Wednesday, January 22, 2025

ಸಾಂಗ್ ಜೊತೆ ತ್ರಿಬಲ್ ರೈಡಿಂಗ್ ಕ್ಲೈಮ್ಯಾಕ್ಸ್ ಬಿಚ್ಚಿಟ್ಟ ಗಣೇಶ್

ಗಾಳಿಪಟ ಹಾರಿಸಿದ ಗಣಿ, ಗ್ಲಾಮರ್ ಡಾಲ್ಸ್ ಜೊತೆ ತ್ರಿಬಲ್ ರೈಡಿಂಗ್ ಹೊರಟು ನಿಂತಿದ್ದಾರೆ. ಱಪರ್ ಚಂದನ್ ಶೆಟ್ಟಿ- ಮಂಗ್ಲಿ  ಬ್ಯಾಂಡ್ ಬಜಾಯಿಸ್ತಿರೋ ಆ ಕಲರ್​ಫುಲ್ ಜರ್ನಿ ಸಖತ್ ವಂಡರ್​ಫುಲ್ ಆಗಿದೆ. ಅದರೊಟ್ಟಿಗೆ ಕ್ಲೈಮ್ಯಾಕ್ಸ್ ಸೀಕ್ರೆಟ್ ಬಿಚ್ಚಿಟ್ಟ ಗೋಲ್ಡನ್ ಸ್ಟಾರ್ ಗೋಲ್ಡನ್ ಮಾತನ್ನ ಒಮ್ಮೆ ಕೇಳಿಬಿಡಿ.

  • ಕಲರ್​ಫುಲ್ ಸೆಟ್.. ವಂಡರ್​ಫುಲ್ ಕಂಠ.. ಮಸ್ತ್ ಡ್ಯಾನ್ಸ್
  • ಅಪ್ಪು ಜಾಕಿ ಚಿತ್ರದ ಬೆಂಕಿ ಫೈಟ್ ನೆನಪಿಸೋ ಫೈಯರ್ ಫೈಟ್
  • ತ್ರಿವಳಿ ಬ್ಯೂಟಿ ಲವ್ ರೈಡ್​ನಿಂದ ಗೋಲ್ಡನ್ ಡೇಸ್ ರಿಟರ್ನ್ಸ್

ಗೋಲ್ಡನ್ ಸ್ಟಾರ್ ಗಣೇಶ್​ಗೆ ಮತ್ತೆ ಮುರುಕಳಿಸುತ್ತಿವೆ ಗೋಲ್ಡನ್ ಡೇಸ್. ಯೆಸ್.. ಸಾಲು ಸಾಲು ಸಿನಿಮಾಗಳ ಸೋಲಿಂದ ಕಂಗಾಲಾಗಿದ್ದ ಮಳೆ ಹುಡ್ಗನಿಗೆ ಗಾಳಿಪಟ-2 ನಿರೀಕ್ಷೆಗೂ ಮೀರಿ ದೊಡ್ಡ ಬ್ರೇಕ್ ನೀಡಿತು. ಇದು ಅವ್ರ ಸಿನಿಮೋತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಅಲ್ಲದೆ, ಕ್ಯೂನಲ್ಲಿರೋ ಅವ್ರ ನೆಕ್ಟ್ಸ್ ಸಿನಿಮಾಗಳಿಗೆ ಸಿಕ್ಕಾಪಟ್ಟೆ ಪ್ಲಸ್ ಆಗಿದೆ.

ಸದ್ಯ ತ್ರಿಬಲ್ ರೈಡಿಂಗ್ ಟಾಕ್ ಆಫ್ ದಿ ಟೌನ್ ಆಗಿದೆ. ಕಾರಣ ಯಟ್ಟ ಯಟ್ಟ ಯಟ್ಟ ಸಾಂಗ್ ಟಾಪ್​ನಲ್ಲಿದೆ. ಯೆಸ್.. ರೀಸೆಂಟ್ ಆಗಿ ಈ ಹಾಡನ್ನ ಖಾಸಗಿ ಹೋಟೆಲ್​ನಲ್ಲಿ ಚಿತ್ರತಂಡ ಅಫಿಶಿಯಲಿ ಲಾಂಚ್ ಮಾಡಿತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿತ್ರಿಸಿರೋ ಈ ಹಾಡಿಗೆ ಕಲರ್​ಫುಲ್ ಸೆಟ್ ವರದಾನವಾಗಿದೆ. ಅಲ್ಲದೆ, ಸಾಯಿ ಕಾರ್ತಿಕ್ ಟ್ಯೂನ್, ಮಂಗ್ಲಿ- ಱಪರ್ ಚಂದನ್ ಶೆಟ್ಟಿ ಕಂಠ ಮತ್ತಷ್ಟು ರಂಗು ತಂದಿದೆ.

ಔಟ್ ಅಂಡ್ ಔಟ್ ಡ್ಯಾನ್ಸಿಂಗ್ ನಂಬರ್ ಆಗಿರೋ ತ್ರಿಬಲ್ ರೈಡಿಂಗ್ ಸಾಂಗ್​ಗೆ ಕನ್ನಡ ಱಪರ್ ಚಂದನ್ ಶೆಟ್ಟಿ ಪದಗಳನ್ನ ಪೋಣಿಸೋದ್ರ ಜೊತೆ ಅದ್ಭುತವಾಗಿ ಹಾಡಿದ್ದಾರೆ. ಇನ್ನು ಮುರಳಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಎರಡು ದಿನ ಪ್ರಾಕ್ಟೀಸ್ ಮಾಡಿ, ಮೇಘ ಶೆಟ್ಟಿ, ಅದಿತಿ ಪ್ರಭುದೇವ ಹಾಗೂ ರಚನಾ ಇಂದರ್ ಜೊತೆ ಜಬರ್ದಸ್ತ್ ಸ್ಟೆಪ್ ಹಾಕಿದ್ದಾರೆ ಗಣಿ.

ಮಹೇಶ್ ಗೌಡ ನಿರ್ದೇಶನದ ಪಕ್ಕಾ ಕಮರ್ಷಿಯಲ್ ಎಂಟರ್​ಟೈನರ್ ಇದಾಗಿದ್ದು, ಈಗಾಗ್ಲೇ ಟೀಸರ್ ಭರ್ಜರಿ ರೆಸ್ಪಾನ್ಸ್ ಪಡೆದಿದೆ. ಕೃಪಾಲು ಎಂಟರ್​ಟೈನ್ಮೆಂಟ್ಸ್ ಬ್ಯಾನರ್​ನಡಿ ರಾಮ್​ಗೋಪಾಲ್ ನಿರ್ಮಾಣದ ಈ ಸಿನಿಮಾ ಗಣಿ ಕರಿಯರ್​ನ ಮತ್ತೊಂದು ಹಿಟ್ ಸಿನಿಮಾ ಆಗೋದ್ರಲ್ಲಿ ಡೌಟೇ ಇಲ್ಲ.

ಇನ್ನು ಡಿಫರೆಂಟ್ ಡ್ಯಾನಿ ಈ ಚಿತ್ರದಲ್ಲಿ ಎರಡು ಫೈಟ್ಸ್ ಹಾಗೂ ಒಂದು ಬೈಕ್ ಚೇಸಿಂಗ್ ಸೀನ್​ನ ಕಂಪೋಸ್ ಮಾಡಿರೋದು ಇಂಟರೆಸ್ಟಿಂಗ್. ಪುನೀತ್ ರಾಜ್​ಕುಮಾರ್​ರ ಜಾಕಿ ಚಿತ್ರದ ಬೆಂಕಿ ಫೈಟ್​ನ ನೆನಪಿಸೋ ಅದು ಸಖತ್ ಥ್ರಿಲ್ ಕೊಡಲಿದೆಯಂತೆ.

ಇವೆಲ್ಲದರ ಹೊರತಾಗಿ ಗಣಿ ಮಾತಾಡ್ತಾ ತ್ರಿಬಲ್ ರೈಡಿಂಗ್ ಕ್ಲೈಮ್ಯಾಕ್ಸ್ ಬಗ್ಗೆ ಒಂದು ಹಿಂಟ್ ನೀಡಿದ್ರು. ಇದರಲ್ಲೇ ಗೊತ್ತಾಗ್ತಿದೆ ಸಿನಿಮಾ ಎಷ್ಟು ಕಲರ್​ಫುಲ್ & ಯೂತ್​ಫುಲ್ ಆಗಿರಲಿದೆ ಅನ್ನೋದು.

ಒಟ್ಟಾರೆ ತ್ರಿಬಲ್ ರೈಡಿಂಗ್ ಸಿನಿಮಾ ಗೋಲ್ಡನ್ ಡೇಸ್​ನ ಮತ್ತೆ ಗಣಿಗೆ ವಾಪಸ್ ತಂದುಕೊಡೋದ್ರಲ್ಲಿ ಸಂದೇಹವೇ ಇಲ್ಲ. ಸದ್ಯದಲ್ಲೇ ರಿಲೀಸ್ ಡೇಟ್ ಜೊತೆ ಟ್ರೈಲರ್ ಕೂಡ ರಿಲೀಸ್ ಮಾಡಲಿದೆ ಚಿತ್ರತಂಡ. ಅದೇನೇ ಇರಲಿ, ಡ್ಯಾನ್ಸ್​ಪ್ರಿಯರಿಗೊಂದು ಬೊಂಬಾಟ್ ಡ್ಯಾನ್ಸಿಂಗ್ ನಂಬರ್ ಸಿಕ್ಕಿದ್ದು, ಚಿತ್ರಕ್ಕಿದು ಟ್ರಂಪ್​ಕಾರ್ಡ್​ ಆಗಲಿದೆ ಅಂದ್ರೆ ತಪ್ಪಾಗಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES