Thursday, January 23, 2025

ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ

ಹಾಸನ: ಪತ್ನಿಯನ್ನು ಕೊಂದಿದ್ದ ಪತಿಯೂ ಆತ್ಮಹತ್ಯೆ ಮಾಡಿದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದ ಸಮೀಪ ನಡೆದಿದೆ.

ಪತ್ನಿಯನ್ನ ಕೊಂದಿದ್ದ ಆರೋಪಿಯ ಮೃತದೇಹ ನೇಣು ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಚಂದ್ರಯ್ಯ (55 ) ಸಾವನ್ನಪ್ಪಿರುವ ಕೊಲೆ ಆರೋಪಿ. ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಚಂದ್ರಯ್ಯ ಮೃತದೇಹ ಸಪ್ಟೆಂಬರ್ 2 ರಂದು ತನ್ನ ಪತ್ನಿ ಇಂದ್ರಮ್ಮನ್ನ ಕೊಚ್ಚಿಕೊಂದಿದ್ದಾನೆ.

ಇನ್ನು, ಕೆಲಸಕ್ಕೆ ಹೋಗೋ ವೇಳೆ ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್‌ ಆಗಿದ್ದ ಆರೋಪಿ, ಅರೆಹಳ್ಳಿ ಪೊಲೀಸರು ಆರೋಪಿಗಾಗಿ‌ ಹುಟುಕಾಟ ನಡೆಸುತ್ತಿದ್ದರು. ಈ ನಡುವೆ ನೇಣುಬಿಗಿದ ಸ್ಥಿತಿಯಲ್ಲಿ ಚಂದ್ರಯ್ಯ ಮೃತದೇಹ ಪತ್ತೆಯಾಗಿದೆ. ಕೊಲೆ‌ ಮಾಡಿದ ಸ್ವಲ್ಪ ದೂರಲ್ಲಿಯೇ ಚಂದ್ರಯ್ಯ ಮೃತದೇಹ ಪತ್ತೆಯಾಗಿದ್ದು, ಅರೆಹಳ್ಳಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES