Saturday, January 18, 2025

ಯೋಗಿ ಆದಿತ್ಯನಾಥ್ ರೀತಿ ಬುಲ್ಡೋಜರ್​​ ತಾಕತ್ತು ತೋರಿಸಬೇಕು; ಸಿಎಂಗೆ ಯತ್ನಾಳ್ ವ್ಯಂಗ್ಯ

ಗದಗ: ಸಾವರ್ಕರ್ ಕುಟುಂಬ ಸಹ ಇಡೀ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಸಾವರ್ಕರ್ ಕಾಲಿನ ದೂಳಿನ ಸಮ ಇಲ್ಲದವರು ಅವರ ಬಗ್ಗೆ ಏನೆನೋ ಮಾತಾಡ್ತಾರೆ. ಇನ್ನೈದು ವರ್ಷದಲ್ಲಿ ಪಾಕಿಸ್ತಾನದಲ್ಲೂ ಗಣೇಶ ಕುರಿಸ್ತಿವಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ವಿಶ್ವ ಹಿಂದೂ ಪರಿಷತ್, ಭಜರಂಗ ದಳ, ಸುದರ್ಶನ ಚಕ್ರ ಸಮಿತಿಯಿಂದ ಹಿಂದೂ ಮಹಾಗಣಪತಿ ವೇದಿಕೆಯಲ್ಲಿ ಧರ್ಮ ಸಭೆ ನಡೆಯಿತು. ಈ ವೇದಿಕೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭಾಷಣ ಜೋರಾಗಿತ್ತು.

ಹುಬ್ಬಳ್ಳಿ, ಮಂಗಳೂರ, ಶಿವಮೊಗ್ಗ, ಉಡುಪಿನಲ್ಲಾದ ಉಗ್ರ ಸಂಘಟನೆ, ಹಿಂದೂ ಹಂತಕರ ಬಗ್ಗೆ ಕೇಳಿದಾಗ ಕಠಿಣ ಕ್ರಮ ಕೈಗೊಳ್ಳಲಾಗವುದು. ಮತ್ತೊಮ್ಮೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇನ್ನೊಮ್ಮೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಇಂತದ್ದೇ ಹೇಳುತ್ತಾ ಸಿಎಂ ಹೊರಟರೆ ನಡೆಯೊಲ್ಲ ಅಂತ ಯತ್ನಾಳ್​ ವ್ಯಂಗ್ಯವಾಡಿದರು.

ಉತ್ತರ ಪ್ರದೇಶದ ಸಿಎಂ ಬುಲ್ಡೋಜರ್ ರೀತಿಯಲ್ಲಿ ರಾಜ್ಯ ಸಿಎಂ ತಾಕತ್ತು ತೋರಿಸಬೇಕು. ಅಕಸ್ಮಾತ್ ನಾನು ಸಿ.ಎಂ ಆಗಿದ್ರೆ ರಾಜ್ಯದಲ್ಲಿ ಎನ್ಕೌಂಟರ್ ಸ್ಪೆಷಲಿಸ್ಟ್ ಇಡ್ತಿದ್ದೆ. ಕಮಕ್ ಗಿಮಕ್ ಎನ್ನುವರಿಗೆ ಮೊದಲು ಗುಂಡೆದ ಅಧಿಕಾರಿಗಳಿಗೆ ಪ್ರಮೋಷನ್ ನೀಡುತ್ತಿದ್ದೆ. ನಾನೇನಾದ್ರು ಸಿಎಂ ಆದ್ರೆ ಒಬ್ಬರನ್ನು ಜೈಲಿಗೆ ಕಳಿಸುತ್ತಿದ್ದೆ, ಮತ್ತೊಬ್ಬರನ್ನು ಕಾಡಿಗೆ ಕಳುಹಿಸುತ್ತೇನೆ ಅಂತ ಪರೋಕ್ಷವಾಗಿ ಡಿಕೆಶಿ, ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ನಮ್ಮಲ್ಲೂ ಕೆಲವು ಕಚಡಾ ಹೈಬ್ರೀಡ್ ತಳಿ ಹಿಂದೂಗಳಿವೆ. ಕೆಲವು ಲೀಡರಗಳು ಕೆಲವು ಜಿಲ್ಲೆಗೆ ಹೋದ್ರೆ ದರ್ಗಾಗೆ ಹೋಗ್ತಾರೆ. ಹಿಂದೂ ದೇವಸ್ಥಾನಕ್ಕೆ ಹೋಗಲ್ಲ. ಇವರೆಲ್ಲಾ ಜಾತ್ಯಾತೀತ, ಪ್ರಗತಿಪರರು. ಇನ್ನು ನೆಹರೂ ನಿಂದ ದೇಶ ಉದ್ದಾರ ಆಗಿಲ್ಲ. ಬರಿ ಚೈನಿ ಹೊಡೆದು ಹೋದ. ರಾಷ್ಟ್ರಪತಿ ಭವನದಲ್ಲಿಗ ಸಿಂಹ ಬದಲಾಗಿದೆ ಅಂತಿದ್ದಾರೆ. ಅರೇ, ಹಿಂದೂಸ್ಥಾನಕ್ಕೆ ಕ್ರೂರ ಸಿಂಹ ಬೇಕಾಗಿದೆ, ಅಳುವ ಸಿಂಹ ಬೇಕಿಲ್ಲೋ‌ ಅಯೋಗ್ರಾ. ಭಾರತಕ್ಕೆ ಚಿತಾ ತಂದ್ರೆ ಕೆಲವರಿಗೆ ಬ್ಯಾನಿ ಆಗ್ತಿದೆ ಅಂತೆಲ್ಲಾ ಕಾರವಾಗಿ ಯತ್ನಾಳ್​ ಮಾತನಾಡಿದರು.

RELATED ARTICLES

Related Articles

TRENDING ARTICLES