Monday, December 23, 2024

‘ಯಾತ್ರೆ ನಡೆಯುವುದು ವ್ಯಕ್ತಿಯಿಂದಲ್ಲ, ಪಕ್ಷದಿಂದ : ಆರ್.ವಿ.ದೇಶಪಾಂಡೆ

ಬೆಂಗಳೂರು : ಯಾವುದೇ ವ್ಯಕ್ತಿಯಿಂದ ರಥ ಯಾತ್ರೆ ನಡೆಯಲ್ಲ. ಪಕ್ಷದಿಂದ ರಥ ಯಾತ್ರೆ ನಡೆಯುತ್ತದೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಪಕ್ಷದ ಹಿರಿಯ ನಾಯಕರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ರಥಯಾತ್ರೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಅಧ್ಯಕ್ಷ, ಸಿಎಲ್​​ಪಿ ನಾಯಕರು ಎಲ್ಲರೂ ಇರುತ್ತಾರೆ. ನಾವೆಲ್ಲ ಸಂಘಟಿತರಾಗಿ ಒಟ್ಟಾಗಿ ಚುನಾವಣೆಗೆ ಹೋಗುತ್ತೇವೆ. ಕೆಲವೊಂದು ಸಲಹೆಗಳು ಭಿನ್ನವಾಗಿ ಇರುತ್ತವೆ. ಹಾಗಂತ ಅದನ್ನು ಗೊಂದಲ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತಿದ್ದೇವೆ.

ಇನ್ನು, ಅನವಶ್ಯಕ ಗೊಂದಲ ನಿರ್ಮಾಣ ಸರಿಯಲ್ಲ. ನನಗೆ ಜವಾಬ್ದಾರಿ ಕೊಟ್ಟಿಲ್ಲವೆಂದು ಯಾರು ಹೇಳಿದ್ದು? ಭಾರತ್ ಜೋಡೋದಲ್ಲಿ ಕೊಟ್ಟಿಲ್ಲವೆಂದು ಹೇಳಿದ್ದು ಯಾರು? ನನಗೆ ಚಿತ್ರದುರ್ಗದ ಜವಾಬ್ದಾರಿ ಕೊಟ್ಟಿದ್ದಾರೆ. ಅಲ್ಲಿ ರಾಹುಲ್ ಗಾಂಧಿ ಜೊತೆಯಲ್ಲಿ ಇರುತ್ತೇನೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES