Sunday, January 19, 2025

ಕೋಮುಗಲಭೆಯಲ್ಲಿ ಮಂಗಳೂರು, ರೌಡಿಸಂನಲ್ಲಿ ಉಡುಪಿ ಮುಂದು

ಬೆಂಗಳೂರು: ಕೋಮುಗಲಭೆಯಲ್ಲಿ ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳು ಮೊದಲೆರಡು ಸ್ಥಾನ ಪಡೆದಿದೆ ಎಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ವರದಿಲ್ಲಿ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಇನ್ನು ರೌಡಿಸಂನಲ್ಲಿ ಉಡುಪಿ, ಕೋಲಾರ ಅಗ್ರಸ್ಥಾನ ಪಡೆದಿದ್ದು, ಕಳೆದ ಐದು ವರ್ಷಗಳಲ್ಲಿ ಪ್ರಕರಣ ಆಧರಿಸಿ ಈ ವರದಿಯನ್ನ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ರಾಜ್ಯದಲ್ಲಿ ಒಟ್ಟು 242 ಕೋಮುಗಲಭೆ ಕೇಸ್ ದಾಖಲಾಗಿದ್ದು, ಇದರಲ್ಲಿ ದಕ್ಷಿಣ ಕನ್ನಡ 57, ಶಿವಮೊಗ್ಗ 48 ಕೇಸ್ ದಾಖಲಾಗಿದೆ. ಅದರಂತೆ ಬಾಗಲಕೋಟೆ 28, ದಾವಣಗೆರೆ 18, ಹಾವೇರಿ 18 ಕೋಮುಗಲಭೆ ಪ್ರಕರಣಗಳು ನಡೆದಿವೆ.

ಇನ್ನೂ ರೌಡಿಸಂನಲ್ಲಿ ಒಟ್ಟು 1431 ಪ್ರಕರಣಗಳು ದಾಖಲಾಗಿದ್ದು, ಇದ್ರಲ್ಲಿ ಉಡುಪಿ 421, ಕೋಲಾರ 165, ದಕ್ಷಿಣಕನ್ನಡ 152, ಬೆಂಗಳೂರು ನಗರ 80, ಕಲಬುರಗಿ 97, ಶಿವಮೊಗ್ಗದಲ್ಲಿ 158 ಕೇಸ್ ದಾಖಲಾವೆ. ಮೂರು ವರ್ಷದಲ್ಲಿ 4 ಮತೀಯ ಕೊಲೆ ಆಗಿದ್ದು, ಗಲಭೆಯಲ್ಲಿ 280 ಪೊಲೀಸರಿಗೆ ದೈಹಿಕ ಹಾನಿಯಾಗಿದೆ ಎಂದು ವರದಿ ತಿಳಿಸಿದೆ.

RELATED ARTICLES

Related Articles

TRENDING ARTICLES