಸೂರು ನಗರದ ಪ್ರಮುಖ ಹೋಟೆಲ್‌ಗಳಲ್ಲಿ ಟಿಕೆಟ್ ದೊರೆಯಲಿದೆ.

RELATED ARTICLES

Related Articles

TRENDING ARTICLES