Monday, December 23, 2024

ಚರಿತ್ರೆ ಸೃಷ್ಟಿಸಲಿರೋ ಗುರುಶಿಷ್ಯರಿಗೆ ಕ್ಲೀನ್ ಯು ಸರ್ಟಿಫಿಕೆಟ್

ಗುರುಶಿಷ್ಯರು ಬರೀ ಸಿನಿಮಾ ಅಲ್ಲ. ಅದೊಂದು ಹೋರಾಟದ ಬದುಕು. ಸ್ಫೋರ್ಟ್ಸ್ನ ಕಿಚ್ಚು ಹತ್ತಿಸೋ ದೃಶ್ಯಕಾವ್ಯ. ಹಳ್ಳಿ ಸೊಗಡಿನಲ್ಲಿ ಖೋ ಖೋ ಸೊಬಗನ್ನ ಬಿತ್ತರಿಸೋ ಕ್ರಾಂತಿಯ ಕಿಡಿ. ಗುರಿ & ಗುರುವಿನ ನಡುವಿನ ಅಂತರದ ಕಥಾನಕಕ್ಕೆ ಸೆನ್ಸಾರ್ ಬೋರ್ಡ್​ ಕ್ಲೀನ್ ಯು ಸರ್ಟಿಫಿಕೆಟ್ ನೀಡಿದೆ. ಇದು ಚಿತ್ರತಂಡದ ಉತ್ಸಾಹವನ್ನ ಡಬಲ್ ಮಾಡಿದೆ.

  • ಆಣೆ ಮಾಡಿ ಹೇಳ್ತಿದೆ ಇದು ಮಸ್ತ್ ಮನರಂಜನೆ ಕೊಡಲಿದೆ..!
  • ಶರಣ್ ಕರಿಯರ್​ಗೆ ಟ್ವಿಸ್ಟ್.. ತರುಣ್​ ಮೈಂಡ್​ಗೇಮ್ ಮಸ್ತ್
  • ಮಾಸ್ತಿ ಡೈಲಾಗ್ಸ್​ನಿಂದ ಖೋ ಖೋಗೆ ಮತ್ತೆ ಮರುಜೀವ..?!

ಸ್ಯಾಂಡಲ್​ವುಡ್ ಅಧ್ಯಕ್ಷ ಇನ್ಮೇಲೆ ಗುರಿ ಇಟ್ಕೊಂಡು ಬರೋ ಮಕ್ಕಳಿಗೆ ಗುರುವಾಗಲಿದ್ದಾರೆ. ಈಗಾಗ್ಲೇ ಹೊಸ ಪೀಳಿಗೆಯ ಕಲಾವಿದರ ತಂಡ ಕಟ್ಟಿರೋ ಇವ್ರು ದೇಸಿ ಕ್ರೀಡೆ ಖೋ ಖೋನಿಂದ ಗೇಮ್ ಶುಭಾರಂಭ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಅದಕ್ಕೆ ಶರಣ್ ಸಕ್ಸಸ್​ಫುಲ್ ಕರಿಯರ್​ನ ಭಾಗವಾಗಿರೋ ತರುಣ್ ಸುಧೀರ್ ಕೂಡ ಕೈ ಜೋಡಿಸಿದ್ದು, ಗುರುಶಿಷ್ಯರು ಚಿತ್ರವನ್ನು ಇದೇ ಶುಕ್ರವಾರ ಪ್ರೇಕ್ಷಕರ ಮುಂದೆ ತರ್ತಿದ್ದಾರೆ.

90ರ ಬ್ಯಾಕ್​ಡ್ರಾಪ್​ನಲ್ಲಿ ತಯಾರಾಗಿರೋ ಈ ಸಿನಿಮಾ ಪಕ್ಕಾ ಹಳ್ಳಿ ಸೊಗಡಿನ ಚಿತ್ರವಾಗಲಿದೆ. ಜಡೇಶ್ ಕೆ ಹಂಪಿ ನಿರ್ದೇಶನದ ಈ ಸಿನಿಮಾಗೆ ನಾಯಕನಟ ಶರಣ್ ಹಾಗೂ ಅವ್ರ ಕುಚಿಕು ತರುಣ್ ಸುಧೀರ್ ಅವ್ರೇ ಬಂಡವಾಳ ಹಾಕಿರೋದು ಇಂಟರೆಸ್ಟಿಂಗ್. ಈ ಬಾರಿ ಗೆಲ್ಲಲೇಬೇಕು ಅನ್ನೋ ಹಠಕ್ಕೆ ಬಿದ್ದ ಇವರುಗಳು, ಕಂಟೆಂಟ್ ಬೇಸ್ಡ್ ಸಿನಿಮಾನ ಕೈಗೆತ್ತಿಕೊಂಡು ಸಾಕಷ್ಟು ಎಫರ್ಟ್​ ಹಾಕಿ ಈ ಚಿತ್ರ ಮಾಡಿದ್ದಾರೆ. ಅದು ಸ್ಯಾಂಪಲ್ಸ್​​ನಿಂದ ಪ್ರೂವ್ ಕೂಡ ಆಗಿದೆ.

