Thursday, January 23, 2025

ಸ್ನೇಹಿತೆ ಮನೆಯಲ್ಲಿ ಸ್ನೇಹಿತೆಯಿಂದಲೇ ಖತರ್ನಾಕ್ ಕೆಲಸ.!

ಬೆಂಗಳೂರು: ಚಿನ್ನ, ಹಣ ನೋಡ್ಬಿಟ್ರೇ ಹೆಣನೇ ಬಾಯ್ಬಿಡುತ್ತೆ ಅಂತ ಹೇಳ್ತಾರೆ ಇನ್ನಾ, ಮನುಷ್ಯ ಯಾವು ಲೆಕ್ಕ ಬಿಡಿ. ಆದ್ರೇ ಮನುಷ್ಯನಿಗೆ ಸ್ವಲ್ಪ ಆದ್ರೂ ನಿಯತ್ತು, ಪ್ರಾಮಾಣಿಕತೆ ಅನ್ನೋದು ಇರ್ಬೇಕಲ್ಲ. ತಿಂದ ಮನೆಗೆ ಕನ್ನ ಹಾಕೋದು, ಹೆತ್ತ ತಾಯಿ ಹೊಟ್ಟೆ ಕುಯ್ಯೋದು ಎರಡೂ ಒಂದೇನೇ, ಮನುಷ್ಯ ಮನುಷ್ಯರನ್ನೇ ನಂಬಬೇಕು, ಬೆರಿಬೇಕು, ಆತ್ಮವಿಶ್ವಾಸದಿಂದ ಇರ್ಬೇಕು, ಆದ್ರೇ ಇದೇ ನಮ್ಮಗೆ ಮುಳ್ಳಾಗ್ಬಿಡುತ್ತೆ.

ಹೌದು, ಯಾಕಪ್ಪಾ ಅಂದ್ರೆ ವಿದ್ಯಾರಣ್ಯಪುರದಲ್ಲಿ ಸ್ನೇಹಿತೆ ಅಂತ ಮನೆಲಿ ಇರಿಸ್ಕೊಂಡಿದ್ದಕ್ಕೆ ಮನೆಲಿರೋ ಚಿನ್ನಾಭರಣಗಳನ್ನೆಲ್ಲಾ ದೋಚಿ ಬಿಟ್ಟಿದ್ದಾಳೆ. ವಿದ್ಯಾಪುರಣದಲ್ಲಿರೋ ಲಕ್ಷ್ಮೀ ಅನ್ನೋರಿಗೆ ಗೀತಾ ಎಂಬಾಕೆ ಗೆಳತಿ ಆಗಿರ್ತಾಳೆ. ಹೀಗೆ ಗೆಳತಿ ಗೀತಾ, ಲಕ್ಷ್ಮೀ ಅವ್ರ ಮನೆಗೆ ಒಡವೆ ಡಿಸೈನ್ ನೋಡ್ಕಂಡು ಹೋಗಣ ಅಂತ ಬಂದಿರ್ತಾಳೆ. ಹೇಗಿದ್ರು ಫ್ರೆಂಡ್ ಅಲ್ವಾ ಅಂತೇಳಿ ಲಕ್ಷ್ಮೀ ಕೂಡ ಗೀತಾಳಿಗೆ ಒಡವೆ ತೋರಿಸ್ತಾರೆ. ಅವತ್ತು ಆ ದಿನ ಗೀತಾ, ಲಕ್ಷ್ಮಿ ಮನೆಯಲ್ಲಿಯೇ ಉಳ್ಕೊಂಡು ಕತರ್ನಾಕ್ ಕೆಲಸ ಮಾಡಿದ್ದಾಳೆ.

ಲಕ್ಷ್ಮೀ ಅವರು ಮನೇಲಿದ್ದ ಒಡವೆ ಎಲ್ಲಾ ನೋಡಿದ್ದ ಗೀತಾ ತನ್ನ ಖತರ್ನಾಕ್ ಐಡಿಯಾ ಉಪಯೋಗಿಸಿ 8 ರಿಂದ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನೆಲಾ ಎತ್ಕೊಂಡು ಪರಾರಿ ಆಗ್ಬಿಡ್ತಾಳೆ. ಲಕ್ಷ್ಮಿ ಅವ್ರಿಗೆ ಡೌಟ್ ಬಂದು ಚೆಕ್ ಮಾಡಿದಾಗ ಮನೆಲಿದ್ದ ಒಡವೆ ಕಾಣೆ ಆಗಿರುತ್ತದೆ. ಇತ್ತ ಹೇಳ್ದೇ ಕೇಳ್ದೇ ಇದ್ದಕಿದ್ದಂತೆ ಪರಾರಿ ಆಗಿದ್ದ ಗೆಳತಿ ಗೀತಾಳ ಮೇಲೆ ಅನುಮಾನ ಬಂದು ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡ್ತಾರೆ. ದೂರಿನ ಆಧಾರದ ಮೇಲೆ ಇದೀಗ ಗೀತಾಳನ್ನ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸ್ತಿದ್ದಾರೆ.

ಬಂಧಿತ ಗೀತಾಳಿಂದ ವಿದ್ಯಾರಣ್ಯಪುರ ಪೊಲೀಸರು ಬರೋಬ್ಬರಿ 9.84 ಲಕ್ಷ ಮೌಲ್ಯದ ಚಿನ್ನಾಭರಣವನ್ನ ವಶಕ್ಕೆ ಪಡೆದಿದ್ದಾರೆ. ಇನ್ಮೇಲಾದ್ರು ಸ್ನೇಹಿತೆ, ಫ್ರೆಂಡ್​ಶಿಪ್​ ಅಂತ ಅತಿಯಾಗಿ ನಂಬೋಕ್ಕೆ ಹೋದ್ರೇ ನೀವು ಕೂಡ ಯಾಮಾರ್ಬೋದು. ಅದಕ್ಕೂ ಮುನ್ನ ಕೊಂಚ ಎಚ್ಚರವಾಗಿರಿ.

ಅಶ್ವಥ್ ಎಸ್. ಎನ್. ಕ್ರೈಂ ಬ್ಯೂರೋ ಪವರ್ ಟಿವಿ

RELATED ARTICLES

Related Articles

TRENDING ARTICLES