Friday, January 24, 2025

ಫ್ಲೈವುಡ್ ಅಂಗಡಿಯ ಮಾಲೀಕನಿಗೆ ಮಚ್ಚಿನೇಟು..!

ಬೆಂಗಳೂರು : ನೋಡಿ ನೋಡಿ ಫ್ಲೈವುಡ್ ಅಂಗಡಿಯೊಂದಕ್ಕೆ ಹೇಗೆ ಕಿರಾತಕರು ನುಗ್ತಿದ್ದಾರೆ ಅನ್ನೋದನ್ನು. ಯೆಸ್, ಈ ಘಟನೆ ನಡೆದಿದ್ದು, ಬೆಂಗಳೂರಿನ ಥಣಿಸಂದ್ರದ ಪನ್ನಾಲಾಲ್ ಎಂಬುವರ ಫ್ಲೈವುಡ್ ಶಾಪ್‌ನಲ್ಲಿ. ಆಗಸ್ಟ್ 31 ರಂದು ಬೈಕ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಥಣಿಸಂದ್ರದ ಮುಖ್ಯರಸ್ತೆಯಲ್ಲಿರುವ ಬಟ್ಟೆಯಂಗಡಿಗೆ ನುಗ್ತಾರೆ. ಅಲ್ಲಿ ಮಚ್ಚಿಡಿದು ಹಣವನ್ನು ಸುಲಿಗೆ ಮಾಡಿಕೊಂಡು ಅದೇ ದಾರಿಯಲ್ಲಿ ಸಿಗೋ ಇದೇ ಪನ್ನಾಲಾಲ್‌ರ ಅಂಗಡಿಗೆ ನುಗ್ತಾರೆ. ಬಟ್ಟೆ ಬದಲಿಸ್ಬೇಕು ಜಾಗ ಬಿಡು ಅಂತ ಆವಾಜ್ ಕೂಡ ಹಾಕ್ತಾರೆ. ಅದಕ್ಕೆ ಒಪ್ಪದೇ ಇದ್ದಾಗ ಪನ್ನಾಲಾಲ್‌ನ ಮೇಲೆ ಮಚ್ಚಿನಲ್ಲಿ ಹಲ್ಲೆ ಮಾಡಿ ಪರಾರಿಯಾಗ್ತಾರೆ.

ಆಗಸ್ಟ್ 31 ರಂದು ಬೆಳಗ್ಗೆ ಹಲ್ಲೆ ಮಾಡಿ ಪರಾರಿಯಾಗಿದ್ದ ದುಷ್ಕರ್ಮಿಗಳು ಒಂದೇ ಗಂಟೆಯಲ್ಲಿ ಮತ್ತೆ ಪನ್ನಾಲಾಲ್‌ರ ಅಂಗಡಿಗೆ ರೀ ಎಂಟ್ರಿ ಕೊಡ್ತಾರೆ. ಈ ವೇಳೆ ಪನ್ನಾಲಾಲ್‌ರ ಸಹೋದರ ಅಮಿತ್ ಅಂಗಡಿಯಲ್ಲಿದ್ದರು. ಅವರ ಮೇಲೂ ಕೂಡ ಮಚ್ಚಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದರು. ಮಚ್ಚೇಟಿನಿಂದ ಹೆದರಿದ ಪನ್ನಾಲಾಲ್ ಹೆಣ್ಣೂರು ಪೊಲೀಸ್ ಠಾಣೆಗೆ ಹೋಗಿ ದೂರನ್ನು ಕೂಡ ನೀಡ್ತಾರೆ. ಆದ್ರೆ, ಪೊಲೀಸ್ರು ಮುಂದೆ ನೋಡೋಣ ಬಿಡಪ್ಪ ಅಂತ ಹೇಳಿ ಬೇಜವಾಬ್ದಾರಿ ತೋರಿದ್ದರಂತೆ. ಅಲ್ಲದೆ, ಸೆಪ್ಟೆಂಬರ್ 2ನೇ ತಾರೀಕು ಮತ್ತೆ ಅದೇ ದುಷ್ಕರ್ಮಿಗಳು ಮಚ್ಚಿಡಿದು ಪನ್ನಾಲಾಲ್ ಅಂಗಡಿಗೆ ಎಂಟ್ರಿ ಕೊಟ್ಟಿದ್ದು ಜನರ ಓಡಾಟದಿಂದ ಹೆದರಿ ಕಾಲ್ಕಿತ್ತಿದ್ದರು.

ಸದ್ಯ ಹೆಣ್ಣೂರು ಪೊಲೀಸ್ರು ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ ಅಂತ ಹೇಳ್ತಿದ್ದಾರೆ. ಆದ್ರೆ, ಘಟನೆ ಇಷ್ಟು ದೊಡ್ಡದಾಗೋವರೆಗೂ ಪೊಲೀಸ್ರು ಅದೇನ್ ಮಾಡ್ತಿದ್ರೋ ಆ ದೇವರೇ ಬಲ್ಲ.

ಅಶ್ವಥ್ ಎಸ್ ಎನ್.ಕ್ರೈಂ ಬ್ಯೂರೋ ಪವರ್ ಟಿವಿ

RELATED ARTICLES

Related Articles

TRENDING ARTICLES