Monday, February 24, 2025

ಒತ್ತುವರಿ ಬಗ್ಗೆ ತನಿಖೆ ಮಾಡೇ ಮಾಡ್ತೇವೆ : ಸಿಎಂ ಬೊಮ್ಮಾಯಿ

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ  ಕೆರೆ ಒತ್ತುವರಿ ಬಗ್ಗೆ ತನಿಖೆ ಮಾಡುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ನಾವು ವೈಯಕ್ತಿಕವಾಗಿ ಯಾರ ಮೇಲೂ ಆರೋಪ ಮಾಡಲ್ಲ, ನೀವು ವೈಯಕ್ತಿಕವಾಗಿ ಈ ವಿಚಾರ ತೆಗೆದುಕೊಳ್ಳಬೇಡಿ, ಆದರೆ ಕೆರೆ ಮುಚ್ಚಿರುವುದು ಮಾತ್ರ ಸತ್ಯ, ಕೆರೆ ಮುಚ್ಚಿರುವ ಕುರಿತು ತನಿಖೆ ಮಾಡಲು ಸರಕಾರ ಸಿದ್ಧ, ತನಿಖೆ ಮಾಡೇ ಮಾಡ್ತೇವೆ. ತನಿಖೆಯ ಸ್ವರೂಪದ ಕುರಿತು ಮುಂದೆ ಹೇಳ್ತೇನೆ, ಕೆರೆಗಳನ್ನು ಯಾವ ರೀತಿ ಒತ್ತುವರಿ ಮಾಡಲಾಯ್ತು, ಕೆರೆಗಳನ್ನು ಹೇಗೆ ಮುಚ್ಚಲಾಯ್ತು, ಇದಕ್ಕೆ ಅನುಮತಿ ಕೊಟ್ಟವರು ಯಾರು…? ಎಲ್ಲದರ ಬಗ್ಗೆಯೂ ಸಹ ತನಿಖೆ ಮಾಡಿಸುತ್ತೇವೆ ಎಂದು ಸದನದಲ್ಲಿ ಸಿಎಂ ಘೋಷಣೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES