Wednesday, January 22, 2025

24 ಗಂಟೆಯಲ್ಲಿ ‘ಕಬ್ಜ’ ಕೋಟಿ ವೀವ್ಸ್.. ಪರಭಾಷಿಗರು ಸ್ಟನ್..!

ಮಾನ್​ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ಹಾದಿಯಲ್ಲೇ ಮತ್ತೊಬ್ಬ ಗ್ಯಾಂಗ್​ಸ್ಟರ್ ಡೈರೆಕ್ಟರ್ ಹುಟ್ಟಿಕೊಂಡಿದ್ದಾರೆ. ಇಡೀ ಇಂಡಿಯಾ ಅವ್ರ ಮೇಕಿಂಗ್ ಪ್ಯಾಟ್ರನ್​ಗೆ ಫಿದಾ ಆಗಿದೆ. ಬಾಲಿವುಡ್ ಮಂದಿಯಂತೂ ಭಲೇ ಕನ್ನಡಿಗರೇ ಅಂತಿದ್ದಾರೆ. ಇಷ್ಟಕ್ಕೂ ಆ ಸೆನ್ಸೇಷನಲ್ ಡೈರೆಕ್ಟರ್ ಯಾರು..? ಒಂದೇ ದಿನದಲ್ಲಿ ಕೋಟಿ ವೀವ್ಸ್ ಪಡೆದ ಕಬ್ಜ ಟೀಸರ್ ಗಮ್ಮತ್ತು ಎಂಥದ್ದು ಅನ್ನೋದ್ರ ಝಲಕ್ ನೀವೇ ಓದಿ.

ಮಾನ್​ಸ್ಟರ್ ನೀಲ್ ಹಾದಿಯಲ್ಲಿ ಗ್ಯಾಂಗ್​ಸ್ಟರ್ ಚಂದ್ರು ಕಮಾಲ್

40ರ ದಶಕದಿಂದ 80ರ ದಶಕದ ರಕ್ತಸಿಕ್ತ ಭೂಗತಲೋಕ ರಿವೀಲ್

ಟೀಸರ್ ಧಗ ಧಗ.. ಇಂಡಿಯಾದಲ್ಲಿ ಕನ್ನಡಿಗರೇ ಸಾರ್ವಭೌಮ

1942.. ಸ್ವತಂತ್ರಪೂರ್ವ ಭಾರತದ ಭಯಾನಕ ಹಾಗೂ ಭೀಭತ್ಸ ದಿನಗಳವು. ಅಲ್ಲಿ ಹಗಲಿರುಳು ಚರಕ ಹಿಡಿದು ನೇಯ್ಗೆ ಕೆಸಲ ಮಾಡಿದ್ರೂ ಸಹ ತುತ್ತು ಅನ್ನ ಸಿಗೋದು ಕಷ್ಟವಾಗಿತ್ತು. ಇಡೀ ದೇಶವೇ ಬ್ರಿಟಿಷರ ಹಂಗಲ್ಲಿ ಬದುಕಬೇಕಾದಂತಹ ಸಂದರ್ಭ. ಮತ್ತೊಂದ್ಕಡೆ ಸ್ವಾತಂತ್ರ್ಯ ಹೋರಾಟದ ಕಿಚ್ಚು. ಇವೆರಡರ ನಡುವೆ ಶ್ರೀಸಾಮಾನ್ಯರನ್ನ ಮತ್ತಷ್ಟು ಹೈರಾಣಾಗಿಸಿದ್ದು ಭೂಗತಲೋಕ. ಅದೇ ಆರ್ ಚಂದ್ರು ಕಟ್ಟಿಕೊಟ್ಟಿರೋ ಈ ವರ್ಲ್ಡ್​ ಆಫ್ ಕಬ್ಜ.

