Monday, December 23, 2024

ಆಟೊ ಚಾಲಕನಿಗೆ ಒಲಿದ ₹ 25 ಕೋಟಿ ಬಹುಮಾನ

ಕೇರಳ ಸರ್ಕಾರದ ಓಣಂ ಬಂಪರ್‌ ಲಾಟರಿ ಟಿಕೆಟ್‌ ಖರೀದಿಸಿದ್ದ ಆಟೊ ಚಾಲಕ ಅನೂಪ್‌ ಪ್ರಥಮ ಬಹುಮಾನ ₹ 25 ಕೋಟಿ ಗೆದ್ದು ಬೀಗಿದ್ದಾರೆ.

ಶನಿವಾರ ಅವರು ಲಾಟರಿ ಟಿಕೆಟ್‌ ಖರೀದಿಸಿದ್ದರು. ತೆರಿಗೆ ಹಾಗೂ ಕಮಿಷನ್‌ ಕಳೆದು ಅವರಿಗೆ ₹ 15.75 ಕೋಟಿ ಸಿಗಲಿದೆ. ಈ ಬಂಪರ್‌ ಬಹುಮಾನ ತಂದಿರುವ ಟಿಕೆಟ್ಅನ್ನು ಮಾರಾಟ ಮಾಡಿರುವ ತಿರುವನಂತಪುರದ ಭಗವತಿ ಏಜೆನ್ಸಿಗೆ ಕಮಿಷನ್‌ ರೂಪದಲ್ಲಿ ₹ 2.5 ಕೋಟಿ ಸಿಗಲಿದೆ. ಅನೂಪ್‌ ಅವರು ಬಾಣಸಿಗರೂ ಆಗಿದ್ದು, ಬಾಣಸಿಗನಾಗಿ ಒಳ್ಳೆಯ ಉದ್ಯೋಗ ಅರಸಿ ಮಲೇಷ್ಯಾಕ್ಕೆ ಹೋಗಲು ಯೋಜಿಸಿದ್ದರು.

ಇನ್ನು, ಬೃಹತ್‌ ಮೊತ್ತದ ಲಾಟರಿ ಬಹುಮಾನ ಸಿಕ್ಕಿರುವ ಕಾರಣ ವಿದೇಶಕ್ಕೆ ಹಾರುವ ಯೋಚನೆಯನ್ನು ಕೈಬಿಟ್ಟಿದ್ದಾರೆ. ಈ ವರ್ಷವಷ್ಟೇ ಓಣಂ ಲಾಟರಿಯ ಬಂಪರ್‌ ಬಹುಮಾನದ ಮೊತ್ತವನ್ನು ₹ 25 ಕೋಟಿಗೆ ಹೆಚ್ಚಿಸಲಾಗಿದೆ. ಪ್ರತಿ ಟಿಕೆಟ್‌ ದರ ₹ 500 ಇದ್ದು, ದಾಖಲೆಯ 66.5 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದವು. ಕಳೆದ ವರ್ಷದ ಓಣಂ ಬಂಪರ್‌ ಲಾಟರಿಯ ಬಹುಮಾನದ ಮೊತ್ತ ₹ 12 ಕೋಟಿ ಇತ್ತು. ಆ ಬಹುಮಾನ ಸಹ ಕೊಚ್ಚಿಯ ಆಟೊ ಚಾಲಕ ಜಯಪಾಲನ್‌ ಎಂಬುವವರ ಪಾಲಾಗಿತ್ತು.

RELATED ARTICLES

Related Articles

TRENDING ARTICLES