ಖೋ ಖೋ ಕ್ರೀಡೆಯನ್ನ ಎಲ್ರೂ ಮರೆತು, ಕ್ರಿಕೆಟ್​​ನ ನ್ಯಾಷನಲ್ ಗೇಮ್​ನಂತೆ ಆರಾಧಿಸ್ತಿರೋ ಇತ್ತೀಚಿನ ದಿನಗಳಲ್ಲಿ ಮತ್ತೆ ನಮ್ಮ ಮೂಲ ಕ್ರೀಡೆಗಳನ್ನ ನೆನಪಿಸೋ ಕಾರ್ಯ ಮಾಡ್ತಿದೆ. ಅಲ್ಲದೆ, ಶಾಲಾ ಮಕ್ಕಳಲ್ಲಿ ಇರಬೇಕಾದ ಆತ್ಮಸ್ಥೈರ್ಯ ಹಾಗೂ ಆಶ್ಮವಿಶ್ವಾಸ ಎಂಥದ್ದು ಅನ್ನೋದನ್ನ ಇದು ಸಾರಲಿದೆ. ಒಂದು ಶಾಲೆ ಹಾಗೂ ಊರನ್ನ ಉಳಿಸಿಕೊಳ್ಳೋಕೆ ನಡೆಯೋ ಹೋರಾಟದ ಪ್ರತೀಕವಾಗಿ ಶರಣ್​ರ ಗುರುಶಿಷ್ಯರು ಎಲ್ಲರನ್ನ ಕಾಡಲಿದೆ.

ಶರಣ್​ಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಬಣ್ಣ ಹಚ್ಚಿದ್ದು, ಇವ್ರ ಕೆಮಿಸ್ಟ್ರಿ ಈಗಾಗ್ಲೇ ಆಣೆ ಮಾಡಿ ಹೇಳುತೀನಿ ಸಾಂಗ್​ನಿಂದ ಜಗಜ್ಜಾಹಿರಾಗಿದೆ. ಹಿರಿಯನಟ ದತ್ತಣ್ಣ, ಅಪೂರ್ವ ಕಾಸರವಳ್ಳಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರಕ್ಕಿದೆ. ಅಜನೀಶ್ ಲೋಕನಾಥ್ ಸಂಗೀತ, ಅರೂರ್ ಸುಧಾಕರ್ ಶೆಟ್ಟಿ ಸಿನಿಮಾಟೋಗ್ರಫಿ, ಕೆಎಂ ಪ್ರಕಾಶ್ ಸಂಕಲನ ಈ ಸಿನಿಮಾಗಿದೆ.

ಗುರುಶಿಷ್ಯರು ಸಿನಿಮಾ ಇದೇ ಸೆಪ್ಟೆಂಬರ್ 23ಕ್ಕೆ ಥಿಯೇಟರ್​ಗಳಿಗೆ ಎಂಟ್ರಿ ಕೊಡ್ತಿದ್ದು, ಸೆನ್ಸಾರ್ ಬೋರ್ಡ್​ನಿಂದ ರೀಸೆಂ ಟ್ ಆಗಿ ಯಾವುದೇ ಕಟ್ಸ್ ಇಲ್ಲದೆ ಯು ಸರ್ಟಿಫಿಕೆಟ್ ಪಡೆದುಕೊಂಡಿದೆ. ಅಲ್ಲಿಗೆ ಈ ಚಿತ್ರ ಮಕ್ಕಳಿಂದ ಮುದುಕರವರೆಗೆ ಎಲ್ರೂ ನೋಡಬಹುದಾದ ಕಂಪ್ಲೀಟ್ ಫ್ಯಾಮಿಲಿ ಎಂಟರ್​ಟೈನರ್ ಅನ್ನೋದು ಖಾತರಿ ಆಗಿದೆ. ಸೋ ಈ ವಾರ ತೆರೆಮೇಲೆ ಗುರುಶಿಷ್ಯರ ಗೇಮ್​ನ ಮಿಸ್ ಮಾಡ್ಕೋಬೇಡಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES