Monday, December 23, 2024

5 ಸಾವಿರ ಕಾನ್ಸ್​ಟೇಬಲ್ ನೇಮಕಕ್ಕೆ ಶೀಘ್ರ ಕ್ರಮ : ಆರಗ ಜ್ಞಾನೇಂದ್ರ

ಬೆಂಗಳೂರು : ಶೀಘ್ರವೇ 5 ಸಾವಿರ ಕಾನ್ಸ್​ಟೇಬಲ್​ಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತೆ ಎಂದು ವಿಧಾನಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಘೋಷಣೆ ಮಾಡಿದ್ದಾರೆ.

ಇದೇ ವೇಳೆ ಕೊವಿಡ್ ವೇಳೆ ಪೊಲೀಸ್​ ನೇಮಕಾತಿ ಆಗಿಲ್ಲ ಅನ್ನೋದು ತಪ್ಪು ಎಂದು ಸ್ಪಷ್ಟನೆ ನೀಡಿದರು. ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಪೊಲೀಸ್​ ಕಾನ್ಸ್‌ಟೇಬಲ್​​ಗಳ ನೇಮಕಾತಿ ವಿಳಂಬ ಬಗ್ಗೆ ಹಾಸನ BJP ಶಾಸಕ ಪ್ರೀತಮ್ ಗೌಡ ಪ್ರಶ್ನೆ ಮಾಡಿದ್ರು. ಈ ವೇಳೆ ಉತ್ತರಿಸಿದ ಆರಗ ಜ್ಞಾನೇಂದ್ರ, 9,432 ಪೊಲೀಸ್ ಕಾನ್ಸ್​ಟೇಬಲ್​ ಹುದ್ದೆಗಳು ಖಾಲಿ ಇವೆ. ಈಗ 3,500 ಕಾನ್ಸ್​ಟೇಬಲ್​​ ನೇಮಕಕ್ಕೆ ನೋಟಿಫಿಕೇಷನ್ ಆಗಿದೆ. ಶೀಘ್ರವೇ ಮತ್ತೆ 5 ಸಾವಿರ ಕಾನ್ಸ್​ಟೇಬಲ್​ಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತೆ ಎಂದು ಭರವಸೆ ನೀಡಿದ್ದಾರೆ.

ಇನ್ನು, ಇದೇ ವೇಳೆ, ಕೊವಿಡ್ ವೇಳೆ ಪೊಲೀಸ್​ ನೇಮಕಾತಿ ಆಗಿಲ್ಲ ಅನ್ನೋದು ತಪ್ಪು. ವಯೋಮಿತಿ ಸಡಿಲಿಸಲು ನನಗೂ ಕೂಡ ಫೋನ್ ಬರುತ್ತಿದೆ. ಆದರೆ ಕೊವಿಡ್ ವೇಳೆ ನೇಮಕಾತಿ ಆಗಿಲ್ಲ ಎಂಬುದು ತಪ್ಪು. ಕೊವಿಡ್ ಅವಧಿಯಲ್ಲಿ ಪೊಲೀಸ್ ನೇಮಕಾತಿ ನಿಂತಿರಲಿಲ್ಲ. ವಯೋಮಿತಿ ಹೆಚ್ಚಳ ಮಾಡುವ ಯೋಚನೆ ಸದ್ಯಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದ್ರು.

RELATED ARTICLES

Related Articles

TRENDING ARTICLES