Monday, December 23, 2024

ಸೆಲ್ಫೀ ಹುಚ್ಚಾಟಕ್ಕೆ ಇಬ್ಬರು ವಿದ್ಯಾರ್ಥಿಗಳು ಸಾವು.!

ರಾಯಚೂರು; ಸೆಲ್ಫೀ ಹುಚ್ಚಾಟಕ್ಕೆ ಕಾಲುವೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ರಾಯಚೂರು ತಾಲ್ಲೂಕಿನ ಕಲ್ಮಲ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಡೆದಿದೆ.

ಪಿಯುಸಿ ವಿದ್ಯಾರ್ಥಿಗಳಾದ ಸುಜಿತ್ ಹಾಗೂ ವೈಭವ್ ಸಾವನ್ನೊಪ್ಪಿದವರು, ಮೃತರು ರಾಯಚೂರು ನಗರದ ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿಗಳು ಎಂಬ ಮಾಹಿತಿ ದೊರೆತಿದ್ದು, ನಿನ್ನೆ ನಾಲ್ಕು ವಿದ್ಯಾರ್ಥಿಗಳ ತಂಡ ಪ್ರವಾಸಕ್ಕೆಂದು ಕಾಲುವೆಗೆ ಬಂದಿದ್ದರು. ಈ ವೇಳೆ ಕಾಲುವೆಯಲ್ಲಿ ಸೆಲ್ಫಿ ತೆಗೆಯುವ ವೇಳೆ ಆಯಾತಪ್ಪ ಕಾಲುವೆಗೆ ಬಿದ್ದಿದ್ದಾರೆ.

ಈ ವೇಳೆ ನಾಗೇಂದ್ರ ಹಾಗೂ ತರುಣ್ ಈಜಿ ದಡ ಸೇರಿದ್ದ ಇನ್ನಿಬ್ಬರೂ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದರು. ಈಗ ಕೊಚ್ಚಿ ಹೋದ ಘಟನಾ ಸ್ಥಳದಿಂದ 200 ಮೀಟರ್ ದೂರದಲ್ಲಿ ಸುಜಿತ್ ಹಾಗೂ ವೈಭವ್ ಮೃತದೇಹಗಳು ಪತ್ತೆಯಾಗಿವೆ. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES