Monday, December 23, 2024

ಜ್ಞಾನವಾಪಿ ಬಗ್ಗೆ ಪೋಸ್ಟ್​ ಹಾಕಿದ್ದಕ್ಕೆ ಮಹಿಳೆಗೆ ಶಿರಚ್ಛೇದನ ಬೆದರಿಕೆ

ರಾಜಸ್ಥಾನ;  ಸಾಮಾಜಿಕ ಜಾಲತಾಣದಲ್ಲಿ ವಾರಣಾಸಿ ನ್ಯಾಯಾಲಯದ ಜ್ಞಾನವಾಪಿ ಮಸೀದಿ ತೀರ್ಪಿನ ಪ್ರಸ್ತಾಪ ಬಗ್ಗೆ ಪೋಸ್ಟ್ ಹಾಕಿದ್ದಕ್ಕೆ ಮಹಿಳೆಯೊಬ್ಬರಿಗೆ ಶಿರಚ್ಛೇದನ ಬೆದರಿಕೆ ಪತ್ರ ಬಂದಿರುವ ಘಟನೆ ನಡೆದಿದೆ.

ರಾಜಸ್ಥಾನ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಅಲ್ವಾರ್‌ನಲ್ಲಿ ಮಹಿಳೆಯೊಬ್ಬರು ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಇದರಿಂದಾಗಿ ಅವರಿಗೆ ಅಪರಿಚಿತರರು ಪತ್ರ ಮೂಲಕ ಬೆದರಿಕೆ ಹಾಕಿದ್ದಾರೆ. ಈ ಪತ್ರ ಎಲ್ಲಿಂದ ಬಂದಿದೆ. ಯಾರು ಕಳಿಸಿದ್ದಾರೆ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಸದರ್ ಪೊಲೀಸ್​ ಠಾಣೆಯ ಠಾಣಾಧಿಕಾರಿ ತಿಳಿಸಿದ್ದಾರೆ.

ಬೆದರಿಕೆ ಪತ್ರ ಸ್ವೀಕರಿಸಿದ ಮಹಿಳೆ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದು, ಅಲ್ವಾರ್‌ನಲ್ಲಿ ಬೆದರಿಕೆ ಪತ್ರ ಬಂದಿದೆ. ಆಕೆಗೆ ತಲೆ ಕಡಿದು ಹಾಕುವುದಾಗಿ ಬರೆದಿರುವ ಪತ್ರ ಬಂದಿದೆ. ಈ ಕುರಿತು ಸಿಸಿಟಿವಿ ಪರಿಶೀಲಿಸಲಾಗುತ್ತಿದೆ ಎಂದು ಸದರ್ ಪೊಲೀಸರು ಹೇಳಿದರು.

RELATED ARTICLES

Related Articles

TRENDING ARTICLES