ಯೆಸ್.. ಇಂಡಿಯನ್ ಗ್ಯಾಂಗ್​ಸ್ಟರ್​ಗಳ ಉಗಮ ಆಗಿದ್ದೇ 40ರ ದಶಕದಲ್ಲಿ. ಅಲ್ಲಿಯವರೆಗೆ ಗನ್, ಲಾಂಗ್, ಮಚ್ಚುಗಳ ಮೊರೆತ, ಕಡಿತ ಬೇರೆ ಬೇರೆ ಉದ್ದೇಶಕ್ಕೆ ಆಗ್ತಿತ್ತು. ಆದ್ರೆ ಭೂಗತಲೋಕದ ಗ್ಯಾಂಗ್​ಸ್ಟರ್​​ಗಳಿಂದ ರಕ್ತಪಾತ ಆಗಲು ಶುರುವಾಯ್ತು. ಆ 40ರಿಂದ 80ರ ದಶಕದವರೆಗಿನ ಇಂಡಿಯಾದ ಅಂಡರ್​ವರ್ಲ್ಡ್​ ಚಿತ್ರಣವೇ ಕಬ್ಜ. ಇಂಡಿಯನ್ ರಿಯಲ್ ಸ್ಟಾರ್ ಉಪೇಂದ್ರ, ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್ ಕಾಂಬೋನ ಅಪರೂಪದ ಮಲ್ಟಿಸ್ಟಾರ್ ಇದು.

ಪ್ರತಿ ಅಂತ್ಯವೂ ಒಂದು ಆರಂಭಕ್ಕೆ ನಾಂದಿಯಾಗುತ್ತೆ ಅನ್ನೋ ಈ ಚಿತ್ರದ ಒಂದು ಲೈನ್, ಭಾರತೀಯ ಚಿತ್ರರಂಗದ ಮತ್ತೊಂದು ಮೈಲಿಗಲ್ಲು ಸೃಷ್ಟಿಸಲು ಸಜ್ಜಾಗಿದೆ. ಬರೀ ಸೌತ್​ಗಷ್ಟೇ ಸೀಮಿತವಾಗಿದ್ದ ಮೋಸ್ಟ್ ಪ್ಯಾಷನೇಟ್ ಡೈರೆಕ್ಟರ್ ಕಮ್ ಪ್ರೊಡ್ಯೂಸರ್ ಆರ್ ಚಂದ್ರು, ಈ ಚಿತ್ರದಿಂದ ಪ್ಯಾನ್ ಇಂಡಿಯಾ ಡೈರೆಕ್ಟರ್ ಆಗಿ ಮಿಂಚ್ತಿದ್ದಾರೆ. ಕೆಜಿಎಫ್​ನಿಂದ ಪ್ರಶಾಂತ್ ನೀಲ್ ಮಾನ್​ಸ್ಟರ್ ಸಾರಥಿ ಆದ್ರೆ, ಕಬ್ಜದಿಂದ ಚಂದ್ರು ಗ್ಯಾಂಗ್​ಸ್ಟರ್ ಡೈರೆಕ್ಟರ್ ಆಗಿ ರಾರಾಜಿಸಲಿದ್ದಾರೆ.

ರೆಟ್ರೋ ವರ್ಲ್ಡ್​ನ ಕ್ರಿಯೇಟ್ ಮಾಡೋದು ಸುಲಭದ ಮಾತಲ್ಲ. ಅದಕ್ಕಾಗಿ ಸಾಕಷ್ಟು ಹೋಮ್​ವರ್ಕ್​, ರಿಸರ್ಚ್​, ಹಗಲಿರುಳು ತಪಸ್ಸು ಮಾಡಬೇಕಾಗುತ್ತೆ. ರೀಸೆಂಟ್ ಆಗಿ ರಿಲೀಸ್ ಆಗಿರೋ ಟೀಸರ್ ಅದರ ಕೈಗನ್ನಡಿಯಂತೆ ಎಲ್ಲರ ಹುಬ್ಬೇರಿಸಿದೆ. ಅದ್ರಲ್ಲೂ ಬಾಲಿವುಡ್ ಮಂದಿ ಓ ಮೈ ಗಾಡ್ ಅನ್ನುವಂತೆ ಮಾಡಿದೆ. ಪಾತ್ರಗಳು, ಸೆಟ್ ವರ್ಕ್​, ಬ್ಯಾಗ್ರೌಂಡ್ ಮ್ಯೂಸಿಕ್, ಸಿನಿಮಾಟೋಗ್ರಫಿ ಹೀಗೆ ಎಲ್ಲವೂ ವ್ಹಾವ್ ಫೀಲ್ ಕೊಡ್ತಿವೆ.

