Sunday, December 22, 2024

ಬಿಜೆಪಿ ಸರ್ಕಾರದ 40% ಕಮೀಷನ್ ದೇಶದೆಲ್ಲೆಡೆ ಪಸರಿಸಿದೆ.!

ಬೆಂಗಳೂರು: ರಾಜ್ಯ ಸರ್ಕಾರದ 40 ಕಮೀಷನ್​ ಕರ್ನಾಟಕದಲ್ಲಿ ಮಾತ್ರದಲ್ಲಿ ಅಲ್ಲದೇ ದೇಶದೆಲ್ಲೆಡೆ ಪಸರಿಸಿದೆ ಎಂದು ರಾಜ್ಯ ಕಾಂಗ್ರೆಸ್​ ಆರೋಪಿಸಿದೆ.

ಬಿಜೆಪಿ ಸರ್ಕಾರದಿಂದ ಕರ್ನಾಟಕಕ್ಕೆ ಇದ್ದ ಪ್ರಜ್ಞಾವಂತರ ನಾಡು, ಪ್ರಗತಿಪರ ರಾಜ್ಯ ಎಂಬ ಹೆಗ್ಗಳಿಕೆ ಕಳೆದು ಭ್ರಷ್ಟಾಚಾರದ ರಾಜ್ಯ ಎಂಬ ಹಣೆಪಟ್ಟಿ ಬಂದಿದ್ದು ದುರದೃಷ್ಟಕರ ಎಂದಿದೆ.

ಭ್ರಷ್ಟಾಚಾರದ ಮಹಾಪೋಷಕರಾದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ತೆಲಂಗಾಣ ಪ್ರವಾಸಕ್ಕೆ ಹೋಗಿದ್ದಾಗ ಅಲ್ಲಿನ ಜನರು 40% ಸರ್ಕಾರವೆಂದು ಬೋರ್ಡ್‌ಗಳನ್ನು ಹಾಕಿದ್ದು, ವಿರೋಧಿಸುವ ದಮ್ ಕೂಡ ರಾಜ್ಯ ಸರ್ಕಾರಕ್ಕೆ ಇಲ್ಲದಾಗಿದೆ ಎಂದು ಕಾಂಗ್ರೆಸ್​ ವಾಗ್ದಾಳಿ ನಡೆಸಿದೆ.

ರಾಜ್ಯ ಸರ್ಕಾರದ 40 ಕಮೀಷನ್ ದೊಡ್ಡ ಪಿಡುಗಾಗಿ ಪರಿಣಮಿಸಿದೆ, ಸಚಿವರು, ಅಧಿಕಾರಿಗಳು, ನೌಕರರು ಅಷ್ಟೇ ಅಲ್ಲ, ಸರ್ಕಾರಿ ಕಚೇರಿಗಳ ಕುರ್ಚಿ ಮೇಜುಗಳೂ ಲಂಚ ಕೇಳುತ್ತಿವೆ ಎಂದಿದೆ.

RELATED ARTICLES

Related Articles

TRENDING ARTICLES