Thursday, December 19, 2024

ಟೀಂ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ.!

ನವದೆಹಲಿ; ಭಾರತದ ಪುರುಷ ಹಾಗೂ ಮಹಿಳಾ ಟಿ-20 ಕ್ರಿಕೆಟ್ ತಂಡಗಳಿಗೆ ಬಿಸಿಸಿಐ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ.

ಬಿಸಿಸಿಐ ಈ ಬಗ್ಗೆ ಮಾಹಿತಿ ನೀಡಿದ್ದು, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2022 ರ ಟಿ-20 ವಿಶ್ವಕಪ್‌ಗೆ ಒಂದು ತಿಂಗಳು ಮುಂಚಿತವಾಗಿ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಭಾರತದ ಟಿ-20 ಸರಣಿಗೆ ಇನ್ನೊಂದು ದಿನ ಬಾಕಿ ಇರೋವಾಗಲೇ ಬಿಸಿಸಿಐ ಟೀಂ ಇಂಡಿಯಾದ ಟಿ-20 ಜೆರ್ಸಿ ಬಿಡುಗಡೆ ಮಾಡಿದೆ.

ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳಿಗೆ ಸಮರ್ಪಿಸುತ್ತಿದ್ದು, ನೀಲಿ ಬಣ್ಣದ ಜರ್ಸಿ ನಿಮಗಾಗಿ ಪ್ರಸ್ತುತಪಡಿಸಿದ್ದೇವೆ ಎಂದು ಬಿಸಿಸಿಐ ಹೇಳಿದೆ.

ಭಾರತ T-20 ಜೆರ್ಸಿಯು ತಿಳಿ ನೀಲಿ ಬಣ್ಣದ ಟಿ-ಶರ್ಟ್ ಅನ್ನು ಇದ್ದು, ಜೊತೆಗೆ ನೀಲಿ ಬಣ್ಣದ ಗಾಢ ಬಣ್ಣದ ನೀಲಿ ತೋಳುಗಳನ್ನು ಹೊಂದಿದೆ. ತಿಳಿ ನೀಲಿ ಪ್ಯಾಂಟ್ ಇರೋದು ಬಿಸಿಸಿಐ ಬಿಡುಗಡೆ ಮಾಡಿದ ಜೆರ್ಸಿಯಲ್ಲಿ ಕಾಣಬಹುದು.

RELATED ARTICLES

Related Articles

TRENDING ARTICLES