Monday, December 23, 2024

ಬೆಂಗಳೂರಿನಲ್ಲಿ ಕರಕುಶಲ ವಸ್ತು ಪ್ರದರ್ಶನ ಉದ್ಘಾಟನೆ

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ಕರಕುಶಲ ವಸ್ತು ಪ್ರದರ್ಶನ ಉದ್ಘಾಟಿಸಲಾಯಿತು. ಇದನ್ನು ಕರ್ನಾಟಕ ರಾಜ್ಯ ಕರಕುಶಲ ನಿಗಮವು ಭಾರತ ಸರ್ಕಾರದ ಪ್ರಾಯೋಜಕತ್ವದಲ್ಲಿ ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ನಿಗಮದ ಅಧ್ಯಕ್ಷರಾದ ಮಾರುತಿ ಅಷ್ಟಗಿ, ನವದೆಹಲಿಯ ಕರಕುಶಲ ಆಯುಕ್ತರಾದ ಶಾಂತ ಮನು, ಶಾಸಕಿ ಸೌಮ್ಯ ರೆಡ್ಡಿ , ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಿ ರೂಪಾ ಮೌದ್ಗಿಲ್, ನಿಗಮದ ಡೈರೆಕ್ಟರ್ ದಯಾನಂದ್ ಉಪಸ್ಥಿತರಿದ್ದರು. ಜೆಪಿ ನಗರದ ಸಿಂಧೂರ ಕನ್ವೆನ್ಷನ್ ಹಾಲ್​​ನಲ್ಲಿ ಸೆಪ್ಟೆಂಬರ್ 17 ರಿಂದ ಆರಂಭಗೊಂಡಿರುವ ಈ ಪ್ರದರ್ಶನ 10 ದಿನಗಳ ಕಾಲ ನಡೆಯುತ್ತದೆ. ಕರಕುಶಲ ವಸ್ತು ಪ್ರದರ್ಶನದಲ್ಲಿ ಒಟ್ಟು 100 ಸ್ಟಾಲ್ ಇದ್ದು, ದೇಶದ ವಿವಿಧ ರಾಜ್ಯಗಳಿಂದ ಕರಕುಶಲ ಕರ್ಮಿಗಳು ಆಗಮಿಸಿದ್ದಾರೆ.

RELATED ARTICLES

Related Articles

TRENDING ARTICLES