ಮೈಸೂರು: ಜಿಲ್ಲೆಯ ನರಸಿಂಹರಾಜ್ ಸಂಚಾರಿ ಪಿಎಸ್ಐ ಅಶ್ವಿನಿ ಅನಂತಪುರ ಅವರನ್ನ ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗೆ ಪಿಎಸ್ಐ ಅಶ್ವಿನಿ ಅನಂತಪುರ ಅವರ ಮೇಲೆ ಎಫ್ಡಿಎ ಪರೀಕ್ಷಾ ಅಕ್ರಮದಲ್ಲಿ ಹೆಸರು ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಎನ್.ಆರ್ ಠಾಣೆಯ ಪಿಎಸ್ಐ ಅಶ್ವಿನಿ ಅನಂತಪುರ ಅವ್ರನ್ನ ಅಮಾನತು ಮಾಡಿ ಆದೇಶಿಸಲಾಗಿದೆ.
2020 ರಲ್ಲಿ ನಡೆದ ಕೆಪಿಎಸ್ಸಿ ಪರಿಕ್ಷೇಯಲ್ಲಿ ನೌಕರಿ ಕೊಡಿಸೋದಾಗಿ ಪಿಎಸ್ಐ 15 ಲಕ್ಷಕ್ಕೆ ವಿಜಯಪುರ ಮೂಲದ ವ್ಯಕ್ತಿವೊಬ್ಬನಿಗೆ ಬೇಡಿಕೆವಿಟ್ಟು, ಮುಂಗಡವಾಗಿ 2ಲಕ್ಷ ಪಡೆದಿದ್ದರು ಎಂದು ಅಭ್ಯರ್ಥಿ ಸಹೋದರ ಸಂಗಮೇಶ ಝಳಕಿ ಆರೋಪಿಸಿದ್ದರು.
ಬಸವರಾಜ ಝಳಕಿ ಎಫ್ ಡಿಸಿ ಹುದ್ದೆಗೆ ಪರೀಕ್ಷೆ ಬರೆದಿದ್ದರು, ಈ ಆಡಿಯೋದಲ್ಲಿ ಪಿಎಸ್ಐ ಅವರು ಅಭ್ಯರ್ಥಿಗೆ ಪರೀಕ್ಷೆಯ ಡೀಲ್ ಹೇಗೆಲ್ಲಾ ಆಗುತ್ತೆ ಅಂತ ಹೇಳಿದ್ದಾರೆ. ಅಶ್ವಿನಿ ಮೂಲತಃ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದವರಾಗಿದ್ದಾರೆ.