Wednesday, January 22, 2025

ಇಡಿ ಮುಂದೆ ಡಿ.ಕೆ ಶಿವಕುಮಾರ್​ ಹಾಜರು.!

ನವದೆಹಲಿ: ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಇಡಿ ವಿಚಾರಣೆಗೆ ಡಿ.ಕೆ ಶಿವಕುಮಾರ್​ ಹಾಜರು ಆಗಿದ್ದಾರೆ.

ಇಂದು ವಿಚಾರಣೆಗೆ ಹಾಜರಾಗುವಂತೆ ಡಿಕೆಶಿಗೆ ಇಡಿ ಸಮನ್ಸ್​ ನೀಡಿತ್ತು. ಈ ಹಿನ್ನಲೆಯಲ್ಲಿ ಇಂದು ದೆಹಲಿಯ ಇಡಿ ಕಚೇರಿಗೆ ಡಿಕೆ ಶಿವಕುಮಾರ್​ ಅವರು ವಿಚಾರಣೆಗೆ ಹಾಜರಾಗಿದ್ದಾರೆ.

ಆದಾಯಕ್ಕೂ ಮೀರಿ ಆಸ್ತಿ ಡಿಕೆಶಿ ಅವರು ಸಚಿವರಾಗಿದ್ದ ವೇಳೆಯಲ್ಲಿ ಗಳಿಸಿರುವ ಆದಾಯ, ಸಿಬಿಐ ಮುಂದೆ ಈಗಾಗಲೇ ಹೇಳಿಕೆ ದಾಖಲಿಸಿದ್ದಾರೆ. ಮನಿಲಾಂಡರಿಂಗ್‌ ಕಾಯ್ದೆ ಅಡಿ ಪ್ರಕರಣ ದಾಖಲಿಸಿರುವ ಇಡಿ, ಸಿಬಿಐ ದಾಖಲಿಸಿರುವ ಎಫ್​ಐಆರ್​ ಈಗ ಇ.ಡಿ ಯಲ್ಲಿ ಇಸಿಐಆರ್​ ಗಳಿಸಿದ ಆದಾಯಕ್ಕೂ ದಾಖಲೆಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಮತ್ತೊಮ್ಮೆ ಡಿಕೆಶಿಗೆ ಇಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.

2020 ಭ್ರಷ್ಟಚಾರ ನಿಗ್ರಹ ಕಾಯ್ದೆಯಡಿ ಡಿಕೆಶಿ ವಿರುದ್ಧ ಕೇಸ್ ಜಡಿದಿತ್ತು. 2 ವರ್ಷಗಳ ಬಳಿಕ ಪ್ರಕರಣಕ್ಕೆ ಇಡಿ ಮರುಜೀವ ನೀಡಿತ್ತು.  ಈ ಹಿಂದೆ ತಿಹಾರ್ ಜೈಲುವಾಸ ಡಿ. ಕೆ. ಶಿವಕುಮಾರ್ ಅನುಭವಿಸಿದ್ದರು.

RELATED ARTICLES

Related Articles

TRENDING ARTICLES