Wednesday, January 22, 2025

ವಿಪ್ರೊ ಕಾಂಪೌಂಡ್ ತೆರವು ನಿಲ್ಲಿಸಿದ ಬಿಬಿಎಂಪಿ

ಬೆಂಗಳೂರು: ಬೆಂಗಳೂರಿನ ವಿಪ್ರೊ ಕಛೇರಿ ಒತ್ತುವರಿ ಮಾಡಿಕೊಂಡಿರುವಂತಹ ಕಾಂಪೌಂಡ್ ತೆರವು ಕಾರ್ಯಾಚರಣೆ ಇಂದು ನಡೆಯಿತು. ಆದರೆ ಒತ್ತುವರೆ ತೆರವು ನಡೆದ ಕೆಲವೇ ಕ್ಷಣಗಳಲ್ಲಿ ಬಿಬಿಎಂಪಿ ಅಧಿಕಾರಿಗಳು ನಿಲ್ಲಿಸಿದ್ದಾರೆ.

ಸುಮಾರು 10 ಅಡಿಯಷ್ಟು ಸಾವಳಕೆರೆಗೆ ಸಂಪರ್ಕ‌ ಕಲ್ಪಿಸುವ ರಾಜಕಾಲುವೆ ಒತ್ತುವರಿ ವಿಪ್ರೋ ಮಾಡಿಕೊಂಡಿತ್ತು. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಮಾರ್ಕ್​ ಮಾಡಿ ತೆರವಿಗೆ ಮುಂದಾಗಿದ್ದರು. ಆದರೆ, ತೆರವು ಕಾರ್ಯಾಚರಣೆ ನಡೆದ ಕೆಲವೇ ಕ್ಷಣಗಳಲ್ಲಿ ವಿಪ್ರೋ ಒತ್ತುವರಿ ಕಾರ್ಯ ನಿಲ್ಲಿಸಿದ್ದಾರೆ. ‘

ವಿಪ್ರೋ ಕಂಪೌಂಡ್ ವಾಲ್ ಗೆ 2.4 ಮೀಟರ್ ಮಾರ್ಕ್ ಮಾಡಿದ್ದ ಬಿಬಿಎಂಪಿ, ಸ್ವಲ್ಪ ಒಡೆದು ಹಾಕಲಾಯಿತು. ತೆರವು ನಡೆಯುತ್ತಿರುವ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳಿಗೆ ಒಂದೇ ಒಂದು ಪೋನ್ ಕಾಲ್​ ಬಂದ ಹಿನ್ನಲೆಯಲ್ಲಿ ರಾಜಕಾಲುವೆ ಒತ್ತುವರಿ ಕಾರ್ಯ ಇಂದು ಸ್ಥಗಿತಗೊಂಡಿತು.

RELATED ARTICLES

Related Articles

TRENDING ARTICLES