ಕೆಜಿಎಫ್​ನ ಆರ್ಟ್​ ಡೈರೆಕ್ಟರ್ ಶಿವಕುಮಾರ್ ಹಾಗೂ ರವಿ ಬಸ್ರೂರು ಮ್ಯೂಸಿಕ್ ಚಿತ್ರಕ್ಕಿದ್ದು, ಮತ್ತೊಂದು ಮಾಸ್ಟರ್​ಪೀಸ್ ಕಟ್ಟಿಕೊಡೋ ಲಕ್ಷಣಗಳನ್ನ ತೋರಿದ್ದಾರೆ. ಎಜೆ ಶೆಟ್ಟಿ ಕ್ಯಾಮೆರಾ ಕೈಚಳಕ, ಕಿಚ್ಚ- ಉಪ್ಪಿ ಜೊತೆ ಶ್ರಿಯಾ ಸರಣ್ ಕ್ವೀನ್ ಖದರ್, ಪರಭಾಷಾ ಕಲಾವಿದರ ದಂಡು ಚಿತ್ರದ ಸ್ಟ್ರೆಂಥ್ ಹೆಚ್ಚಿಸಿದೆ. 100 ಕೋಟಿ ಬಜೆಟ್​ನ ಚಂದ್ರು ಈ ಸಿನಿಮಾಗಾಗಿ ಯಾಕೆ ಹಾಕಿದ್ರು ಅಂತ ಮೂಗಿ ಮುರೀತಿದ್ದವ್ರಿಗೆ ತಕ್ಕ ಉತ್ತರ ಕೊಟ್ಟಿದೆ ಟೀಸರ್.

ಸಾಕಷ್ಟು ಮಂದಿ ಇದನ್ನ ಕೆಜಿಎಫ್ 3 ಅಂತಿದ್ದಾರೆ. ಹಾಗಿದ್ದಲ್ಲಿ ಜಸ್ಟ್ 24 ಗಂಟೆಯಲ್ಲಿ ಬರೋಬ್ಬರಿ ಒಂದು ಕೋಟಿ ಕಣ್ಣುಗಳ ಜೊತೆ ಮನಸ್ಸುಗಳನ್ನ ಗೆಲ್ಲೋದು ಸಲುಭದ ಮಾತಲ್ಲ. ಹೇಳ್ಬೇಕು ಅಂದ್ರೆ ಮೇಕಿಂಗ್​ನ ಡಿಟೈಲಿಂಗ್ ಕಬ್ಜದಲ್ಲೇ ಹೆಚ್ಚಿದೆ. ಬೃಹತ್ ಸೆಟ್​​ಗಳಲ್ಲಿ ಹೊಸ ಲೋಕ ಸೃಷ್ಟಿಸಿರೋ ಚಂದ್ರು, ಉಪ್ಪಿ ಕರಿಯರ್​ಗಷ್ಟೇ ಅಲ್ಲ, ಕನ್ನಡ ಚಿತ್ರರಂಗವನ್ನು ಮತ್ತೊಮ್ಮೆ ನ್ಯಾಷನಲ್ ಇಂಟರ್​ನ್ಯಾಷನಲ್ ಲೆವೆಲ್​ನಲ್ಲಿ ಪ್ರೆಸೆಂಟ್ ಮಾಡ್ತಿದ್ದಾರೆ.

ಬಾಕ್ಸ್ ಆಫೀಸ್​ ಕಬ್ಜ ಮಾಡೋಕೂ ಮುನ್ನ ಉಪ್ಪಿ- ಕಿಚ್ಚನ ಈ ಕಬ್ಜ, ಪರಭಾಷಾ ಮೇಕರ್ಸ್​, ಟೆಕ್ನಿಷಿಯನ್ಸ್ ಹಾಗೂ ಸ್ಟಾರ್ಸ್​ ಮನಸ್ಸನ್ನ ಕಬ್ಜಾ ಮಾಡಿದೆ. ಹಾಗಾಗಿಯೇ ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್ ನಂ.1 ಆಗಿದೆ. 24 ಗಂಟೆಯಲ್ಲಿ ಕೋಟಿ ವೀವ್ಸ್​ನಿಂದ ನೂತನ ದಾಖಲೆ ಬರೆದಿದೆ. ಕನ್ನಡಿಗರ ಗತ್ತು, ಗಮ್ಮತ್ತನ್ನ ಮಗದೊಮ್ಮೆ ಭಾರತೀಯ ಚಿತ್ರರಂಗಕ್ಕೆ ಗೊತ್ತು ಮಾಡ್ತಿದ್ದಾರೆ ನಮ್ಮ ಹೆಮ್ಮೆಯ ಕನ್ನಡಿಗರು. ಇದು ಇತಿಹಾಸ ಸೃಷ್ಟಿಸಲಿ, ಸಿನಿಮೋತ್ಸಾಹಿಗಳಿಗೆ ಸ್ಫೂರ್ತಿಯಾಗಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES